ಬೆಂಗಳೂರು | ಪ್ರಿಯತಮೆ ಕೊಲೆ ಮಾಡಿ ತಿಂಗಳು ಕಾಲ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Date:

Advertisements
  • ಜೂನ್ 5ರಂದು ಜೀವನ ಭೀಮಾನಗರದಲ್ಲಿ ನಡೆದಿದ್ದ ಟೆಕ್ಕಿ ಆಕಾಂಕ್ಷಾ ಕೊಲೆ
  • ಕೆ ಆರ್‌ ಪುರ ಸಮೀಪದ ಬಿ ನಾರಾಯಣಪುರದಿಂದ ನಾಪತ್ತೆಯಾಗಿದ್ದ ಆರೋಪಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜೂನ್ 5ರಂದು ಪ್ರಿಯತಮೆಯನ್ನು ಕೊಂದು ಬಂಧನ ಭೀತಿಯಿಂದ ಒಂದು ತಿಂಗಳ ಕಾಲ ನಾಪತ್ತೆಯಾಗಿದ್ದ ಆರೋಪಿಯನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.

ಜೂನ್ 5 ರಂದು ಜೀವನ ಭೀಮಾನಗರದಲ್ಲಿ ನಡೆದಿದ್ದ ಟೆಕ್ಕಿ ಆಕಾಂಕ್ಷಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರ್ಪಿತ್‌ನನ್ನು ಪೊಲೀಸರು ನಗರದ ವೈಟ್‌ಫೀಲ್ಡ್‌ ಬಳಿ ಬಂಧಿಸಿದ್ದಾರೆ.

ಏನಿದು ಪ್ರಕರಣ?

Advertisements

ಮೃತ ಆಕಾಂಕ್ಷಾ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಆರೋಪಿ ಅರ್ಪಿತ್ ಬೈಜ್ಯೂಸ್‌ ಕಂಪನಿಯ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದನು. ಕಳೆದ ನಾಲ್ಕೈದು ವರ್ಷಗಳಿಂದ ಆರೋಪಿ ನಗರದಲ್ಲಿ ವಾಸವಾಗಿದ್ದನು.

ಒಂದೂವರೆ ವರ್ಷದ ಹಿಂದೆ ಆರೋಪಿಗೆ ಆಕಾಂಕ್ಷಾ ಪರಿಚಯವಾಗಿದ್ದಳು. ಕ್ರಮೇಣ ಈ ಪರಿಚಯ ಪ್ರೀತಿಗೆ ತಿರುಗಿತ್ತು. ನಂತರ ಇಬ್ಬರು ಸಹ ಜೀವನ ನಡೆಸುತ್ತಿದ್ದರು. ಈ ಮಧ್ಯೆ ಅರ್ಪಿತ್‌ಗೆ ಕಂಪನಿಯಿಂದ ಬಡ್ತಿ ದೊರೆತು ಹೈದರಾಬಾದ್‌ಗೆ ವರ್ಗಾವಣೆಯಾಗಿದ್ದನು.

ಸ್ವಲ್ಪ ದಿನ ಕಳೆದಂತೆ ಮೃತ ಆಕಾಂಕ್ಷಾ ಬೇರೊಂದು ಯುವಕನ ಜತೆಗೆ ಸುತ್ತಾಡುತ್ತಿರುವ ಬಗ್ಗೆ ಅರ್ಪಿತ್‌ಗೆ ಗೊತ್ತಾಗಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗುತ್ತಿತ್ತು. ಅರ್ಪಿತ್ ಆಕಾಂಕ್ಷಾಗೆ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಬಲವಂತ ಮಾಡುತ್ತಿದ್ದನು. ಮದುವೆ ಮಾಡಿಕೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿದ ಯುವತಿಯ ಜತೆಗೆ ಆರೋಪಿ ಜಗಳ ತೆಗೆಯುತ್ತಿದ್ದನು. ಪ್ರಿಯತಮೆಗೆ ಪಾಠ ಕಲಿಸಬೇಕೆಂದು ಆರೋಪಿ ಅರ್ಪಿತ್ ಹೈದರಾಬಾದ್‌ನಿಂದ ಜೂನ್‌ 5ರಂದು ಆಕಾಂಕ್ಷಾ ವಾಸವಾಗಿದ್ದ ಜೀವನ್ ಭೀಮಾನಗರದ ಕೋಡಿಹಳ್ಳಿಯ ಫ್ಲ್ಯಾಟ್‌ಗೆ ಬಂದಿದ್ದನು. ಈ ವೇಳೆ ಆಕಾಂಕ್ಷಾ ಜತೆಗೆ ಅರ್ಪಿತ್ ಜಗಳ ಆರಂಭಿಸಿ, ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದನು.

ಇದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಆರೋಪಿ ಮೃತದೇಹವನ್ನು ನೇತು ಹಾಕಲು ಪ್ರಯತ್ನಿಸಿದ್ದನು. ಇದಾಗದ ಕಾರಣ ಬಂಧನದ ಭಯದಲ್ಲಿ ಆರೋಪಿ ತನ್ನ ಮೊಬೈಲ್‌ ಅನ್ನು ಫ್ಲ್ಯಾಟ್‌ನಲ್ಲಿಯೇ ಬಿಟ್ಟು ಪರಾರಿಯಾಗಿದ್ದನು. ಫ್ಲ್ಯಾಟ್‌ಗೆ ಮೃತಳ ರೂಮೇಟ್‌ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಫ್ಲ್ಯಾಟ್‌ನಿಂದ ಹೊರಬಂದ ಆರೋಪಿ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಕಡೆಗೆ ಪ್ರಯಾಣ ಬೆಳೆಸಿದ್ದಾನೆ. ಈ ವೇಳೆ ಸ್ವಲ್ಪ ದೂರ ಆಟೋ, ಸ್ವಲ್ಪ ದೂರು ಕಾಲ್ನಡಿಗೆ ಮೂಲಕ ಕೆ ಆರ್‌ ಪುರ ಸಮೀಪದ ಬಿ ನಾರಾಯಣಪುರದಿಂದ ನಾಪತ್ತೆಯಾಗಿದ್ದನು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವನ್ ಭೀಮಾನಗರದಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಯ ಬಂಧಿಸಲು ವಿಶೇಷ ತಂಡ ರಚಿಸಿ, ತನಿಖೆ ಆರಂಭಿಸಿದ್ದರು. ಆರೋಪಿಯ ಸುಳಿವೂ ಎಲ್ಲಿಯೂ ಪತ್ತೆಯಾಗದ ಕಾರಣ, ಪೊಲೀಸರು ಆರೋಪಿಯ ಪತ್ತೆಗೆ ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಿದ್ದರು.

ಆರೋಪಿ ಬರೋಬ್ಬರಿ ಮೂರು ರಾಜ್ಯವನ್ನು ಸುತ್ತಿದ್ದನು. ಮೊದಲಿಗೆ ದೆಹಲಿ ರೈಲು ಹತ್ತಿದ ಆರೋಪಿ ಅರ್ಪಿತ್ ಮಾರ್ಗ ಮಧ್ಯೆ ಭೂಪಾಲ್‌ನಲ್ಲಿ ಇಳಿದು ಅಸ್ಸಾಂಗೆ ತೆರಳಿದ್ದನು. ಕೇವಲ ₹5 ಸಾವಿರ ನಗದು ಇಟ್ಟುಕೊಂಡು ರಾಜಧಾನಿ ಬಿಟ್ಟು ಉತ್ತರ ಭಾರತಕ್ಕೆ ತೆರಳಿದ್ದನು. ಅಲ್ಲಿ ಈತ ತಲೆಮರೆಸಿಕೊಳ್ಳಲು ಕೂಲಿ ಕೆಲಸ ಮಾಡಿದ್ದನು. ದಿನಕ್ಕೆ ₹150 ಖರ್ಚು ಮಾಡಿ ನಿತ್ಯದ ಖರ್ಚು ನಿಭಾಯಿಸುತ್ತಿದ್ದನು. ಅಕೌಂಟ್​ನಲ್ಲಿ ಲಕ್ಷಾಂತರ ರೂಪಾಯಿ ಇದ್ದರೂ ಕೂಲಿ ಕೆಲಸ ಮಾಡಿ ದಿನ ಕಳೆಯುತ್ತಿದ್ದನು. ಪೊಲೀಸರು ಈತನ ಅಕೌಂಟ್‌ ಅನ್ನು ಸೀಜ್ ಮಾಡಿದ್ದರು. ಹಾಗೂ ನೆರೆರಾಜ್ಯಗಳಿಗೆ ಲುಕ್‌ ಔಟ್‌ ನೋಟಿಸ್‌ ಹೊರಡಿಸಿದ್ದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆಐಎ ರಸ್ತೆಯಲ್ಲಿ ಭೀಕರ ಅಪಘಾತ: ಪೊಲೀಸ್ ಸೇರಿದಂತೆ 2 ಸಾವು

ಬಳಿಕ ಆರೋಪಿ ತನ್ನ ಸಂಬಂಧಿಕರಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಮೆಸೇಜ್‌ನಿಂದ ಈತ ಅಸ್ಸಾಂನಲ್ಲಿರುವ ಮಾಹಿತಿ ಪಡೆದು ಪೊಲೀಸರು ತೆರಳುವಷ್ಟರಲ್ಲಿ ಆರೋಪಿ ವಿಜಯವಾಡಕ್ಕೆ ತೆರಳಿದ್ದಾನೆ. ಬಳಿಕ ವಿಜಯವಾಡದಿಂದ ಬೆಂಗಳೂರಿಗೆ ಬಂದಿದ್ದನು. ನಗರದ ವೈಟ್ ಫೀಲ್ಡ್​ನಲ್ಲಿರುವ ಸ್ನೇಹಿತನ ಮನೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಸತತ ಒಂದು ತಿಂಗಳ ಕಾರ್ಯಾಚರಣೆ ನಂತರ ಪೊಲೀಸರು ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ ಜೀವನ್‌ ಭೀಮಾನಗರ ಪೊಲೀಸರು ಆರೋಪಿಯನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮಹಿಳೆ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಬೆಂಗಳೂರಿನ ವಿಲ್ಲಾವೊಂದರಲ್ಲಿ ವಾಸವಿದ್ದ 53 ವರ್ಷದ ಮಹಿಳೆ ತನ್ನ ಕಾಮ ತೃಷೆಗಾಗಿ...

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X