ಬೆಂಗಳೂರು | ಭೂಮಿ, ವಸತಿ ಹಕ್ಕುಪತ್ರಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಕುಟುಂಬಗಳು

Date:

Advertisements

ಸಾಗುವಳಿ ಭೂಮಿ ಮತ್ತು ವಾಸಿಸುತ್ತಿರುವ ನಿವೇಶನಗಳ ಹಕ್ಕುಪತ್ರಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಕುಟುಂಬಗಳು ಒಂದು ಗಂಭೀರ ಯುದ್ಧಕ್ಕೆ ಸಿದ್ದರಾಗಬೇಕಾದ ಪರಿಸ್ಥಿತಿಯನ್ನು ಈ ಸರ್ಕಾರಗಳು ತಂದೊಡ್ಡಿವೆ ಎಂದು ರೈತ ಸಂಘದ ಮುಖಂಡ ಟಿ ಯಶವಂತ್ ಕಿಡಿಕಾರಿದರು.

ಬೆಂಗಳೂರಿನಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ನಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಬಡವರ ‘ಬರಿಹೊಟ್ಟೆ ಸತ್ಯಾಗ್ರಹ’ದಲ್ಲಿ ಅವರು ಮಾತನಾಡಿದರು. “ಸ್ವಾತಂತ್ರ್ಯ ಬಂದು 76 ವರ್ಷಗಳಾಗಿವೆ. ಆದರೂ, ರಾಜ್ಯದ ಬಹುತೇಕ ಬಡವರು, ದಲಿತರು, ಆದಿವಾಸಿಗಳು, ಅಲೆ ಮಾರಿಗಳು ಭೂ ವಂಚಿತರಾಗಿ, ವಸತಿ ವಂಚಿತರಾಗಿ ಬದುಕುತ್ತಿದ್ದಾರೆ. ಸರ್ಕಾರಗಳು ಜನ ವಿರೋಧಿ ನೀತಿಗಳನ್ನು ತಂದು ಜನರನ್ನು ಶೋಷಿಸುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಸರ್ಕಾರಗಳು ಬಡವರಿಗೆ ಭೂಮಿ ಕೊಡಲು ಭೂಮಿ ಇಲ್ಲ ಎನ್ನುತ್ತಿವೆ. ಆದರೆ, ಕೈಗಾರಿಕೆಗಳಿಗೆ, ಪ್ಲಾಂಟರ್‌ಗಳಿಗೆ, ಉಳ್ಳವರರಿಗೆ, ಉದ್ಯಮಗಳಿಗೆ ಸಾವಿರಾರು ಎಕರೆ ಭೂಮಿಯನ್ನು ಕೊಟ್ಟಿದ್ದಾರೆ. ನಾವು ಬಂಡವಾಳಿಗರ ರೀತಿಯಲ್ಲಿ ನೂರಾರು ಎಕರೆ ಭೂಮಿ ಕೊಡಿ ಅಂತ ನಾವು ಕೇಳುತ್ತಿಲ್ಲ. ನಾವು ವಾಸಿಸುತ್ತಿರುವ, ಸಾಗುವಳಿ ಮಾಡುತ್ತಿರುವ ತುಂಡು ಭೂಮಿಗೆ ಹಕ್ಕುಪತ್ರ ಕೊಡಿ ಅಂತ ಕೇಳ್ತಿದ್ದೀವಿ. ಅದನ್ನೂ ಕೊಡಲು ಸರ್ಕಾರಗಳು ಹಿಂದೇಟು ಹಾಕುತ್ತಿವೆ” ಎಂದು ಕಿಡಿಕಾರಿದರು.

Advertisements

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಒಂದೇ ವಾರದಲ್ಲಿ ಬಡವರ ಭೂಮಿ, ವಸತಿ ಸಮಸ್ಯೆ ಪರಿಹರಿಸಬಹುದು: ಬಡಗಲಪುರ ನಾಗೇಂದ್ರ

“ಕೈಗಾರಿಕೆಯ ಹೆಸರಿನಲ್ಲಿ ರೈತರ ಭೂಮಿಯನ್ನ ಸರ್ಕಾರಗಳು ಕಿತ್ತುಕೊಂಡಿವೆ. ಬೇಲಿ ಹಾಕಿಕೊಂಡಿವೆ. ರೈತರಿಂದ ಕಸಿದುಕೊಂಡ ಕೃಷಿ ಭೂಮಿ ಬರಡಾಗಿ ಪಾಳು ಬಿದ್ದಿದೆ. ಅಲ್ಲಿ ಯಾವ ಕೈಗಾರಿಕೆಗಳೂ ಬರಲಿಲ್ಲ. ಯಾವ ಬಡವರಿಗೂ ಉಪಯೋಗವಾಗಲಿಲ್ಲ. ಆದರೆ, ರೈತರ ಆ ಭೂಮಿಯನ್ನು ಕಾರ್ಪೊರೇಟ್‌ಗಳಿಗೆ ಕೊಟ್ಟು, ರೈತರನ್ನ ಬೀದಿ ಪಾಲು ಮಾಡಿದ್ದಾರೆ. ಈ ಹೋರಾಟ ಆಳುವವರಿಗೆ ಬಿಸಿ ಮುಟ್ಟಿಸಲಿದೆ” ಎಂದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X