ನಾಲ್ಕು ರಾಜ್ಯಗಳ ಚುನಾವಣಾ ಮತ ಎಣೆಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಸಂತಸ ತಂದಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಕಳೆದ ಬಾರಿ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಸೋಲು ಕಂಡಿತ್ತು. ತೆಲಂಗಾಣದಲ್ಲೂ ನಾಲ್ಕು ಸೀಟು ಬಂದಿತ್ತು. ಇದೀಗ ರಾಜಸ್ಥಾನ, ತೆಲಂಗಾಣದಲ್ಲೂ ಬಿಜೆಪಿಗೆ ಹೆಚ್ಚು ಸೀಟುಗಳು ಬರುತ್ತಿವೆ. ಹಾಗಾಗಿ ಬಿಜೆಪಿ ಗೆಲುವು ನಿಶ್ಚಿತವಾಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜಸ್ಥಾನ: ಸಿಎಂ ಅಶೋಕ್ ಗೆಹ್ಲೋಟ್ ಮುನ್ನಡೆ, ಬಿಜೆಪಿಯ ವಸುಂಧರಾ ರಾಜೆ ಹಿನ್ನಡೆ
“ಎಲ್ಲ ಕಡೆಯೂ ಬಿಜೆಪಿ ಜಯದ ಹೊಸ್ತಿಲಲ್ಲಿ ಇದೆ. ಇದೆಲ್ಲವೂ ನರೇಂದ್ರ ಮೋದಿಯವರ ವರ್ಚಸ್ಸಿನಿಂದ ಸಾಧ್ಯವಾಗಿದೆ. ಕಾಂಗ್ರೆಸ್ ನಾಯಕರು ಎಲ್ಲ ಕಡೆ ಟೋಪಿ ಹಾಕಿಕೊಂಡು ಹೋಗಿ ತೆಲಂಗಾಣದ ರೆಸಾರ್ಟ್‌ನಲ್ಲಿ ಸರ್ವೀಸ್ ಕೊಡಲು ಹೋಗಿದ್ದಾರೆ” ಎಂದು ಲೇವಡಿ ಮಾಡಿದರು.