ಮಾದಕ ವಸ್ತು ಮಾರಾಟಗಾರರ ವಿರುದ್ಧ ಕಾರ್ಯಾಚರಣೆ ನಡೆಸಿ ₹1.5 ಕೋಟಿ ಮೌಲ್ಯದ ಎಂಡಿಎಂಎ ಹರಳು ಮತ್ತು ಮಾತ್ರೆಗಳನ್ನು ಬಾಣಸವಾಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೂರ್ವ ಬೆಂಗಳೂರಿನಲ್ಲಿ ಒರ್ವ ವ್ಯಕ್ತಿಯೊಬ್ಬ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾನೆ ಎಂಬ ಸುಳಿವು ಆಧರಿಸಿ ಶಂಕಿತನ ಬಲೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಶಂಕಿತ ಆರೋಪಿಯು ಎಂಡಿಎಂಎ ಹರಳುಗಳು ಮತ್ತು ಮಾತ್ರೆಗಳಿದ್ದ ಬ್ಯಾಗ್‌ನೊಂದಿಗೆ ಕಲ್ಯಾಣ್ ನಗರ್ ಸರ್ವೀಸ್ ರಸ್ತೆಗೆ ದ್ವಿಚಕ್ರ ವಾಹನದಲ್ಲಿ ಬಂದಿದ್ದಾನೆ. ನಮ್ಮನ್ನ ಕಂಡ ತಕ್ಷಣ ಸ್ಥಳದಿಂದ ಓಡಿಹೋಗಿದ್ದಾನೆ. ಸ್ವಲ್ಪ ದೂರದವರೆಗೆ ಅವನನ್ನು ಹಿಂಬಾಲಿಸಿದೆವು. ಆದರೆ, ಅವನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಆದರೆ, ಬೆನ್ನಟ್ಟಿದ ಸಂದರ್ಭದಲ್ಲಿ ಡ್ರಗ್ಸ್ ಇದ್ದ ಆತನ ಬ್ಯಾಗ್ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ” ಎಂದು ಅಧಿಕಾರಿ ಹೇಳಿದ್ದಾರೆ.
“ಆರೋಪಿ ವಿದೇಶಿ ಪ್ರಜೆಯಾಗಿದ್ದು, ಆತನ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ” ಎಂದಿದ್ದಾರೆ.