- 7.9 ಕೆ.ಜಿ ಗಾಂಜಾ ಮತ್ತು ₹4 ಸಾವಿರ ನಗದು ಜಪ್ತಿ ಮಾಡಿದ ಪೊಲೀಸರು
- ಪರಾರಿಯಾದ ಆರೋಪಿ ದರ್ಶನ್ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿರುವ ಪೊಲೀಸರು
ಬೆಂಗಳೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರು ಮಹಿಳೆಯರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ನಗರದ ಐಟಿಸಿ ಕಾಲೋನಿಯ ನಿವಾಸಿಗಳಾದ ಪ್ರೇಮಾ, ಸುನೀತ ಹಾಗೂ ಮುತ್ತ್ಯಾಲಮ್ಮ ಬಂಧಿತ ಆರೋಪಿಗಳು. ಇವರು ಹೊರ ರಾಜ್ಯದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅವರಿಂದ, 7.9 ಕೆ.ಜಿ ಗಾಂಜಾ ಮತ್ತು ₹4 ಸಾವಿರ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೇಮಾ ಮತ್ತು ಸುನೀತ ಮೂಲತಃ ಜಾರ್ಖಂಡ್‌ನವರಾಗಿದ್ದಾರೆ. ಅವರು ಕಳೆದ ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಮುತ್ಯಾಲಮ್ಮ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಆಗಾಗ ಜಾರ್ಖಂಡ್‌ಗೆ ಹೋಗಿ ಬರುತ್ತಿದ್ದ ಇಬ್ಬರೂ, ಗಾಂಜಾವನ್ನು ತಂದು, ಮುತ್ಯಾಲಮ್ಮ ಮತ್ತು ಆಕೆಯ ಮಗ ದರ್ಶನ್ ನೆರವಿನಿಂದ ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
“ಇಬ್ಬರೂ ಮಹಿಳೆರಿಂದ ಮುತ್ಯಾಲಮ್ಮ ಬಾಡಿಗೆ ಪಡೆಯುತ್ತಿರಲಿಲ್ಲ. ಬದಲಾಗಿ ಗಾಂಜಾ ಪಡೆಯುತ್ತಿದ್ದರು. ಅದನ್ನು ಮಾರಿ, ಹಣ ಸಂಪಾದಿಸುತ್ತಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೊಸಕರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ; ಅಧಿಕಾರಿಗಳ ಅಮಾನತು
ಸದ್ಯ, ಮೂವರು ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ದರ್ಶನ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.