ರಾಜಧಾನಿ ಬೆಂಗಳೂರಿನಲ್ಲಿ ನಕಲಿ ನೋಟು ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಶರವಣ ಪ್ರಮುಖ ಆರೋಪಿಯಾಗಿದ್ದು, ಈತ ಬಿಹಾರ್‌ದಿಂದ ಐನೂರು ಮುಖಬೆಲೆಯ ನಕಲಿ ನೋಟು ತರಿಸಿ ಕಾಳಸಂತೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದನು. ವ್ಯವಸ್ಥಿತ ಜಾಲದೊಂದಿಗೆ ಈ ದಂಧೆ ಪ್ರಾರಂಭಿಸಿದ ಈತ ನಾಲ್ಕು ಲಕ್ಷ ಹಣ ನೀಡಿ, ಹತ್ತು ಲಕ್ಷ ನಕಲಿ ನೋಟುಗಳನ್ನು ಕರ್ನಾಟಕಕ್ಕೆ ತರುತ್ತಿದ್ದನು. ನಕಲಿ ನೋಟುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ.
ಫೇಕ್ ಕರೆನ್ಸಿ ತಮಿಳುನಾಡು ಹಾಗೂ ಮೋಟೊ ಹ್ಯಾಕರ್ ಎಂಬ ಇನ್‌ಸ್ಟಾಗ್ರಾಮ್ ಐಡಿಗಳ ಮೂಲಕ ಈತ ನಕಲಿ ನೋಟ್ ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದನು. ಈತ ಗ್ರಾಹಕರಿಂದ 5 ಸಾವಿರ ಅಸಲಿ ನೋಟುಗಳನ್ನು ಪಡೆದು 10 ಸಾವಿರ ಮುಖಬೆಲೆಯ ನಕಲಿ ನೋಟುಗಳನ್ನು ನೀಡುತ್ತಿದ್ದನು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನೋಟ್ಸ್ ಕೇಳಲು ವಿದ್ಯಾರ್ಥಿನಿ ಜೊತೆ ಮಾತಾಡಿದ ವಿದ್ಯಾರ್ಥಿ; ಸಹಪಾಠಿಗಳಿಂದ ಹಲ್ಲೆ
ಈ ರೀತಿಯಾಗಿ ದಂಧೆ ನಡೆಸುತ್ತಿದ್ದ ಈತನಿಂದ ಕೇರಳ ಮೂಲದ ದೇವನ್ ಹಾಗೂ ನಿತಿನ್ ಎಂಬುವವರು ನಕಲಿ ನೋಟು ಖರೀದಿ ಮಾಡುತ್ತಿದ್ದರು. ಈ ಹಿನ್ನೆಲೆ, ಇವರನ್ನು ಬಂಧಿಸಿದ ಪೊಲೀಸರು ₹6.53 ಲಕ್ಷ ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.