ಬೆಂಗಳೂರು | ಕೊನೆಗೂ ಬಿಡುಗಡೆಯಾದ ‘ನಮ್ಮ ಬಿಎಂಟಿಸಿ’ ಬಸ್ ಟ್ರ್ಯಾಕಿಂಗ್ ಮೊಬೈಲ್​ ಆ್ಯಪ್

Date:

Advertisements
  • ಆ್ಯಪ್ ಬೀಟಾ ಪರೀಕ್ಷೆಯ ಹಂತದಲ್ಲಿದ್ದಾಗ ಆ್ಯಪ್‌ಗೆ ‘ನಿಮ್ ಬಸ್’ ಎಂಬ ಹೆಸರಿತ್ತು
  • ಬಿಎಂಟಿಸಿ ಸಹಾಯವಾಣಿಗಳಿಗೆ ಸಂಪರ್ಕಿಸಲು ಆ್ಯಪ್​ನಲ್ಲಿ ಲಿಂಕ್ ನೀಡಲಾಗಿದೆ

ಬಹುನಿರೀಕ್ಷಿತ ಬಸ್ ಟ್ರ್ಯಾಕಿಂಗ್ ಮೊಬೈಲ್​ ಆ್ಯಪ್ ‘ನಿಮ್ ಬಸ್’ನಿಂದ ‘ನಮ್ಮ ಬಿಎಂಟಿಸಿ’ಯಾಗಿ ಹೊಸ ರೂಪದೊಂದಿಗೆ ಬುಧವಾರ ಅನಾವರಣಗೊಂಡಿದೆ.

ಸತತವಾಗಿ 2 ವರ್ಷಗಳ ಬಳಿಕ ಈ ಆ್ಯಪ್ ಬಿಡುಗಡೆಗೊಂಡಿದೆ. 5,568 ಬಸ್‌ ನಿರ್ವಹಿಸುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರತಿನಿತ್ಯ ಸುಮಾರು 30 ಲಕ್ಷ ಪ್ರಯಾಣಿಕರಿಗೆ ತನ್ನ ಸೇವೆಯನ್ನು ನೀಡುತ್ತಿದೆ. ಸಾರ್ವಜನಿಕರಿಗೆ ಅನುಕೂಲವಾಗಲು ಅಂತಿಮವಾಗಿ ಅಪ್ಲಿಕೇಶನ್ ಪ್ರಾರಂಭಿಸಿದೆ.

ಆ್ಯಪ್ ಬೀಟಾ ಪರೀಕ್ಷೆಯ ಹಂತದಲ್ಲಿದ್ದಾಗ ‘ನಿಮ್ ಬಸ್’ ಎಂದು ಹೆಸರಿಸಲಾಗಿತ್ತು. ಲೈವ್ ಮಾಡುವ ಸಮಯದಲ್ಲಿ ಅದನ್ನು ‘ನಮ್ಮ ಬಿಎಂಟಿಸಿ’ ಎಂದು ಹೆಸರಿಸಲಾಗಿದೆ.

Advertisements

ಆ್ಯಪ್ ಬಳಕೆ ಹೇಗೆ?

‘ನಮ್ಮ ಬಿಎಂಟಿಸಿ’ ಆ್ಯಪ್ ಅನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಆ್ಯಪ್ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಲಭ್ಯವಿದ್ದು, ಭಾಷೆ ಬದಲಾಯಿಸಲು ಸರಳವಾದ ಆಯ್ಕೆ ನೀಡಲಾಗಿದೆ. ಸೈನ್ ಇನ್ ಮಾಡುವುದು ಅಥವಾ ಗೆಸ್ಟ್ ಯೂಸರ್ ಆಗಿಯೂ ಸಾರ್ವಜನಿಕರು ಆನ್‌ಲೈನ್‌ನಲ್ಲಿ ಆ್ಯಪ್ ಬಳಸಬಹುದು.  

ಆ್ಯಪ್‌ನ ಉಪಯೋಗ ಏನು?

  • ನೈಜ ಸಮಯದಲ್ಲಿ ಬಸ್‌ಗಳನ್ನು ಟ್ರ್ಯಾಕ್ ಮಾಡಬಹುದು. ಆದರೆ, ಕೆಲವು ಹಳೆಯ ಬಸ್‌ಗಳನ್ನು ಟ್ರ್ಯಾಕ್ ಮಾಡುವುದಿಲ್ಲ ಎಂದು ತಿಳಿದುಬಂದಿದೆ.
  • ತುರ್ತು ಸಂದರ್ಭಗಳಲ್ಲಿ ಬಳಕೆದಾರರಿಗೆ ಸಹಾಯ ಮಾಡಲು ಅಪ್ಲಿಕೇಶನ್‌ನಲ್ಲಿ ಎಸ್​​ಒಎಸ್ ವೈಶಿಷ್ಟ್ಯವನ್ನು ನೀಡಲಾಗಿದೆ.
  • ಬಿಎಂಟಿಸಿ ಸಹಾಯವಾಣಿಗಳಿಗೆ ಸಂಪರ್ಕಿಸಲು ಆ್ಯಪ್​ನಲ್ಲಿ ಲಿಂಕ್ ನೀಡಲಾಗಿದೆ.
  • ಬಳಕೆದಾರ ಸ್ನೇಹಿ ಇಂಟರ್ಫೇಸ್ ಮತ್ತು ರಿಯಲ್ ಟೈಮ್ ಟ್ರ್ಯಾಕಿಂಗ್, ಹತ್ತಿರದ ನಿಲ್ದಾಣಗಳ ಮಾಹಿತಿ, ಪ್ರಯಾಣದ ಯೋಜನೆ ಮತ್ತು ಇತರ ಹಲವು ಪ್ರಮುಖ ವೈಶಿಷ್ಟ್ಯಗಳೊಂದಿಗೆ ನ್ಯಾವಿಗೇಟ್ ಮಾಡಲು ಸುಲಭವಾಗುವಂತೆ ಆ್ಯಪ್ ರೂಪಿಸಲಾಗಿದೆ.
  • ವಾಹನ ನಿಲುಗಡೆ, ವಿಶ್ರಾಂತಿ ಕೊಠಡಿಗಳು, ಎಟಿಎಂ, ಕುಡಿಯುವ ನೀರಿನ ಸೌಲಭ್ಯ, ನಿರ್ದಿಷ್ಟವಾಗಿ ಬಸ್ ನಿಲ್ದಾಣಗಳು, ಟ್ರಾಫಿಕ್ ಮತ್ತು ಟ್ರಾನ್ಸಿಟ್ ಮ್ಯಾನೇಜ್‌ಮೆಂಟ್ ಸೆಂಟರ್ (ಟಿಟಿಎಂಸಿಗಳು) ಒದಗಿಸುವ ಸೌಲಭ್ಯಗಳನ್ನು ಬಳಕೆದಾರರು ತಿಳಿದುಕೊಳ್ಳಬಹುದಾದ ವೈಶಿಷ್ಟ್ಯವನ್ನು ಆ್ಯಪ್ ಹೊಂದಿದೆ.
  • ಬಳಕೆದಾರರು ಬಿಎಂಟಿಸಿ, ಚಾರ್ಟರ್ಡ್ ಬಸ್‌ಗಳು, ನಮ್ಮ ಮೆಟ್ರೋ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ಗಳ ನಿಲ್ದಾಣಗಳನ್ನು ತಿಳಿದುಕೊಳ್ಳಬಹುದು.
  • ‘ಶುಲ್ಕ ಕ್ಯಾಲ್ಕುಲೇಟರ್’ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಸೇರಿಸಲಾಗುತ್ತದೆ ಎಂದು ಬಿಎಂಟಿಸಿ ತಿಳಿಸಿದೆ.

2022ರ ಡಿಸೆಂಬರ್​​ ಮತ್ತು 2023ರ ಜನವರಿ ಮತ್ತು ಮಾರ್ಚ್​ನಲ್ಲಿ ಆ್ಯಪ್ ಪ್ರಾರಂಭಿಸಲು ನಿರೀಕ್ಷಿಸಲಾಗಿತ್ತು. ಆದರೆ, ತಾಂತ್ರಿಕ ದೋಷಗಳು ಮತ್ತು ಇತರ ಸಮಸ್ಯೆಗಳ ಕಾರಣ ಆ್ಯಪ್ ಅಭಿವೃದ್ಧಿಪಡಿಸಲಾಗಿರಲಿಲ್ಲ. ಅಧಿಕೃತವಾಗಿ ಎಲ್ಲ ಸಮಸ್ಯೆಗಳನ್ನು ನಿವಾರಿಸಿ 2023ರ ಏಪ್ರಿಲ್‌ನಲ್ಲಿ ಬಿಎಂಟಿಸಿ ಆ್ಯಪ್ ಅನ್ನು ಅನಾವರಣಗೊಳಿಸಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | 500ಕ್ಕೂ ಹೆಚ್ಚು ರೌಡಿಶೀಟರ್​ಗಳ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು

“ಈ ಆ್ಯಪ್ ಬಳಕೆದಾರರು ನೈಜ ಸಮಯದಲ್ಲಿ ಬಸ್‌ಗಳನ್ನು ಟ್ರ್ಯಾಕ್ ಮಾಡಬಹುದು. ಆ್ಯಪ್ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಲಭ್ಯವಿದೆ. ಸೈನ್ ಇನ್ ಮಾಡುವುದರೊಂದಿಗೆ ಅಥವಾ ಗೆಸ್ಟ್ ಯೂಸರ್ ಆಗಿಯೂ ಜನರು ಆ್ಯಪ್ ಅನ್ನು ಆನ್‌ಲೈನ್‌ನಲ್ಲಿ ಬಳಸಬಹುದು” ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X