ರಾಜ್ಯ ರಾಜಧಾನಿ ಬೆಂಗಳೂರಿನ ನಾನಾ ಕಡೆಗಳಲ್ಲಿ ಅಕ್ರಮವಾಗಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ವ್ಯಕ್ತಿಗಳ ಮೇಲೆ ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ನ.13ರಂದು ದಾಳಿ ನಡೆಸಿದ್ದಾರೆ.
ದಾಳಿ ನಡೆದ ಸ್ಥಳಗಳಲ್ಲಿ ದೊರೆತ 23,42,400 ನಗದು, 7 ಲಕ್ಷ ಮೌಲ್ಯದ 127 ಗ್ರಾಂ ಚಿನ್ನಾಭರಣ, 10 ಕೆಜಿ ಬೆಳ್ಳಿ, 109 ಚೆಕ್ಗಳು, 50 ಅನ್ ಡಿಮಾಂಡ್ ಪ್ರಾಮಿಸರಿ ನೋಟ್, 42 ಖಾಲಿ ಬಾಂಡ್ ಪೇಪರ್, 85 ಶುದ್ದ ಕ್ರಯ ಪತ್ರಗಳು, 35 ಸಾಲ ನಮೂದಿಸಿದ ದಾಖಲಾತಿ, 11 ಈ ಸ್ಪಾಂಪ್ ಪೇಪರ್ಗಳು, 45 ಪಾಕೆಟ್ ಪುಸ್ತಕ, 15 ಅಗ್ರಿಮೆಂಟ್ ಪ್ರತಿಗಳು, 6 ರೋಲೆಕ್ಸ್ ವಾಚ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಎಎಸ್ಐ ಮಗಳಾದ ಶೀಲಾ ಮನೆ, ಕಾಮಾಕ್ಷಿಪಾಳ್ಯದಲ್ಲಿ ಜಗದೀಶ್ ಅಲಿಯಾಸ್ ಟಾಮಿ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜತೆಗೆ, ಚಾಮರಾಜಪೇಟೆ, ಬಸವೇಶ್ವರನಗರ, ಸಿಟಿ ಮಾರ್ಕೆಟ್‌ನಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸೈಬರ್ ವಂಚನೆ | ಅಕ್ರಮ ಚಟುವಟಿಕೆಯ ಕಥೆ ಹೇಳಿ ₹76 ಸಾವಿರ ವಂಚನೆ
ಆರ್ಥಿಕವಾಗಿ ಕುಗ್ಗಿದ ಜನರು ಆದಷ್ಟು ಬೇಗ ಹಣ ಬೇಕು ಎಂಬ ಕಾರಣಕ್ಕೆ ಬಡ್ಡಿಗೆ ಹಣ ಪಡೆಯುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಬಡ್ಡಿಗೆ ಮೀಟರ್ ಬಡ್ಡಿ ಹಾಕಿ ಜನರಿಗೆ ಹಿಂಸೆ ನೀಡಿ ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದ ಹಿನ್ನೆಲೆ, ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮನಿ ಲಾಂಡರಿಂಗ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.