ಪ್ರಯಾಣಿಕರ ಬೇಡಿಕೆ ಮೇರೆಗೆ ನೈಸ್ ರಸ್ತೆಯ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿಯಿಂದ ಮಾದವಾರಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳ ಸೇವೆ ಆರಂಭವಾಗಿದೆ.
ಮಾದವಾರ ಮತ್ತು ಎಲೆಕ್ಟ್ರಾನಿಕ್ ಸಿಟಿಗೆ ನೈಸ್ ರಸ್ತೆಯ ಮೂಲಕ ಬೆಳಗ್ಗೆ 6:40 ರಿಂದ ರಾತ್ರಿ 8 ಗಂಟೆವರೆಗೆ ಬಿಎಂಟಿಸಿ ಬಸ್ ಸೇವೆ ಇರಲಿದೆ. ನವೆಂಬರ್ 20 ರಿಂದ ಈ ಬಸ್ ಸೌಲಭ್ಯ ಆರಂಭವಾಗಿದೆ.
Dear all, what our new and happy nice road services commuters say about their travel pic.twitter.com/tequkZKkO3
— BMTC (@BMTC_BENGALURU) November 21, 2023
ಬೇರೆ ಊರಿನಿಂದ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕರು ಮೆಜೆಸ್ಟಿಕ್‌ಗೆ ತಲುಪಿ ನಂತರ ಅಲ್ಲಿಂದ ಎಲೆಕ್ಟ್ರಾನಿಕ್ ಬಸ್ ಹಿಡಿದು ಪ್ರಯಾಣ ಬೆಳೆಸಬೇಕಿತ್ತು. ಇದಕ್ಕೆ ಬರೋಬ್ಬರಿ 2 ಗಂಟೆ ಸಮಯ ಹಿಡಿಯುತ್ತಿತ್ತು. ಬಿಎಂಟಿಸಿ ಬಸ್ ಇಲ್ಲದ ಕಾರಣ ಪ್ರಯಾಣಿಕರು ಟೆಂಪೋ, ಆಟೋ, ಲಾರಿಗಳಲ್ಲಿ ಸಂಚಾರ ಮಾಡುತ್ತಿದ್ದರು. ಈ ಮಾರ್ಗಕ್ಕೆ ಬಸ್ ಒದಗಿಸುವಂತೆ ಪ್ರಯಾಣಿಕರು ಹಲವಾರು ಬಾರಿ ಮನವಿ ಮಾಡಿದ್ದರು. ಇದೀಗ, ಬಿಎಂಟಿಸಿಯಿಂದ ಮಾದವಾರ – ಎಲೆಕ್ಟ್ರಾನಿಕ್ ಸಿಟಿಗೆ ನೇರ ಬಸ್ ಸೇವೆ ಆರಂಭವಾಗಿದೆ. ಈ ಬಸ್ ನೈಸ್ ರಸ್ತೆಯ ಮೂಲಕ ನಗರದ ಹೊರವಲಯದಲ್ಲಿಯೇ ಸಂಚರಿಸಲಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಿಲಿಂಡರ್ ಸ್ಫೋಟಗೊಂಡು ಐವರಿಗೆ ಗಾಯ
ಇನ್ನು ತುಮಕೂರು ಮತ್ತು ಹಾಸನ ಕಡೆಯಿಂದ ಆಗಮಿಸುವ ಪ್ರಯಾಣಿಕರು ಮೆಜೆಸ್ಟಿಕ್‌ಗೆ ಬರುವ ತೊಂದರೆ ಇಲ್ಲದೆ, ನೇರವಾಗಿ ಮಾದವಾರದಿಂದಲೇ ಎಲೆಕ್ಟ್ರಾನಿಕ್ ಸಿಟಿ ತಲುಪಬಹುದು.