ಬೆಂಗಳೂರಿನಲ್ಲಿ ಮುಸ್ಲಿಂ ಸಮುದಾಯದ ಜನರು ಹೆಚ್ಚಾಗಿ ವಾಸಿಸುತ್ತಿರುವ ಗೋರಿಪಾಳ್ಯ ಪ್ರದೇಶವನ್ನು ಉಲ್ಲೇಖಿಸಿ ಮಾತನಾಡಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ವೇದವ್ಯಾಸಾಚಾರ್ ಶ್ರೀಷಾನಂದ ಅವರು, ”ಗೋರಿಪಾಳ್ಯವು ಪಾಕಿಸ್ತಾನವಾಗಿದೆ. ಅದು ಭಾರತದಲ್ಲಿಲ್ಲ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನ್ಯಾಯಾಧೀಶರೇ ಧಾರ್ಮಿಕ ದ್ವೇಷ ಬಿತ್ತುತ್ತಿದ್ದಾರೆ ಎಂಬ ಆರೋಪ ಮುನ್ನೆಲೆಗೆ ಬಂದಿದೆ.
ನ್ಯಾಯಾಧೀಶರು ಪ್ರಕರಣವೊಂದರ ವಿಚಾರಣೆ ವೇಳೆ ಗೋರಿಪಾಳ್ಯವನ್ನು ಪಾಕಿಸ್ತಾನ ಎಂದು ಕರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ”ಮೈಸೂರು ರಸ್ತೆ ಮೇಲುಸೇತುವೆಗೆ ಹೋಗಿ ನೋಡಿ, ಪ್ರತಿ ಆಟೋರಿಕ್ಷಾದಲ್ಲೂ 10 ಮಂದಿಯಿರುತ್ತಾರೆ. ಇಲ್ಲಿ ಕಾನೂನು ಅನ್ವಯಿಸುವುದಿಲ್ಲ. ಮೈಸೂರು ಮೇಲ್ಸೇತುವೆಯು ಗೋರಿಪಾಳ್ಯದಿಂದ ಎಡಕ್ಕೆ ಮಾರುಕಟ್ಟೆಗೆ ತೆರಳುತ್ತದೆ. ಇದು ಪಾಕಿಸ್ತಾನದಲ್ಲಿದೆ, ಭಾರತದಲ್ಲಲ್ಲ” ಎಂದಿದ್ದಾರೆ.
“ಅಲ್ಲಿಗೆ (ಗೋರಿಪಾಳ್ಯ ಪ್ರದೇಶ) ಎಷ್ಟೇ ಕಟ್ಟುನಿಟ್ಟಿನ ಪೊಲೀಸ್ ಅಧಿಕಾರಿಯನ್ನು ನೇಮಕ ಮಾಡಿದರೂ, ಅಷ್ಟೇ” ಎಂದು ನ್ಯಾಯಾಧೀಶ ವೇದವ್ಯಾಸಾಚಾರ್ ಶ್ರೀಷಾನಂದ ಸಾಯಿ ಹೇಳಿದ್ದಾರೆ.
ಅವರ ಹೇಳಿಕೆ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವ, ಅದರಲ್ಲೂ ಜಾತ್ಯತೀತವಾಗಿ ವರ್ತಿಸಬೇಕಾದ ನ್ಯಾಯಾಧೀಶರು ಇಂತಹ ಹೇಳಿಕೆ ನೀಡುವುದು ಅವರ ಹುದ್ದೆ ಮೇಲಿನ ಭರವಸೆಯನ್ನು ಕಳಚುತ್ತದೆ ಎಂದಿದ್ದಾರೆ.
”ನ್ಯಾಯಾಧೀಶರು ಬಳಸಿದ ಪದಗಳು ಅತ್ಯಂತ ಅನಪೇಕ್ಷಿತವಾಗಿವೆ. ಕಾನೂನನ್ನು ಎತ್ತಿಹಿಡಿಯಬೇಕಾದವರು ಸಹ ಭಾರತೀಯ ಮುಸ್ಲಿಮರನ್ನು ಅಮಾನವೀಯರನ್ನಾಗಿ ಉಲ್ಲೇಖಿಸುವುದು ಸರಿಯಲ್ಲ. ಇದು ಭಾರತೀಯ ಮುಸ್ಲಿಮರನ್ನು ವ್ಯವಸ್ಥಿತವಾಗಿ ಅಮಾನವೀಕರಿಸುವುದರ ಭಾಗವಾಗಿದೆ” ಎಂದು ವಸೀಮ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
”ನ್ಯಾಯಾಂಗದಲ್ಲಿನ ವ್ಯಕ್ತಿಯೊಬ್ಬರು ಈ ರೀತಿ ಮಾಡಿದರೆ, ಭಾರತೀಯ ಮುಸ್ಲಿಮರೊಂದಿಗೆ ಸಾಮಾನ್ಯ ಜನರು ಮತ್ತಷ್ಟು ಅಮಾನುಷವಾಗಿ ನಡೆದುಕೊಳ್ಳುವಂತಾಗುತ್ತದೆ. ನ್ಯಾಯಾಂಗ, ಪೊಲೀಸ್, ಶೈಕ್ಷಣಿಕ ಸಂಸ್ಥೆಗಳು, ಮಾಧ್ಯಮಗಳು, ಸರಕಾರ ಹಾಗೂ ಸಮಾಜದ ದೊಡ್ಡ ಸಂಖ್ಯೆಯು ಭಾರತೀಯ ಮುಸ್ಲಿಮರನ್ನು ಅವರು ಮುಸ್ಲಿಮರು ಎಂಬ ಕಾರಣಕ್ಕೇ ಹೀಗೆ ನಡೆಸಿಕೊಳ್ಳುತ್ತಿದೆ” ಎಂದು ಅವರು ಕಿಡಿಕಾರಿದ್ದಾರೆ.
ಒಂದು ತಿಂಗಳ ಹಿಂದೆ ಕಲಾಪದ ವೇಳೆ ನ್ಯಾಯಾಧೀಶರು ಈ ಹೇಳಿಕೆ ನೀಡಿರುವುದಾಗಿ ಆಲ್ಟ್‌ನ್ಯೂಸ್‌ನ ಪತ್ರಕರ್ತ ಮೊಹಮ್ಮದ್ ಝುಬೇರ್ ಮಾಹಿತಿ ಹಂಚಿಕೊಂಡಿದ್ದು, ಈ ವಿಡಿಯೋವನ್ನು ಈಗ ಬಿಜೆಪಿ ಸದಸ್ಯರು ಸೇರಿದಂತೆ ಬಲಪಂಥೀಯ ಖಾತೆಗಳು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಲು ಬಳಸಿಕೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.
“ನ್ಯಾಯಪೀಠದಲ್ಲಿ ಕುಳಿತಿರುವ ಆ ವ್ಯಕ್ತಿಗೆ ನಿಜಕ್ಕೂ ನ್ಯಾಯ ಪ್ರಜ್ಞೆ ಇದ್ದಿದ್ದರೆ ಗೋರಿಪಾಳ್ಯ, ಮಾರ್ಕೆಟ್ ರೋಡ್‌ಗಳಿಗೆ ಹೋದಾಗ ಅಲ್ಲಿ ‘ಪಾಕಿಸ್ತಾನ’ ಕಾಣುತ್ತಿರಲಿಲ್ಲ. ಬದಲಿಗೆ ಆ ಸ್ಲಂಗಳಲ್ಲಿ ಹೀನಾಯವಾಗಿ ಬದುಕುತ್ತಿರುವ ಮುಸ್ಲಿಮರ ಬಡತನ, ಹಸಿವು, ನಿರುದ್ಯೋಗ, ರೋಗ ರುಜಿನಗಳ ಘೋರ ಸ್ಥಿತಿ ಕಾಣುತ್ತಿತ್ತು. ಅಲ್ಲಿನ ಇಕ್ಕಟ್ಟಾದ ಗಲ್ಲಿಗಳು, ನಾಯಿ ಗೂಡಿನಂತಹ ವಸತಿಗಳು, ತೆರೆದ ಚರಂಡಿ, ಕೆಟ್ಟ ರಸ್ತೆಗಳ ದರ್ಶನ ಆಗುತ್ತಿತ್ತು. ಭಾರತದ ಮುಸ್ಲಿಮರನ್ನು ಇಲ್ಲಿನ ಪ್ರಭುತ್ವ ನಡೆಸಿಕೊಳ್ಳುತ್ತಿರುವ ರೀತಿ, ಮುಸ್ಲಿಮರ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಸ್ಥೂಲ ಚಿತ್ರಣ ದೊರಕುತ್ತಿತ್ತು. ಆದರೇನು ಮಾಡುವುದು, ಈ ‘ನ್ಯಾಯಾಧೀಶ’ನಿಗೆ ಸಾಮಾಜಿಕ ನ್ಯಾಯದ ಸಾಮಾನ್ಯ ಜ್ಞಾನವೂ ಇಲ್ಲದಂತಿದೆ. ಬಹುಷಃ ಇವರು ಸಂಘದ ಪ್ರಾಡಕ್ಟ್ ಇರಬಹುದು. ಇಂತವರು ನ್ಯಾಯ ಪೀಠದಲ್ಲಿ ಮುಂದುವರಿಯಕೂಡದು. ಅದು ಭಾರತದ ನ್ಯಾಯಾಂಗಕ್ಕೆ ದೊಡ್ಡ ಅವಮಾನ. ನ್ಯಾಯ ಪೀಠದಲ್ಲಿ ಕೂತು ಮುಸ್ಲಿಮರ ಕುರಿತಾಗಿ ಆತ ಆಡಿರುವ ಮಾತುಗಳು ಜನಾಂಗ ದ್ವೇಷದಿಂದ ಕೂಡಿದೆ. ಇದು ಅಕ್ಷಮ್ಯ” ಎಂದು ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ಕಿಡಿಕಾರಿದ್ದಾರೆ.
ನ್ಯಾಯಾಧೀಷರು ಸರಿಯಾಗಿ ಹೇಳಿದ್ದಾರೆ. ಇದೇ ವಾಸ್ತವ ಸ್ಥಿತಿ.ಮುಸ್ಲಿಮ್ ಬಾಹುಳ್ಯ ಇರುವ ಪ್ರದೇಶದಲ್ಲಿ ಯಾವುದೇ ಕಾನೂನು ಪಾಲನೆ ಆಗುತ್ತಿಲ್ಲ. ಪೊಲೀಸರು ಅಲ್ಲಿ ಮೂಕಪ್ರೇಕ್ಷಕರು. ಅದೇ ಹಿಂದೂ ಪ್ರದೇಶದಲ್ಲಿ ಪೊಲೀಸರು ಫುಲ್ ಆಕ್ಟಿವ್.
Yes,, judge nija heliddare…
ಸತ್ಯವನ್ನು ಹೇಳಿದ್ರೆ ಯಾರಿಗೂ ಅರಗಿಸಿಕೊಳ್ಳಲು ಆಗುವುದಿಲ್ಲ
ಹರೇ🙏ಕೃಷ್ಣ
ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಾಧೀಶರು ಮಾನ್ಯ ಶೀಷಾನಂದ ರವರು, ದಾವೆಯ ಕಕ್ಷಿದಾರರಿಗೆ ಬಹಳ ಉತ್ತಮವಾದ ಸಲಹೆಗಳನ್ನು ನೀಡುತ್ತಾ ಪರಸ್ಪರರ ಸಮಸ್ಯೆಗಳನ್ನು ಬಗೆಹರಿಸಿ, ನಾಡಿನ ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ. ಸದರಿ ನ್ಯಾಯಾಧೀಶರು, ಗೋರಿಪಾಳ್ಯದಲ್ಲಿನ ರಸ್ತೆ ಸಾರಿಗೆಯ ದಟ್ಟಣೆಯಲ್ಲಿ ಸಾರಿಗೆಯ ಕಾನೂನು ಉಲಂಘನೆಯ ಬಗ್ಗೆ,
ಪೋಲಿಸ್ ಕಾನೂನಿನ ಆಡಳಿತದ ನಿರ್ಲಕ್ಷ್ಯದ ಪರಿಸ್ಥಿತಿ ಬಗ್ಗೆ ವಿವರಿಸಿ, ಅದು ಪಾಕಿಸ್ತಾನದ ರೀತಿಯಲ್ಲಿ ನಡೆಯುತ್ತಿದೆ ಎಂದು ಪೋಲೀಸ್ ಆಡಳಿತವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಇದನ್ನು ಅಪಾರ್ಥ ಮಾಡಿಕೊಳ್ಳುವ ಬದಲು, ಪೋಲಿಸ್ ಇಲಾಖೆಯ ವರಿಷ್ಠರು ಎಚ್ಚೆತ್ತುಕೊಂಡು, ಅಲ್ಲಿನ ಟ್ರಾಫಿಕ್ ಪರಿಸ್ಥಿತಿಯ ಸುವ್ಯವಸ್ಥಿತವನ್ನು ಸುಲಲಿತವಾಗಿ ನಡೆದುಕೊಂಡು ಹೋಗಲು ಕ್ರಮ ಜರುಗಿಸಿ, ಪೋಲಿಸ್ ಇಲಾಖೆಯ ಘನತೆ ಗೌರವಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂಬುದು ಪ್ರಮುಖವಾಗಿ ತಿಳಿಯುವುದು ಪ್ರಶಂಸನೀಯವಾಗುವುದು.
ಹರೇ🙏ಕೃಷ್ಣ
ಇಲ್ಲಿ ಅವರು ವಸ್ತು ಸ್ಥಿತಿ ಯನ್ ವಿವರಿಸಿದ್ದಾರೆ ಅಷ್ಟೇ, ಇಲ್ಲಿ ಎಂತಹ police ಅಧಿಕಾರಿಗಳನ್ನು ನೇಮಿಸಿದ್ದರೂ ಅಷ್ಟೇ ಅಂತ ಹೇಳಿರುವುದರಲ್ಲಿ ತಪ್ಪೇನಿದೆ?
ಅದರ ಬದಲು ನೀವು ಈ ರೀತಿ ಹೇಳಿಕೆ ನೀಡುವುದು ಅಗತ್ಯ ವಲ್ಲ.
SATYA VANNE HELIDDARE ASTAKKU CJI avarige doubt iddare omme NO go zone (peacefool area ge hogi barli
It’s fact
True and well words sir.., hat,s off u sir,
This judge in Karnataka is blesdings in disgise to public in Bangalore. He speaks truth and facts. Let us not ofend. Let us support such honest person
ಮಾನ್ಯ ನ್ಯಾಯಾಧೀಶರು ವಾಸ್ತವವನ್ನು ತಿಳಿಸಿದ್ದಾರೆ, ಅದರಲ್ಲಿ ತಪ್ಪಿಲ್ಲ ಆದರೆ, ವೋಟ್ ಪಡೆದು ಸ್ಥಾನಕ್ಕೆ ಬರುವ ಮುಖಂಡರು ಇದನ್ನು ತಿಳಿದುಕೊಂಡು ಅಲ್ಲಿ ನಡೆಯುವ ಯಾವುದೇ ಸಾಂವಿಧಾನಿಕ ವಿರುದ್ಧವಾದ ಚಟುವಟಿಕೆಗಳನ್ನು ಪೋಷಿಸುವ ಬದಲು ಅವುಗಳನ್ನು ಮೆಟ್ಟಬೇಕು. ಜಾತ್ಯಾತೀತವಾದ ರಾಷ್ಟ್ರದಲ್ಲಿ ಕಾನೂನನ್ನು ಮಾಡುವರು ಕಾನೂನನ್ನು ಸರಿಯಾಗಿ ಪಾಲಿಸಬೇಕು.
Please rectify your Head Line else contempt of Court may happen as you are interpreted Justice word in different ways. When too much dirty things in our House we keep saying now our house looks like Municipal toilet it doesn’t mean our house is public toilet. From the point of maintenance of law and order he might have compare to Pakistan administration. We are proud all citizens irrespective of caste and religion
ಜಡ್ಜ್ ಕಾನೂನು ಜಾರಿ ಮಾಡಬೇಕಾದ ಪೊಲೀಸ್ ನಿರ್ಲಕ್ಷವನ್ನ ಎತ್ತಿ ತೋರಿಸಲು ಪಾಕಿಸ್ತಾನ ಹೆಸರು ಪ್ರಸ್ತಾಪ ಮಾಡಿದ್ದಾರೆ. ಎಲ್ಲಿಯೂ ಮುಸ್ಲಿಂ ಭಾವನೆ ಮತ್ತು ಧರ್ಮವನ್ನು ಕೀಳಾಗಿ ಹೇಳಿಲ್ಲ. ಅವರ ಹೇಳಿಕೆಯಲ್ಲಿ ಕಾನೂನು ವ್ಯವಸ್ಥೆ ಹಾಗೂ ಪೊಲೀಸರ ಮೇಲೆ ವ್ಯಂಗ್ಯ ಭರಿತ ಚಾಟಿ ಏಟು ಇದೆ. ವಿಡಿಯೋ ಸರಿಯಾಗಿ ನೋಡಿ ಕೇಳಿಸಿಕೊಂಡು ನಂತರ ಟೀಕೆ ಮಾಡಬಹುದು.
ಜಡ್ಜ್ ಸಾಹೇಬರು ಸರಿಯಾದುದನ್ನೇ ಹೇಳಿದ್ದಾರೆ. ಅವರಿಗೆ ಬಡತನ ಆದ್ದರಿಂದ ಅವರು ಹಾಗೆ ಇದ್ದಾರೆ ಎಂದು ಝುಬೈರ್ ಹೇಳಿದ್ದಾನೆ. ಬಡತನ ಇದ್ರು ಸಾಲು ಸಾಲು ಮಕ್ಕಳು ಹುಟ್ಟಿಸಲು ಬಡತನ ಇಲ್ಲ. ಸರಿಯಾಗಿ ವಿದ್ಯೆ ಬುದ್ದಿ ಕೊಡಲು ಆಗದಿದ್ರೂ ದಜನ್ ಗಟ್ಟಲೆ ಮಕ್ಕಳು ಹುಟ್ಟಿಸಿ ಬಿಡುತ್ತಾರೆ
Sir, ಭೂಮಿ ಮೇಲೆ ಕೊನೆಗೆ muslim santati ಮಾತ್ರ uliyutte anta ಅರ್ಥವೇ?
ವಾಸ್ತವತೆ ದರ್ಶನ ತಪ್ಪೆ, ಮಹಮ್ಮದಿಯರು ಹೆಚ್ಚು ಇರುವಲ್ಲಿ ಕಾನೂನು ಅವ್ಯವಸ್ಥೆ ಎಲ್ಲರಿಗೂ ಗೊತ್ತಿರುವುದೇ, why the ,so called leaders, faith preachers, mob raisers of mohammadans at least try to be pragmatic and make peace followers to follow peace path.
ಜಡ್ಜ್ ಸಾಹೇಬರು ಈಗಿನ ವಾಸ್ತವ ಸ್ಥಿತಿಯನ್ನು ಕಂಡು ಹೇಳಿರುತ್ತಾರೆ ಅದಕ್ಕೆ ಅಪಾರ್ಥ ಮಾಡಿಕೊಳ್ಳುವುದು ಸರಿಯಲ್ಲ ನಮ್ಮ ದೇಶದಲ್ಲಿರ್ತಕ್ಕಂತ ಪ್ರತಿಯೊಬ್ಬ ನಾಗರಿಕರಿಗೂ ಒಂದೇ ಕಾನೂನು ಹಾಗಾಗಿ ಕಾನೂನನ್ನು ಎಲ್ಲರು ಗೌರವಿಸಬೇಕು ಮತ್ತು ಪಾಲಿಸಬೇಕೆಂದು ಈ ರೀತಿ ಹೇಳಿರುತ್ತಾರೆ,ಅದರಲ್ಲಿ ತಪ್ಪೇನು ಇಲ್ಲ.
ಜೆಡ್ ಸಾಹೇಬರು ಈಗಿನ ವಾಸ್ತವ ಸ್ಥಿತಿಯನ್ನು ಕಂಡು ಹೇಳಿರುತ್ತಾರೆ ಅದಕ್ಕೆ ಅಪಾರ್ಥ ಮಾಡಿಕೊಳ್ಳುವುದು ಸರಿಯಲ್ಲ ನಮ್ಮ ದೇಶದಲ್ಲಿರ್ತಕ್ಕಂತ ಪ್ರತಿಯೊಬ್ಬ ನಾಗರಿಕರಿಗೂ ಒಂದೇ ಕಾನೂನು ಹಾಗಾಗಿ ಕಾನೂನನ್ನು ಎಲ್ಲರು ಗೌರವಿಸಬೇಕು ಮತ್ತು ಪಾಲಿಸಬೇಕೆಂದು ಈ ರೀತಿ ಹೇಳಿರುತ್ತಾರೆ,ಅದರಲ್ಲಿ ತಪ್ಪೇನು ಇಲ್ಲ.
ಅಲ್ಲಿನ ಮೂಲಭೂತ ಸೌಕರ್ಯ ಅಭಿವೃದ್ಧಿ ಕಲ್ಪಿಸುವ ನಿಟ್ಟಿನಲ್ಲಿ ಈ ಮೂಲಕ ಅವರು ಚುನಾಯಿತ ಪ್ರತಿನಿಧಿಗಳನ್ನು ಹಾಗೂ ಸರ್ಕಾರದ ವೈಫಲ್ಯ ಖಂಡಿಸಿ ಗೋರೀಪಾಳ್ಯ ಭಾರತದಲ್ಲಿ ಇದೆಯೋ ಅಥವಾ ಪಾಕಿಸ್ತಾನದಲ್ಲಿ ಇದೆಯೋ ಎಂದು ಅವರು ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರದ ವೈಫಲ್ಯ ಖಂಡಿಸಿ ಮಾತನಾಡಿರುವುದು ಎಂದು ಎದ್ದು ಕಾಣುತ್ತದೆ ಅಷ್ಟೇ ಇರಬಹುದು ಎಂದು ನನ್ನ ಅನಿಸಿಕೆ ನಮ್ಮ ಪ್ರೀತಿಯ ಮುಸ್ಲಿಂ ಸಮುದಾಯದ ಬಾಂಧವರೇ
ಸುಮ್ಮನೆ ಎಲ್ಲೆಲ್ಲೊ ಕುಳಿತು ಕಾಮೆಂಟ್ ಮಾಡೋದಲ್ಲ,, ಅಲ್ಲಿ ನಡಿತಿರೋದನ್ನೆ ನ್ಯಾಯಾಧೀಶರು ಹೇಳಿದ್ದಾರೆ…
Yes right conversations Jury is God tq my lord
ಮಾನ್ಯ ನ್ಯಾಯಾದೀಶರ ವಿವರಣೆ ಸರಿ ಇದೆ ಆದರೆ ಲೇಖನದಲ್ಲಿ ಜ್ಯಾತಾತಿತ ಪದ ಬಳಕೆಯು ನೆಲದ ಕಾನೂನುಗಳನ್ನು ಪಾಲಿಸಿದಿರು ಎಂಬ ಅರ್ಥ ಇದೆ
ಜಡ್ ಸಾಹೇಬ ಸತ್ಯವನ್ನ ಹೇಳಿದರೆ ಅದು ಪಾಕಿಸ್ತಾನವೇ ಅಲ್ಲೊಬ್ಬ ಪೊಲೀಸ್ ಅಧಿಕಾರಿ ಏನು ಮಾಡಲಿಕ್ಕಾಗಲ್ಲ ವಾಸ್ತವ ಇರೋದೇ ಹಾಗೆ ಅಲ್ಲಿ ಗೋರಿಪಾಳ್ಯ ಅಲ್ಲ ಅದು ಪಾಕಿಸ್ತಾನವೇ
ಇದು.. ಒಂದು.. ದೊಡ್ಡ.. ತಪ್ಪು ಅಪಾರ್ಥ. ಮಾಡಿ ಕೊಂಡಿದರೆ.. ಇದು ವಾಸ್ತವ ಸ್ಥಿತಿ ಬಗ್ಗೆ ವಿವರಣೆ ಕೊಟ್ಟಿದ್ದಾರೆ.. ಅದನ್ನ ಈ ರೀತಿ.. ಜನರಿಗೆ ತುಪ್ಪು ಸಂದೇಶ ಕೊಟ್ಟಿದ್ದಾರೆ 🙏🏼🙏🏼ಇದು.. ತಪ್ಪು ಸಂದೇಶ 🙏🏼🙏🏼ಅರ್ಥ ಮಾಡಿಕೊಂಡವನು.. ಬುದ್ದಿ ವಂತ 🙏🏼🙏🏼
ಯಾರು ಏನೇ ಹೇಳಿದರೂ ಕೂಡ ಅವರು ಮಾತಾಡಿರುವುದು ಒಂದು ಕಡೆ ಸರಿ ಇದೆ ಒಂದು ಕಡೆ ತಪ್ಪಿದ. ರಾಜಕೀಯದ ತಮ್ಮ ಬೇಳೆಗಳನ್ನು ಬೇಹಿಸಿಕೊಳ್ಳಿ ಗೋಸ್ಕರ ಇತರ ಪ್ರಾಬ್ಲಮ್ ಗಳನ್ನ ಕ್ರಿಯೇಟ್ ಮಾಡುತ್ತಿದ್ದಾರೆ ಅವರ ಪಾಕಿಸ್ತಾನಕ್ಕೆ ಹೋಲಿಸಿರೋದು ತಪ್ಪು.
ನ್ಯಾಯಾಧೀಶರು ಮುಖ್ಯ ವಿಷಯದ ಪಾರ್ಶ್ವದಲ್ಲಿ ಈ ಮಾತಾಡಿದ್ದಾರೆ. ಆ ಪ್ರದೇಶದಲ್ಲಿ ಕಾನೂನು-ಶಿಸ್ತು ತೀರಾ ಹದೆಗೆಟ್ಟಿದೆ ಎಂಬುದು ಇಲ್ಲಿ ಅವರ ಹೇಳಿಕೆಯ ಒಳ ತಿರುಳು. ಪಾಕಿಸ್ತಾನ ಶಬ್ದ ಉಲ್ಲೇಖವಾಗಬಾರದಿತ್ತು. ಆದರೆ 14೦೦ ವರ್ಷ ಹಿಂದೆ ಬರೆಯಲಸ್ದ ಪುಸ್ತಕವೊಂದರ ಕಾಲಬಾಧಿತ ಅಮಾನವೀಯ-ಅಕಾಲಿಕ ಹಾಗೂ ಸೌಹಾರ್ದ ವಿರೋಧಿ ಸಾಲುಗಳನ್ನು ಈ ಹೊತ್ತಿಗೂ ಶಿರಸಾವಹಿಸುತ್ತಿರುವ ಮಂದಿ ಗುಂಪಾಗಿ ಬಹುಸಂಖೆಯಲ್ಲಿ ವಾಸಿಸುತ್ತಿರುವ ಭಾರತದ ಎಲ್ಲ ಭಾಗ-ಪ್ರದೇಶಗಳಲ್ಲೂ ಕಾನೂನು-ಶಿಸ್ತ್ತು ಸಂಚಾರ ನಿಯಮಕ್ಕೆ ಕವಡೆ ಕಿಮ್ಮತ್ತೂ ಇಲ್ಲದಿರುವುದು ಮತ್ತು ಕಾನೂನು ಪಾಲಕರನ್ನು ಇವರು ಹೆದರಿಸಿ ತಮಗೆ ಬೇಕಾದಂತೆ ಬದುಕುವುದು ಸಾಮಾನ್ಯ. ಅದು ಕೆಜೆ ಹಳ್ಳಿ ಇರಬಹುದು ದಿಲ್ಲಿ ಇರಬಹುದು ಮೀರತ್, ಕಾನ್ಪುರ, ಕೊಲ್ಕತ್ತಾ,_ಪಹಾರ್ ಗಂಜ್, ಧಾರಾವಿ- ಭಿವಂಡಿ-ಗೊವಂಡಿ ಗಲ್ಲಿ ಇರಬಹುದು..ಒಂದಷ್ಟು ದೇಶದ ಪ್ರದೇಶಗಳಲ್ಲಿ ಎಲ್ಲೆ ಲ್ಲಿ ಯಾವ ಯಾವ ಜನ ಸಮುದಾಯದ ವಾಸ್ತವ್ಯ ಹೆಚ್ಚಿದೆ ಅಲ್ಲಲ್ಲೆಲ್ಲ ಬದುಕು-ಬದುಕುವ ರೀತಿ ಹೇಗಿದೆ ಎಂದು ಕನಿಷ್ಠ ಒಂದೊಂದು ವಾರ ಖುದ್ದು ಇದ್ದು ನೋಡಿ ಬನ್ನಿ. ಯಾವ ಪೂರ್ವಾಗ್ರಹ ವೂ ಇಲ್ಲದೆ ಮುಕ್ತ ಮನದಿಂದಲೆ ಹೋಗಿ. ಖಾಲಿ ಇರುವ ನಿಮ್ಮ ಎದೆಯೊಳಗೆ ಒಂದು ನಿರ್ದಿಷ್ಟ ಜನ ಸಮುದಾಯ ಬದುಕುವ ರೀತಿಯ ಬಗ್ಗೆ ಆಕ್ಢೇಪ ಕಳವಳ ಹುಟ್ಟದಿದ್ದರೆ ಮತ್ತೆ ಹೇಳಿ.
ಇವರು ಅತ್ಯುತ್ತಮ ನ್ಯಾಯಾಧೀಷರಲ್ಲಿ ಒಬ್ಬರು. ಇವರ ತೀರ್ಪುಗಳನ್ನು ನೀಡುವಾಗ ಕಕ್ಷದಾರರಿಗೆ ಯಾವುದೇ ಸಂದೇಹ – ಗೊಂದಲಗಳು ಇರಬಾರದು ಎಂದು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ತೀರ್ಪುನ್ನು ಕೊಡುತ್ತಾರೆ.
ಇಂತಹ ನ್ಯಾಯಾಧೀಷರು ತಮ್ಮ ತೀರ್ಪುನ್ನು ನೀಡುವಾಗ ಆ goripaalyada ಭಯಾನಕ ನಿಜಾಂಶವನ್ನು ತಿಳಿಸಿದ್ದಾರೆ. ಬಡತನ ದಾರಿದ್ರ್ಯ ಇದ್ದವರಿಗೆ ಕಾನೂನು ಪಾಲಿಸಬಾರದು ಅಂತ ಎಲ್ಲೂ ಹೇಳಿಲ್ಲ.
ಪಂಚೆರ್ ಅಂಗಡಿಯವರೆಲ್ಲ ಮಾಧ್ಯಮ ಲೋಕಕ್ಕೆ ಬಂದ್ರೆ ಅವರಿಂದ ನ್ಯಾಯಾಧೀಷರು ಮತ್ತು ಕಾನೂನು ಅವಹೇಳನ ಮಾಡೋದು ಬಿಟ್ರೆ ಬೇರೇನೂ ಗೊತ್ತಿರತ್ತೆ.
ನೀವೂ ಮತ್ತು ನಿಮ್ಮಂತವರು ಇರೋವರೆಗೂ ಈ ದೇಶ ಉದ್ದಾರ ಆಗಲ್ಲ, ಆಗಕ್ಕೂ ನೀವೂ ಬಿಡಲ್ಲ.
ಇಲ್ಲಿ ಯಾವುದೇ ಧರ್ಮದ ಜನರಿಗೆ ಅಪಚಾರವಾಗಿಲ್ಲ. ಆದ್ರೂ ಕೆಲವರು ಕುಂಬಳ ಕಾಯಿ ಕಳ್ಳ ಯಾರು ಅಂದ್ರೆ ಹೆಗಲು ಮುಟ್ಟಿಕೊಳ್ಳೋದ್ಯಾಕೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಲ್ಲಿ ಎಲ್ಲಾ ಮತ ಪಂಥಗಳ ಜನರು ಅಭಿವೃದ್ಧಿ ಹೊಂದುತ್ತಿದ್ದಾರೆ. ಎಷ್ಟು ಉತ್ತಮ ಶಿಕ್ಷಣ ನೀಡಿದರೂ ಮುಸ್ಲಿಮರು ಏಕೆ ಯಾವಾಗಲೂ ಹಿಂದುಳಿಯಲು ಇಷ್ಟ ಪಡುತ್ತಾರೆ ಎಂದು ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನಸಂಖ್ಯೆ ನಿಯಂತ್ರಣ ಮಾಡಲು ಅವರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಸಂಪನ್ಮೂಲ ದುರುಪಯೋಗ ಆಗುತ್ತಾ ಇದೆ. ಅಭಿವೃದ್ಧಿ ಸಾಧ್ಯವಿಲ್ಲ.
ನಮ್ಮ ಸರ್ ಉದಾಹರಣೆ ಕೊಟ್ಟಿದ್ದು ತಪ್ಪೆ ಅಲ್ಲ ಇವರು ಇರುವ ಸತ್ಯತೆಯ ಸತ್ಯಾಂಶವನ್ನಾ ಹೇಳಿದ್ದಾರೆ ಅದನ್ನು ಅಪಾರ್ಥ ಮಾಡಿಕೊಂಡವರದು ತಪ್ಪು ತಿಳುವರಿಕೆ ನಮ್ಮ ಭಾರತದೇಶದಲ್ಲಿದ್ದುಕೊಂಡು ಪ್ರತಿಯೊಂದು ಸರಕಾರದ ಸೌಲಬ್ಯಗಳನ್ನಾ ಮೊದಲುಪಡೆದುಕೊಳ್ಳುವವರೆ ಮುಸ್ಲಿಂ ಜನಾಂಗ ಅದೆ ರಿತಿ ನಮ್ಮಬ್ರಾಹ್ಮಣ ಜನಾಂಗಕ್ಕೆ ಎಷ್ಟರಮಟ್ಟಿಗೆ ಸೌಲಬ್ಯಗಳನ್ನಾ ಕೊಟ್ಟಿದೆ ಅದನ್ನಾ ಪರಿಶೀಲಿಸಿ ನಮ್ಮ ಈ ಜೀವನದಲ್ಲಿ ಇವರಂತಹಾ ನ್ಯಾಯಾದೀಶರನ್ನಾ ಕಾಣ್ತಾ ಇದ್ದೇವೆ ನಾವೇ ಧನ್ಯರು ನೇರ ದಿಟ್ಟ ಉತ್ತರಗಳು ಯಾರ ಮುಲಾಜಿಗು ಮರ್ಜಿಯನ್ನಾ ಒಳಪಡುವುದಿಲ್ಲಾ ಇಂತಹ ನ್ಯಾಯಾಧಿಶರು ನಮಗೆ ಭೇಕು ನಮ್ಮ ಸರ್ರ್ ಗೆ ನಮ್ಮದು ಸಂಪೂರ್ಣ ಒಪ್ಪಿಗೆ ಇದೆ
It is really a Learned Decision. ಕಠೋರ ಸತ್ಯ ಕೆಲವರಿಗೆ ಅನಪೇಕ್ಷಿತ ಎಂದೆನಿಸುತ್ತದೆ. ನ್ಯಾಯಾಧೀಶರು ಸತ್ಯವನ್ನೇ ಹೇಳಿದ್ದಾರೆ. ನ್ಯಾಯಾಧೀಶರಿಗೆ ಧನ್ಯವಾದಗಳು.
ಭಾರತದಲ್ಲಿರುವ ಮುಸ್ಲಿಂರಿಗೂ ಭಾರತೀಯ ಪೌರತ್ವ ನೀಡಿದೆ ಆದರೆ ಅವರಿಗೆ ಭಾರತದ ಎಲ್ಲ ಸವಲತ್ತುಗಳು ದೊರಕಿದೆ ಆದರೆ ಜನಸಂಖ್ಯಾ ನಿಯಂತ್ರಣ ಕಾನೂನು ಮಾತ್ರ ಅನ್ವಯಿಸದು ನ್ಯಾಯದೀಶರು ಹೇಳಿದ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ, ಯಾವುದೇ ಗಲಾಟೆ ಯಾವುದೇ ಸಮಸ್ಯೆಯಿಂದ ಆ ಏರಿಯಾದಲ್ಲಿರುವ ಕ್ರಿಮಿನಲ್ ಗಳನ್ನು ಸಲಿಸಾಗಿ ನುಗ್ಗಿ ಬಂಧಿಸಬಲ್ಲರೇ ನಮ್ಮ ಪೋಲೀಸ್ ಅಧಿಕಾರಿಗಳು, ಇದೆಲ್ಲ ಸರಿಹೋಗಬೇಕಾದರೆ ದೇಶದ ಕಾನೂನು ಎಲ್ಲರಿಗೂ ಒಂದೇ ಇರಬೇಕು, ಜನಸಂಖ್ಯಾ ನಿಯಂತ್ರಣ ಶಿಕ್ಷಣ ಆರೋಗ್ಯ ಎಲ್ಲರಿಗೂ ದೊರಕಬೇಕು, ಭಾರತೀಯನಷ್ಟೆ ಆಗಿರಬೇಕು ಯಾವುದೇ ಧರ್ಮ ಜಾತಿ ಪದ ಬಳಕೆ ಇರಬಾರದು ಅವರವರ ಅಂಧ ಶ್ರದ್ದೆಗಳು ಅವರವರ ಮನೆಯಲ್ಲಿರಬೇಕು, ಸತ್ಯ ಕಹಿಯಾಗಿರುತ್ತೆ ನ್ಯಾಯಧೀಶರು ಜನರ ಭಾವನೆಗೆ ಸ್ಪಂದಿಸುವವರಾಗಿದ್ದಾರೆ ನ್ಯಾಯದ ಪರವಿದ್ದಾರೆ ಅದನ್ನು ಕಾನೂನು ವ್ಯಾಪ್ತಿ ಮೀರಿರುವವರಿಗೆ ಸಹಿಸಲಾಗದು.