- ಕುಖ್ಯಾತ ರೌಡಿಶೀಟರ್ ಮಹೇಶ್‌ನ ಸಹಚರರ ಬಂಧನ
- ಬಂಧಿತರಿಂದ ಕಾರು ಹಾಗೂ ಮಾರಕಾಸ್ತ್ರಗಳ ಜಪ್ತಿ
ಸಾರ್ವಜನಿಕರಿಂದ ದರೋಡೆ ಮಾಡಲು ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕಿ ಕುಳಿದಿದ್ದ ಐವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಈ ಐವರು ಆರೋಪಿಗಳು ಕುಖ್ಯಾತ ರೌಡಿಶೀಟರ್ ಮಹೇಶ್ ಅಲಿಯಾಸ್ ಸಿದ್ದಾಪುರ ಮಹೇಶ್‌ನ ಸಹಚರರಾಗಿದ್ದಾರೆ. ಬಂಧಿತರಿಂದ ಫಾರ್ಚೂನರ್ ಕಾರು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.
ಈ ಗ್ಯಾಂಗ್ ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕರ ಸುಲಿಗೆ ಮಾಡಲು ಹೊಂಚು ಹಾಕಿ ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಪಕ್ಕದ ಬಿಟಿಎಸ್ ಸರ್ವಿಸ್ ರಸ್ತೆಯಲ್ಲಿ ಇದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಗ್ಯಾಂಗ್ ಕಳೆದ ವರ್ಷ ಬನಶಂಕರಿ ಮೆಟ್ರೋ ರೈಲು ನಿಲ್ದಾಣದ ಬಳಿ ರೌಡಿ ಶೀಟರ್ ಮದನ್ ಅಲಿಯಾಸ್ ಪಿಟೀಲ್‌ನನ್ನು ಗ್ಯಾಂಗ್ ಹತ್ಯೆ ಮಾಡಿತ್ತು. ವಿಲ್ಸನ್ ಗಾರ್ಡನ್ ನಾಗನ ವಿರೋಧದ ಗ್ಯಾಂಗ್ ಇದಾಗಿದೆ. ಆರೋಪಿಗಳು ಸಾರ್ವಜನಿಕರ ಸುಲಿಗೆ ಮಾಡುವ ಜತೆಗೆ ನಾಗನ ಮೇಲೆ ದಾಳಿ ಮಾಡಲು ಸಂಚು ರೂಪಿಸಿತ್ತು.
ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕುಡಿದ ಮತ್ತಿನಲ್ಲಿ ಕಾರು ಚಾಲನೆ; ಡೆಲಿವರಿ ಬಾಯ್ ಸಾವು
ಸಿಸಿಬಿ ಪೊಲೀಸರು ಕಳೆದ 6-7 ತಿಂಗಳ ಹಿಂದೆ ದಾಳಿ ನಡೆಸಿ ರೌಡಿಗಳನ್ನು ಬಂಧಿಸಿದ್ದರು. ಈ ವೇಳೆ ಸಿದ್ದಾಪುರ ಮಹೇಶ್ ಪರಾರಿಯಾಗಿದ್ದನು. ಮತ್ತೆ ಆತನನ್ನು ಬಂಧಿಸಲಾಗಿತ್ತು. ಕೆಲ ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದನು.