ಬೆಂಗಳೂರು | ಕಳೆದ ವರ್ಷಕ್ಕಿಂತ ನಾಯಿ ಕಡಿತಗಳ ಸಂಖ್ಯೆ ಹೆಚ್ಚಳ

Date:

Advertisements

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಾಯಿ ಕಡಿತ ಪ್ರಕರಣಗಳ ಸಂಖ್ಯೆ 5,526 ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಪ್ರಕಾರ, 2022-2023ರಲ್ಲಿ 23,236 ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದು, 2021-2022ರಲ್ಲಿ 17,610 ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದವು.

ಪ್ರಚೋದನೆ, ಆಕ್ರಮಣಶೀಲತೆ, ಪ್ರಾದೇಶಿಕ, ತಾಯಿ ನಾಯಿಯ ಆತಂಕ, ನಾಯಿಗಳ ಲೈಂಗಿಕತೆ ಹಾಗೂ ಆಹಾರ ಸಂಘರ್ಷ ನಾಯಿ ಕಡಿತ ಪ್ರಕರಣ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಬಿಬಿಎಂಪಿಯ ಪಶುಪಾಲನಾ ವಿಭಾಗದ ಪಶು ವೈದ್ಯರು ಹೇಳಿದ್ದಾರೆ.

Advertisements

“ಜನರಿಗೆ ಈ ಅಂಶಗಳ ಬಗ್ಗೆ ತಿಳಿದಿರುವುದಿಲ್ಲ ಇದರಿಂದ ನಾಯಿಯಿಂದ ಕಚ್ಚುವಿಕೆಗೆ ಒಳಗಾಗುತ್ತಾರೆ. ಉದಾಹರಣೆಗೆ, ಕೆಲವು ಬೀದಿ ನಾಯಿಗಳನ್ನು ಹೊಂದಿರುವ ಕಾಲೋನಿ ಅಥವಾ ವಸತಿ ಕ್ವಾಟರ್ಸ್‌ಗೆ ಪ್ರವೇಶಿಸುವ ಅಪರಿಚಿತರನ್ನು ಕಂಡಾಗ ನಾಯಿಗಳು ಬೊಗಳಲು ಪ್ರಾರಂಭಿಸುತ್ತವೆ. ಒಬ್ಬ ವ್ಯಕ್ತಿಯು ಓಡಿಸಲು ಪ್ರಯತ್ನಿಸಿದರೆ, ವ್ಯಕ್ತಿಯನ್ನು ನೋಡಿದಾಗ ನಾಯಿಗಳು ಕೆಲವೊಮ್ಮೆ ಕಚ್ಚಬಹುದು. ಅಂತೆಯೇ, ಹೆಣ್ಣು ಮಕ್ಕಳು ಕಸ ಹಾಕಲು ತೆರಳಿದಾಗ ಈ ವೇಳೆ ಆಕ್ರಮಣಕಾರಿಯಾಗಿ ದಾಳಿ ನಡೆಸುವ ಸಾಧ್ಯತೆ ಇರುತ್ತದೆ. ನಾಯಿಮರಿಗಳ ಬಳಿ ಹೋಗುವವರ ಮೇಲೆ ದಾಳಿ ಮಾಡಬಹುದು. ಈ ಎಲ್ಲ ಅಂಶಗಳ ಬಗ್ಗೆ ಬಿಬಿಎಂಪಿ ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ” ಎಂದು ಪಶುಸಂಗೋಪನಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

“ಜುಲೈನಲ್ಲಿ ನಡೆಸಲಾದ ಬೀದಿನಾಯಿ ಗಣತಿಯಲ್ಲಿ ಅನೇಕ ಮಧ್ಯಸ್ಥಗಾರರು ಭಾಗಿಯಾಗಿದ್ದಾರೆ. ಸಾರ್ವಜನಿಕರಲ್ಲಿ ಜಾಗೃತಿ ಅಭಿಯಾನವನ್ನು ತೀವ್ರಗೊಳಿಸಲು ಪ್ರದೇಶವಾರು ಯೋಜನೆಯನ್ನು ಈಗ ಸಿದ್ಧಪಡಿಸಲಾಗುತ್ತಿದೆ. ನಾಯಿ ಕಚ್ಚಿದರೆ ಬೀದಿ ನಾಯಿಗಳನ್ನು ಸ್ಥಳಾಂತರಿಸುವಂತೆ ಅನೇಕ ನಿವಾಸಿಗಳು ಬಿಬಿಎಂಪಿ ಅಧಿಕಾರಿಗಳಿಗೆ ಕೇಳುತ್ತಾರೆ. ಆದರೆ, ಬೀದಿ ನಾಯಿಗಳನ್ನು ಸ್ಥಳಾಂತರಿಸಬಾರದು ಎಂಬ ಕಾನೂನಿನ ಬಗ್ಗೆ ತಿಳಿದಿಲ್ಲ. ನಾಯಿ ಕಡಿತದ ಹಿಂದಿನ ನಿಯಮಗಳು ಮತ್ತು ಕಾರಣಗಳ ಬಗ್ಗೆ ನಾಗರಿಕರಿಗೆ ಶಿಕ್ಷಣ ನೀಡಲಾಗುವುದು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಎಎಪಿಯಿಂದ ‘ಕಾವೇರಿ ನಮ್ಮದು’ ಧರಣಿ ಸತ್ಯಾಗ್ರಹ

“ತಮ್ಮ ಮಕ್ಕಳ ಮೇಲಿನ ಗಾಯದ ಗುರುತು ಮತ್ತು ಕಚ್ಚಿದ ಗುರುತುಗಳನ್ನು ಪರೀಕ್ಷಿಸುವ ಮಹತ್ವದ ಬಗ್ಗೆ ಪೋಷಕರಿಗೆ ತಿಳಿಸಲಾಗುತ್ತಿದೆ. ಅವುಗಳನ್ನು ನಿರ್ಲಕ್ಷಿಸದಂತೆ ಸಲಹೆ ನೀಡಲಾಗುತ್ತದೆ. ಅವರು ಅವುಗಳನ್ನು ಪರೀಕ್ಷಿಸಬೇಕು ಮತ್ತು ನಾಯಿ ಕಡಿತ ಎಂದು ದೃಢಪಟ್ಟರೆ, ರೇಬೀಸ್ ಸೋಂಕನ್ನು ತಡೆಗಟ್ಟಲು ಆಂಟಿ-ರೇಬಿಸ್ ಲಸಿಕೆಯನ್ನು ತಕ್ಷಣವೇ ಪಡೆಯಬೇಕು” ಎಂದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

Download Eedina App Android / iOS

X