ಬೆಂಗಳೂರಿನ ಗಾಂಧಿನಗರದ ಎಸ್.ಸಿ.ರಸ್ತೆಯ ಶ್ರೀಹರಿ ಪ್ರೆಸೆಂಟಾ ಲಾಡ್ಜ್ನ ಉದ್ಯೋಗಿ ಗಲ್ಲಾ ಪೆಟ್ಟಿಗೆಯಲ್ಲಿದ್ದ ₹2.50 ಲಕ್ಷ ನಗದು ಹಣವನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಳ್ಳರು ಕಳ್ಳತನ ಮಾಡುವ ವೇಳೆ ಕ್ಯಾಶಿಯರ್ ಕೌಂಟರ್ನಲ್ಲಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಆಫ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
“ಬೆಂಗಳೂರಿನ ಗಾಂಧಿನಗರದ ಎಸ್.ಸಿ.ರಸ್ತೆಯ ಶ್ರೀಹರಿ ಪ್ರೆಸೆಂಟಾ ಲಾಡ್ಜ್ನಲ್ಲಿ ಮೊಹಮ್ಮದ್ ಮಿದಲಾಜ್ ಎಂಬುವವರು ಕಳೆದ ಒಂದೂವರೆ ವರ್ಷದಿಂದ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಜು.24ರಂದು ಬೆಳಗ್ಗೆ 9.30ಕ್ಕೆ ಲಾಡ್ಜ್ನ ಸಿಸಿಟಿವಿ ಕ್ಯಾಮರಾ ಆಫ್ ಮಾಡಿ ಗಲ್ಲಾ ಪೆಟ್ಟಿಗೆಯಲ್ಲಿದ್ದ ₹2.50 ಲಕ್ಷ ನಗದು ಹಣವನ್ನು ಕದ್ದು ಪರಾರಿಯಾಗಿದ್ದಾರೆ. ಅಲ್ಲದೇ, ಈತ ತನ್ನ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡಿದ್ದಾನೆ” ಎಂದು ಲಾಡ್ಜ್ನ ಮ್ಯಾನೇಜರ್ ಮೊಹಮ್ಮದ್ ಸರ್ಫರಾಜ್ ದೂರಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಶಿಯರ್ ಮೊಹಮ್ಮದ್ ಮಿದಲಾಜ್ (29) ಎಂಬಾತನ ವಿರುದ್ಧ ಲಾಡ್ಜ್ನ ಮ್ಯಾನೇಜರ್ ಮೊಹಮ್ಮದ್ ಸರ್ಫರಾಜ್ ದೂರು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪಾದಚಾರಿ ಸ್ಥಳ ಅತಿಕ್ರಮಣ ತೆರವು; 1.5 ಸಾವಿರ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ
ಲಾಡ್ಜ್ನ ಮ್ಯಾನೇಜರ್ ಮೊಹಮ್ಮದ್ ಸರ್ಫರಾಜ್ ನೀಡಿದ ದೂರಿನ ಮೇರೆಗೆ ಉಪ್ಪಾರಪೇಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.