ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಬೆಂಗಳೂರು ಬಂದ್ ಮಾಡುತ್ತಿವೆ. ಆದರೆ, ಹೋರಾಟದ ಹೆಸರಿನಲ್ಲಿ ಕೀಡಿಗೇಡಿಗಳು ಹೋಟೆಲ್ಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ನಡೆದಿದೆ.
ಬೆಂಗಳೂರಿನ ಜಯನಗರದ ಉಡುಪಿ ಹಬ್ಗೆ ನುಗ್ಗಿ ಗ್ಲಾಸ್, ಪೀಠೋಪಕರಣಗಳನ್ನು ಒಡೆದು ಹಾಕಿದ್ದಾರೆ. ಬೈಕ್ನಲ್ಲಿ ಬಂದಿದ್ದ ಶಿವು, ವಿಶ್ವ ಹಾಗೂ ಇತರರಿಂದ ಈ ಕೃತ್ಯ ನಡೆದಿದೆ.
ಬೆಂಗಳೂರು ಬಂದ್ ಇದ್ದರೂ ಕೂಡ ಹೋಟೆಲ್ ಬಾಗಿಲು ಮುಚ್ಚಿಲ್ಲ ಎಂದು ಹೋರಾಟದ ಹೆಸರಿನಲ್ಲಿ ಬಂದ ಮೂವರು ವ್ಯಕ್ತಿಗಳು ಈ ಕೃತ್ಯ ನಡೆಸಿದ್ದಾರೆ.
ಈ ಕುರಿತು ಹೋಟೆಲ್ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಿವು, ವಿಶ್ವ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ತನಿಖೆ ವೇಳೆ ಇವರು ಜಯನಗರ ಎಂಎಲ್ಎ ರಾಮಮೂರ್ತಿ ಕಡೆಯವರು ಎಂದು ತಿಳಿದುಬಂದಿದೆ.