- ಚರ್ಮದ ಟೋನ್ ಹೊಂದಿಸುವುದು ಲಿಪ್‌ಸ್ಟಿಕ್ ವ್ಯಾಪಾರಕ್ಕೆ ಒಳ್ಳೆಯದು
- ಬ್ಯಾಂಡ್ ಏಡ್‌ಗಳನ್ನು ಶೂ ಕಡಿತದಿಂದ ಪಾದ ರಕ್ಷಿಸಲು ಬಳಸಲಾಗುತ್ತದೆ
ಮಾನವನ ಮೈ ಬಣ್ಣಕ್ಕೆ ಒಪ್ಪುವಂತಹ ನಾನಾ ತೆರೆನಾದ ಬ್ಯಾಂಡ್ ಏಡ್‌ಗಳು ಮಾರುಕಟ್ಟೆಗೆ ಬಂದಿವೆ. ಈ ಬಗ್ಗೆ ಉದ್ಯಮಿ ಹರ್ಷ ಗೋಯೆಂಕಾ ಅವರು ಟ್ವೀಟ್‌ವೊಂದನ್ನು ಹಂಚಿಕೊಂಡಿದ್ದಾರೆ.
“ಮೈ ಬಣ್ಣಕ್ಕೆ ಹೊಂದುವಂತಹ ಬ್ಯಾಂಡ್ ಏಡ್‌ಗಳು ನಿಜವಾಗಿಯೂ ಅಗತ್ಯವಿದೆಯಾ? ಕೆಲವೊಂದು ಆವಿಷ್ಕಾರಗಳು ಅರ್ಥಹೀನವಾಗಿವೆ” ಎಂದು ಉದ್ಯಮಿ ಹರ್ಷ ಗೋಯೆಂಕಾ ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಎಲ್ಲೆಡೆ ವೈರಲ್ ಆಗಿದ್ದು, ಹಲವಾರು ಜನ ಪರ ಮತ್ತು ವಿರೋಧದ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ.
“ನಿಮಗೆ ಇದು ಅರ್ಥಹೀನವಾಗಿರಬಹುದು. ಬಿಳಿ ಚರ್ಮಕ್ಕಾಗಿ ವಿನ್ಯಾಸಗೊಳಿಸಲಾದ ಉತ್ಪನ್ನವು ನಿಮಗೆ ಉತ್ತಮವಾಗಿರುತ್ತದೆ. ಕೆಲವು ಕಂದು ಬಣ್ಣದ ಜನರು ತಮ್ಮದೇ ಆದ ಬಣ್ಣವನ್ನು ಹೊಂದಲು ಬಯಸುತ್ತಾರೆ” ಎಂದು ಗುಂಜನ್ ಬಾಗ್ಲಾ ಅವರು ಟ್ವೀಟ್ ಮಾಡಿದ್ದಾರೆ.
“ಚರ್ಮದ ಟೋನ್‌ಗಳನ್ನು ಹೊಂದಿಸುವುದು ಲಿಪ್‌ಸ್ಟಿಕ್ ವ್ಯಾಪಾರಕ್ಕೆ ಒಳ್ಳೆಯದು ಆದರೆ, ಬ್ಯಾಂಡೇಡ್‌ಗಳಿಗೆ ಅಗತ್ಯವಿಲ್ಲ!!” ಎಂದು ಪ್ರೀತಿ ಪರಬ್ ಹೇಳಿದ್ದಾರೆ.
“ಕೆಲವೊಮ್ಮೆ ಈ ಬ್ಯಾಂಡ್ ಏಡ್‌ಗಳನ್ನು ಶೂ ಕಡಿತದಿಂದ ಪಾದವನ್ನು ರಕ್ಷಿಸಲು ಬಳಸಲಾಗುತ್ತದೆ. ಆ ಉದ್ದೇಶಕ್ಕಾಗಿ ಇದು ಅರ್ಥಪೂರ್ಣವಾಗಿದೆ” ಎಂದು ನೀತಿ ಶಿಖಾ ಎಂಬುವವರು ಟ್ವೀಟ್ ಮಾಡಿದ್ದಾರೆ.
“ಇನ್ನೂ ಕೆಲವರು ಒಂದು ಸಣ್ಣಗಾಯಕ್ಕೆ ಅಂಟಿಸುವ ಪಟ್ಟಿಯ ಬಗ್ಗೆ ಇಷ್ಟೊಂದು ಯೋಚಿಸಿ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಇದೆಲ್ಲವೂ ಕೇವಲ ಮಾರಾಟದ ಗಿಮಿಕ್” ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಮತದಾನ ಮಾಡಿ ಉಚಿತ ತಿಂಡಿ ತಿನ್ನಿ’ ; ಬಿಬಿಎಂಪಿ ನಿರ್ಬಂಧಕ್ಕೆ ಹೈಕೋರ್ಟ್ ತಡೆ
“ನಿಮಗಿದೆಲ್ಲ ಅರ್ಥವಾಗಲ್ಲ, ಅವರವರಿಗೆ ಅವರದೇ ಆದ ಆಯ್ಕೆಗಳಿರುತ್ತವೆ. ಆ ಪ್ರಕಾರ ಅವರು ಖರೀದಿಸುತ್ತಾರೆ ನಿಮಗೆ ಬೇಡವಾದರೆ ನೀವು ಸುಮ್ಮನಿರಿ” ಎಂದು ಮತ್ತೊಬ್ಬರು ತಿಳಿಸಿದ್ದಾರೆ.