ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದು, ಬೆಂಗಳೂರಿನಲ್ಲಿ ಸೋಮವಾರ ತಡರಾತ್ರಿ ₹7 ಕೋಟಿ ಪತ್ತೆಯಾಗಿದೆ. ಆದರೆ, ಐಎಎಸ್ ಅಧಿಕಾರಿಯೊಬ್ಬರು ಸ್ಥಳಕ್ಕೆ ಆಗಮಿಸಿದ ನಂತರ ಹಣ ನಾಪತ್ತೆಯಾಗಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸೋಮವಾರ ತಡರಾತ್ರಿ ₹7 ಕೋಟಿ ಹಣ ಪತ್ತೆಯಾಗಿದೆ. ಹಣ ಸಿಕ್ಕ ಕೆಲವೇ ಕ್ಷಣದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದಿದ್ದಾರೆ. ಬಳಿಕ, ಪತ್ತೆಯಾದ ₹7 ಕೋಟಿ ಹಣ ಏನಾಯಿತು ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ ಎಂದು ತಿಳಿದುಬಂದಿದೆ.
ಚುನಾವಣೆ ನೀತಿ ಸಂಹಿತೆ ಹಿನ್ನೆಲೆ, ರಾಜ್ಯಾದ್ಯಂತ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ರಾಜಕೀಯ ಚಟುವಟಿಕೆ ಹಾಗೂ ವಾಹನಗಳ ಮೇಲೆ ಕಣ್ಣಿಟ್ಟಿದ್ದಾರೆ. ವಾಹನ ತಪಾಸಣೆ ನಡೆಸುತ್ತಿದ್ದಾರೆ. ಇವರೆಗೂ ಅಕ್ರಮವಾಗಿ ಸಾಗಿಸುವ ಹಣ ಚಿನ್ನಾಭರಣ ಪತ್ತೆಯಾಗುತ್ತಿದೆ. ಆದರೆ, ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ನಂತರ ಪತ್ತೆಯಾದ ಬೃಹತ್ ಮೊತ್ತ ಇದಾಗಿದೆ.
ಈ ಸುದ್ದಿ ಓದಿದ್ದೀರಾ? ಉದ್ಯಮಿಗಳು ಕೈಗಾರಿಕೆಗಳಲ್ಲಿ ಮತದಾನ ಜಾಗೃತಿಯ ಭಿತ್ತಿಪತ್ರ ಅಂಟಿಸಿ: ತುಷಾರ್ ಗಿರಿನಾಥ್
ಸದ್ಯ ಈ ಬಗ್ಗೆ ಮಾಹಿತಿ ತಿಳಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ.