‘ಕೊಟ್ಟ ಮಾತು ಉಳಿಸಿಕೊಳ್ಳಿ’; ಗೌರವಧನ ಹೆಚ್ಚಳಕ್ಕೆ ಆಶಾ ಕಾರ್ಯಕರ್ತೆಯರ ಆಗ್ರಹ

Date:

Advertisements

ಆರೋಗ್ಯ ಇಲಾಖೆಯ ಆಧಾರ ಸ್ತಂಭದಂತೆ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತರು ಜನರಿಗೆ ಆರೋಗ್ಯ ಸೇವೆಗಳನ್ನು ತಲುಪಿಸುವ ಮಹತ್ವದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕದಲ್ಲಿ ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ಅವರು ತಮಗೆ ನೀಡಲಾಗುತ್ತಿರುವ ಗೌರವಧನವನ್ನು ಹೆಚ್ಚಿಸಬೇಕೆಂದು ಕಳೆದ 8 ವರ್ಷಗಳಿಂದ ಹೋರಾಟ ಮಾಡುತ್ತಲೇ ಇದ್ದಾರೆ. ಆದರೆ, ಸರ್ಕಾರ ಆಶ್ವಾಸನೆ ನೀಡುವುದರೊಂದಿಗೆ ವಂಚಿಸುತ್ತಲೇ ಇದೆ.

ಆಶಾ ಕಾರ್ಯಕರ್ತೆಯರ ಹೋರಾಟ, ಹಕ್ಕೊತ್ತಾಯ ಪತ್ರಗಳ ಸಲ್ಲಿಕೆಯ ಹೊರತಾಗಿಯೂ ಹಲವಾರು ವರ್ಷಗಳಿಂದ ಭರವಸೆಗಳು ಈಡೇರಿಲ್ಲ. ಹಲವು ಸುತ್ತಿನ ಸಭೆಗಳಾದರೂ ನಿರ್ದಿಷ್ಟ ವೇತನದ ವಿಚಾರಕ್ಕೆ ಖಚಿತ ಉತ್ತರ ಸಿಕ್ಕಿಲ್ಲ. ಸರ್ಕಾರ ಹುಸಿ ಭರವಸೆಗಳಿಂದ ಬೇಸತ್ತಿರುವ ಆಶಾ ಕಾರ್ಯಕರ್ತೆಯರು ಗೌರವಧನವನ್ನು 15,000 ರೂ.ಗಳಿಗೆ ನಿಗದಿ ಮಾಡಲೇಬೇಕೆಂದು ಪಟ್ಟು ಹಿಡಿದ್ದಾರೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ಆಶಾ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ಬಡಜನರ ಮನೆ ಮನೆಗೆ ತೆರಳಿ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಳೆದ 15 ವರ್ಷಗಳಿಂದ ತಾಯಿ ಹಾಗೂ ಶಿಶುಗಳ ಮರಣ ಪ್ರಮಾಣ ತಗ್ಗಿಲ್ಲ, ನಾನಾ ಸಾಂಕ್ರಾಮಿಕ ರೋಗಗಳಿಂದ ಜನರು ಹೊರಗುಳಿಯುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಬಹುದೊಡ್ಡದು. ಕೊರೊನಾ ಸೋಂಕಿನ ಆಕ್ರಮಣದ ಸಮಯದಲ್ಲಿಯೂ ಕೂಡ ಆಶಾ ಕಾರ್ಯಕರ್ತೆಯರು ದಿಟ್ಟತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಸರ್ಕಾರ ಆಶಾ ಕಾರ್ಯಕರ್ತೆರಿಯರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕನಿಷ್ಟ ಅವರ ಸೇವೆಗೆ ತಕ್ಕಂತೆ ಪ್ರೋತ್ಸಾಹಧನವನ್ನಾದರೂ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದೆ.

Advertisements

ಕರ್ನಾಟಕದಲ್ಲಿ ಆಶಾ ಕಾರ್ಯಕರ್ತೆಯರು ‘ಆಶಾ ನಿಧಿ’ ಎಂಬ ವಿಶೇಷ ಪೋರ್ಟಲ್‌ ಮೂಲಕ ಆನ್‌ಲೈನ್‌ ಎಂಟ್ರಿ ಮಾಡಿಸಿದ್ದರೂ ಕೂಡ ಕಳೆದ 9 ವರ್ಷಗಳಿಂದ ಸರಿಯಾದ ಸಮಯಕ್ಕೆ ಪ್ರೋತ್ಸಾಹಧನ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಸಹಾಯಧನ ಪಡೆಯಲು ಇಂದಿಗೂ ಪರದಾಡುತ್ತಿದ್ದಾರೆ. ಇದೇ ಸಮಸ್ಯೆಯ ಪರಿಹಾರಕ್ಕೂ ಹೋರಾಟ ಮಾಡುವ ದುಸ್ಥಿತಿ ಆಶಾ ಕಾರ್ಯಕರ್ತೆಯರದ್ದು.

ಪ್ರೋತ್ಸಾಹ ಧನ, ಗೌರವಧನ, ಆಶಾ ಕಾರ್ಯಕರ್ತೆ, Incentive money, honorarium, ASHA worker,

ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರಿಗೆ ಪಾವತಿಸಬೇಕಾದ ಮೂರು ತಿಂಗಳ ಗೌರವ ಧನ ಬಾಕಿ ಉಳಿದಿದೆ. ಜನ ಸಮುದಾಯ ಮತ್ತು ಆರೋಗ್ಯ ವ್ಯವಸ್ಥೆಯ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸಮಯಕ್ಕೆ ಸರಿಯಾಗಿ ಗೌರವ ಧನ ಪಾವತಿಸಿದರೆ, ತೀರಾ ಕಡಿಮೆ ಇರುವ ಗೌರವ ಧನವನ್ನು ಹೆಚ್ಚಿಸದೆ ಸರ್ಕಾರ ನಿರಂತರವಾಗಿ ಅವರನ್ನು ವಂಚಿಸುತ್ತಿದೆ.

ಅಲ್ಲದೆ, ಆಶಾ ಕಾರ್ಯಕರ್ತೆಯರಿಂದ ಒತ್ತಾಯಪೂರ್ವಕವಾಗಿ ಮೊಬೈಲ್ ಆಧಾರಿತ ಹಲವಾರು ಕೆಲಸಗಳು, ಸಮೀಕ್ಷೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆ ಕೆಲಸಗಳು ಆಶಾ ಕಾರ್ಯಕರ್ತೆಯರ ಕೆಲಸವಲ್ಲದಿದ್ದರೂ, ಬಲವಂತವಾಗಿ ಕೆಲಸ ಮಾಡಿಸಲಾಗುತ್ತಿದೆ. ಈ ಹೆಚ್ಚುವರಿ ಕೆಲಸಕ್ಕೆ ಯಾವುದೇ ಪ್ರೋತ್ಸಾಹ ಧನವನ್ನೂ ನೀಡುತ್ತಿಲ್ಲ. ಹೆಚ್ಚುವರಿ ಕೆಲಸಕ್ಕೆ ಮತ್ತಷ್ಟು ಪ್ರೋತ್ಸಾಹ ಧನ ನಿಗದಿಪಡಿಸಬೇಕು ಎಂದು ಆಶಾ ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ.

ಈ ವರದಿ ಓದಿದ್ದೀರಾ?: ಅರಮನೆ ಮೈದಾನ ಸ್ವಾಧೀನ | BBMPಯ ಒಂದು ಪತ್ರದಿಂದ ಸರ್ಕಾರಕ್ಕೆ 3 ಸಾವಿರ ಕೋಟಿಯ ಭಾರೀ ಹೊರೆ!

ಬಾಕಿ ಇರುವ ಗೌರವಧನ ಪಾವತಿಸಬೇಕು. ಗೌರವಧನ ಹೆಚ್ಚಿಸಬೇಕು. ಹೆಚ್ಚುವರಿ ಕೆಲಸಕ್ಕೆ ಹೆಚ್ಚವರಿ ಪ್ರೋತ್ಸಾಹ ಧನ ನೀಡಬೇಕು. ಪಶ್ಚಿಮ ಬಂಗಾಳದ ಮಾದರಿಯಲ್ಲಿ ಸೇವಾ ನಿವೃತ್ತಿ ಪಡೆಯುವ ಆಶಾ ಕಾರ್ಯಕರ್ತೆಯರಿಗೆ ವರ್ಷಕ್ಕೆ 5 ಲಕ್ಷ ರೂ. ನೀಡಬೇಕು.
ಪ್ರತಿವರ್ಷ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ಸೌಲಭ್ಯ ಕಲ್ಪಿಸಬೇಕು. ಆಶಾ ಕಾರ್ಯಕರ್ತೆಯರನ್ನ ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ, ಗ್ರಾಚ್ಯುಟಿ, ಭವಿಷ್ಯನಿಧಿ, ಕಾರ್ಮಿಕರ ರಾಜ್ಯ ವಿಮೆ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಆಶಾ ಕಾರ್ಯಕರ್ತೆಯರ ಹೋರಾಟದ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮಿ, “ಆಶಾ ಕಾರ್ಯಕರ್ತೆಯರ ಸಮಸ್ಯೆ ವಿರುದ್ಧದ ಹೋರಾಟ ಇವತ್ತು-ನಿನ್ನೆಯದಲ್ಲ. ಕಳೆದ 15 ವರ್ಷದಿಂದ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಕೆಲಸ ಆರಂಭಿಸಿದ ಆರು ತಿಂಗಳಲ್ಲಿಯೇ ಸಮಸ್ಯೆಗಳ ಬಗ್ಗೆ ಮೊದಲ ಹೋರಾಟ ನಡೆದಿತ್ತು. ಆಶಾ ಕಾರ್ಯಕರ್ತೆಯರನ್ನು ಸರ್ಕಾರ ನೇಮಿಸಿಕೊಂಡಿತ್ತಾದರೂ, ಅವರ ಬಗ್ಗೆ ಕೇಳುವವರು ಯಾರೂ ಇರಲಿಲ್ಲ. ಕೆಲಸ ಶುರು ಮಾಡಿದಾಗಿನಿಂದ ಈವರೆಗೆ ಹೋರಾಟದ ಮೂಲಕವೇ ಆಶಾ ಕಾರ್ಯಕರ್ತೆಯರು ಪ್ರತಿಯೊಂದು ಸೌಲಭ್ಯಗಳನ್ನು ಪಡೆದಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಒಂದು ‘ಡ್ರೇಸ್ ಕೋಡ್’ ಬೇಕು ಎಂಬ ಹೋರಾಟದ ಮೂಲಕವೇ ಈ ‘ಪಿಂಕ್‌’ ಬಣ್ಣದ ಸೀರಿಯನ್ನು ಪಡೆದಿದ್ದೇವೆ” ಎಂದು ಹೇಳಿದ್ದಾರೆ.

ಪ್ರೋತ್ಸಾಹ ಧನ, ಗೌರವಧನ, ಆಶಾ ಕಾರ್ಯಕರ್ತೆ, Incentive money, honorarium, ASHA worker,

“ಆರಂಭದಲ್ಲಿ ಕೇಂದ್ರ ಸರ್ಕಾರ ಪ್ರೋತ್ಸಾಹಧನ ನೀಡುತ್ತಿತ್ತು ಮತ್ತು ಕೆಲಸ ಮಾಡಿಸಿಕೊಳ್ಳುತ್ತಿತ್ತು. ದಿನಕಳೆದಂತೆ, ರಾಜ್ಯ ಸರ್ಕಾರವೂ ಆಶಾ ಕಾರ್ಯಕರ್ತೆಯರಿಂದ ಕೆಲಸ ಮಾಡಿಸಿಕೊಳ್ಳಲು ಆರಂಭಿಸಿತ್ತು. ಆದರೆ, ರಾಜ್ಯ ಸರ್ಕಾರ ಯಾವುದೇ ಪೋತ್ಸಾಹ ಧನ ನೀಡುತ್ತಿಲ್ಲ. ರಾಜ್ಯ ಸರ್ಕಾರವೂ ಕೂಡ ಪ್ರೋತ್ಸಾಹ ಧನ ನೀಡಬೇಕೆಂದು ಹೋರಾಟ ಮಾಡಿದೆವು. ಫಲವಾಗಿ, ಸರ್ಕಾರ 1,000 ರೂ. ಗೌರವಧನ ನಿಗದಿ ಮಾಡಿತು. ಆ ನಂತರ, ಪ್ರತಿಭಟನೆ ಮಾಡಿದಾಗ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಮಾನವಾಗಿ ಪ್ರೋತ್ಸಾಹಧನ ನೀಡಲಾರಂಭಿಸಿದವು. ಆ ಬಳಿಕ, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗೌರವಧನವನ್ನು 3,000 ರೂ. ಹೆಚ್ಚಳ ಮಾಡಿತ್ತು. ಆದರೆ, ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಆಶಾ ಕಾರ್ಯಕರ್ತೆಯರು ಕಡಿಮೆ ಸಂಬಂಳ ಪಡೆದು ಬದುಕುವುದಾದರೂ ಹೇಗೆ?” ಎನ್ನುತ್ತಾರೆ ನಾಗಲಕ್ಷ್ಮಿ.

“ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದು ನಮ್ಮ ಹಕ್ಕು. ಆದರೆ, ಆರೋಗ್ಯ ಇಲಾಖೆ ಆಯುಕ್ತರು ಒಂದು ನೋಟಿಸ್ ಕಳುಹಿಸಿದ್ದಾರೆ. ಹೋರಾಟಕ್ಕೆ ಹೋದರೆ ಆಶಾ ಕಾರ್ಯರ್ತೆಯರನ್ನು ಕೆಲಸದಿಂದ ಕಿತ್ತಾಕುತ್ತೇವೆಂದು ಬೆದರಿಕೆ ಹಾಕಿದ್ದಾರೆ. ಹೆಣ್ಣು ಮಕ್ಕಳ ಪರವಾಗಿರುವ ಸರ್ಕಾರದಿಂದ ಇಂತಹ ಕೆಲಸ ಆಗುವುದಿಲ್ಲ. ಈ ಬೆದರಿಕೆಯ ಹಿಂದೆ ಯಾರದ್ದೋ ಕುಮ್ಮಕ್ಕು ಇದೆ. ಹೋರಾಟಕ್ಕೆ ಹೋದವರನ್ನು ಕೆಲಸದಿಂದ ಕೈಬಿಟ್ಟು, ಹೊಸಬರನ್ನು ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಸ್ವಯಂ ಸೇವಕರ ಮೇಲೆ ಅವರು ಹೇಗೆ ಕ್ರಮ ತೆಗೆದುಕೊಳ್ಳುತ್ತಾರೆ. ನಾವು ಆಯ್ಕೆಯಾಗುವುದು ಗ್ರಾಮ ಪಂಚಾಯತಿಯಿಂದ ನಮ್ಮನ್ನು ತೆಗೆಯುವ ಹಕ್ಕು ಕೂಡ ಅವರಿಗೆ ಮಾತ್ರವೇ ಇದೆ” ಎಂದು ವಿವರಿಸಿದ್ದಾರೆ.

“ಸರಿಯಾಗಿ ಸಂಬಳ ಸಿಗುತ್ತಿಲ್ಲ. 5 ಸಾವಿರ ಸಂಬಳ ಮತ್ತು ಇನ್ಸೆಟಿವ್ ಆಗಿ 2 ಸಾವಿರ ರೂ. ಕೊಡುತ್ತಿದ್ದಾರೆ. ಇಂದಿನ ವ್ಯವಸ್ಥೆಯೊಳಗೆ 7,000 ರೂ. ಸಂಬಳದಲ್ಲಿ ಬದುಕಲು ಸಾಧ್ಯವೇ? ಜೀವನ ಸಾಗಿಸುವುದೇ ಕಷ್ಟವಾಗುತ್ತಿದೆ. ನಮ್ಮ ಕೆಲಸದ ಅವಧಿ ಈ ಹಿಂದೆ 3 ಗಂಟೆ ಎಂದಿದ್ದರು. ಆದರೆ, ಈಗ 12 ಗಂಟೆಗೂ ಹೆಚ್ಚು ಸಮಯ ಕೆಲಸ ಮಾಡಿಸಿಕ್ಕೊಳ್ಳುತ್ತಿದ್ದಾರೆ. ಬಹುತೇಕ ಆಶಾ ಕಾರ್ಯಕರ್ತರಿಯರಿಗೆ ಮೊಬೈಲ್ ಬಳಕೆ ಮಾಡಲು ಬರುವುದಿಲ್ಲ. ಆದರೂ ಕೂಡ ಮೊಬೈಲ್ ಕೆಲಸ ನೀಡುತ್ತಿದ್ದಾರೆ. ಆ ಮೊಬೈಲ್ ಕೆಲಸಕ್ಕೂ ನಾವೇ ಕರೆನ್ಸಿ ಹಾಕಿಸಿಕೊಂಡು ಕೆಲಸ ನಿರ್ವಹಿಸಬೇಕು” ಎಂದು ಮಧುಗಿರಿಯ ಆಶಾ ಕಾರ್ಯಕರ್ತೆ ಶೋಭಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಬಿಸಿಲು ಮಳೆಯ ನಡುವೆಯೂ ನಾವು ಕೆಲಸ ಮಾಡುತ್ತಿದ್ದೇವೆ. ಆದರೆ, ನಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಎನ್‌ಆರ್‌ಎಚ್‌ಎಂನಲ್ಲಿ 36 ಕೆಲಸಗಳಿವೆ. ಮನೆ-ಮನೆ ಆರೋಗ್ಯ ಸಮಸ್ಯೆ, ಗರ್ಭಿಣಿ-ಬಾಣಂತಿ, ಕುಷ್ಠರೋಗ ಸೇರಿದಂತೆ ಹಲವಾರು ಆರೋಗ್ಯ ಸಂಬಂಧಿತ ಕೆಲಸಗಳನ್ನು ಮಾಡುತ್ತಿದ್ದೇವೆ. ನಮಗೆ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗಬೇಕೆಂದು ಪ್ರತಿಭಟನೆ ಮಾಡುತ್ತಿದ್ದೇವೆ. ಪ್ರತಿವರ್ಷವೂ ಕೂಡ ಈ ಪ್ರತಿಭಟನೆ ನಡೆಸುವುದು ಮತ್ತು ಮರಳಿ ಹೋಗುವುದೇ ಆಗಿದೆ. ಆದರೆ, ಸರ್ಕಾರ ಇಲ್ಲಿಯವರೆಗೂ ನಮಗೆ ನ್ಯಾಯ ದೊರೆತಿಲ್ಲ” ಎಂದು ಬೆಳಗಾವಿಯ ಆಶಾ ಕಾರ್ಯಕರ್ತೆಯರು ಈ ದಿನ.ಕಾಮ್ ಜೊತೆಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಕಳಂಕಿತ ನೈಸ್ ಕಂಪನಿಗೆ ಯಾವುದೇ ಕಾಮಗಾರಿ ನೀಡದಂತೆ ಸರ್ಕಾರಕ್ಕೆ ನೈಸ್ ಭೂ ಸಂತ್ರಸ್ತ ರೈತರ ಆಗ್ರಹ

ಬಿಎಂಐಸಿ-ನೈಸ್ ಕಂಪನಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಸಲಹಾ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X