ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆ ಕುರಿತಾದ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಮೆಟ್ರೋ, ಹಾಲು, ಪೆಟ್ರೋಲ್, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದೀಗ, ದರ ಏರಿಕೆ ಪಟ್ಟಿಗೆ ನೀರು ಕೂಡ ಸೇರಿಕೊಂಡಿದ್ದು, ಬೆಂಗಳೂರಿನಲ್ಲಿ ಜಲಮಂಡಳಿಯಿಂದ ನೀರಿನ ಸಂಪರ್ಕ ಹೊಂದಿರುವವರಿಗೆ ದರ ಏರಿಕೆಯ ಬಿಸಿ ತಟ್ಟಲಿದೆ.
ಬೇಸಿಗೆಯ ಕಾರಣದಿಂದಾಗಿ ಬೆಂಗಳೂರಿನಲ್ಲಿ ನೀರಿನ ಅಭಾವ ಸೃಷ್ಠಿಯಾಗಿದೆ. ಮಿತವಾಗಿ ನೀರು ಬಳಸುವಂತೆ ಸೂಚನೆಗಳನ್ನು ನೀಡಲಾಗಿದೆ. ಇದೀಗ, ನೀರಿನ ಬೆಲೆ ಏರಿಕೆಯಾಗಿದೆ. ಪರಿಣಾಮವಾಗಿ, ಗೃಹ ಬಳಕೆದಾರರಿಗೆ ಮಾಸಿಕ 20-30 ರೂ. ಹಾಗೂ ವಾಣಿಜ್ಯ ಬಳಕೆದಾರರಿಗೆ ಗರಿಷ್ಠ 60 ರೂ.ವರೆಗೆ ಹೆಚ್ಚುವರಿ ಹೊರೆಯಾಗಲಿದೆ.
ಗೃಹ ಬಳಕೆಗಾಗಿ ಸರಬರಾಜು ಆಗುವ ನೀರಿಗೆ ಪ್ರತಿ ಲೀಟರ್ಗೆ ಒಂದು ಪೈಕಿ ಏರಿಕೆ ಮಾಡಲಾಗಿದೆ. ಸ್ಲ್ಯಾಬ್ಗಳು ಮತ್ತು ವಾಣಿಜ್ಯ ಬಳಕೆಗಾಗಿ ಬಳಸುವ ನೀರಿನ ಮೇಲೆ ಪ್ರತಿ ಲೀಟರ್ಗೆ 15ರಿಂದ 80 ಪೈಸೆ ವರೆಗೆ ಬೆಲೆ ಏರಿಕೆ ಮಾಡಲಾಗಿದೆ ಎಂದು ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ದರ ಪಟ್ಟಿ;
- ಗೃಹ ಬಳಕೆಗಾಗಿ ಸಂಪರ್ಕ – ಲೀಟರ್ಗೆ 1 ಪೈಕಿ
- 0-8 ಸಾವಿರ ಲೀಟರ್ ಪ್ರಮಾಣದ ಸ್ಲ್ಯಾಬ್ – ಲೀಟರ್ಗೆ 15 ಪೈಸೆ
- 8-25 ಸಾವಿರ ಲೀಟರ್ ಪ್ರಮಾಣದ ಸ್ಲ್ಯಾಬ್ – ಲೀಟರ್ಗೆ 40 ಪೈಸೆ
- 25 ಸಾವಿರ ಲೀಟರ್ಗಿಂತ ಹೆಚ್ಚು ಬಳಕೆ – 80 ಪೈಸೆ
- 50 ಸಾವಿರದಿಂದ 1 ಲಕ್ಷ ಲೀಟರ್ ಬಳಕೆ – 1 ರೂ.
ಹೊಸ ದರವು ಏಪ್ರಿಲ್ 1ರಿಂದಲೇ ಅನ್ವಯ ಆಗಲಿದೆ ಎಂದು ಬಿಡಬ್ಲ್ಯೂಎಸ್ಎಸ್ಬಿ ಹೇಳಿದೆ.