ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುಂಡಿಗಳದೇ ದರ್ಬಾರಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಂಕಿ ಅಂಶಗಳ ಪ್ರಕಾರ ಸದ್ಯ ನಗರದಲ್ಲಿ 11,366 ಗುಂಡಿಗಳಿವೆ. ಕಳಪೆ ಕಾಮಗಾರಿ, ಅತಿಯಾದ ಮಳೆ ಸೇರಿದಂತೆ ಇನ್ನಿತರೆ ಹಲವು ಕಾರಣಗಳಿಂದ ರಸ್ತೆಗಳಲ್ಲಿ ಗುಂಡಿಗಳು ಬೀಳುತ್ತಿವೆ. ಇದೀಗ ನಗರದ ಕೆನ್ಸಿಂಗ್ಟನ್ ಜಂಕ್ಷನ್ ಸಮೀಪದ ರಸ್ತೆ ಕುಸಿದಿದ್ದು, ದೊಡ್ಡ ಗುಂಡಿ ಬಿದ್ದಿದೆ.
ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಗುಂಡಿ ಬಿದ್ದಿದ್ದು, ಮುಂಜಾಗ್ರತಾ ಕ್ರಮವಾಗಿ ಗುಂಡಿಯ ಸುತ್ತಲು ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಕೆನ್ಸಿಂಗ್ಟನ್ ಜಂಕ್ಷನ್ ಬಳಿ ಸಂಚಾರ ನಡೆಸುವವರು ಪರ್ಯಾಯ ಮಾರ್ಗಗಳನ್ನು ಬಳಸಬೇಕಾಗಿದೆ.
”ಸಂಚಾರ ಸಲಹೆ”
“Traffic Advisory”
ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೆನ್ಸಿಂಗ್ಟನ್ ಜಂಕ್ಷನ್ ಸಮೀಪದ ರಸ್ತೆ ಕುಸಿದಿದ್ದು ಮುಂಜಾಗ್ರತಾ ಕ್ರಮವಾಗಿ ಗುಂಡಿಯ ಸುತ್ತಲು ಬ್ಯಾರಿಕೇಡ್ ಗಳನ್ನು ಅಳವಡಿಸಿಲಾಗಿರುತ್ತದೆ. ದಯವಿಟ್ಟು ಸಹಕರಿಸಿ.
The road near Kensington Junction under Halasur Traffic Police Station has… pic.twitter.com/ZVR6fmMVe6— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) December 12, 2023
ಈ ಮುಖ್ಯ ರಸ್ತೆಯಲ್ಲಿ ವೈಟ್ ಟಾಪಿಂಗ್ ಮಾಡಲಾಗಿದೆ. ಆದರೆ, ರಸ್ತೆ ಸಂಪೂರ್ಣವಾಗಿ ಕುಸಿದಿದ್ದು, ದೊಡ್ಡ ಗುಂಡಿ ನಿರ್ಮಾಣವಾಗಿದೆ. ಯಾವುದೇ ಅವಘಡಗಳು ನಡೆಯದಿರಲು ಮುಂಜಾಗೃತಾ ಕ್ರಮವಾಗಿ ಬೆಂಗಳೂರು ಸಂಚಾರ ಪೊಲೀಸರು ದೊಡ್ಡ ಗುಂಡಿಯ ಸುತ್ತಲು ಬ್ಯಾರಿಕೇಡ್ ಅಳವಡಿಸಿದ್ದಾರೆ. ಯಾವ ಕಾರಣಕ್ಕೆ ರಸ್ತೆ ಕುಸಿದಿದೆ ಎಂಬ ಬಗ್ಗೆ ಪರಿಶೀಲನೆ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಳೆ ವೈಷಮ್ಯಕ್ಕೆ 24 ವರ್ಷದ ಆಟೋ ಚಾಲಕನ ಹತ್ಯೆ: 11 ಆರೋಪಿಗಳ ಬಂಧನ
ರಸ್ತೆಗುಂಡಿಗಳಿಂದ ನಗರದಲ್ಲಿ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತವೆ. ಬಿಬಿಎಂಪಿ ನವೆಂಬರ್ ಒಳಗಡೆ ಬೆಂಗಳೂರಿನಲ್ಲಿ ಇರುವ ಶೇ.90ರಷ್ಟು ರಸ್ತೆ ಗುಂಡಿಗಳನ್ನು ಮುಚ್ಚಲು ಗುರಿ ಹಾಕಿಕೊಂಡಿತ್ತು. ನಗರದಲ್ಲಿನ ಯಾವ ರಸ್ತೆಗಳು ಇನ್ನೂ ಗುಂಡಿ ಮುಕ್ತವಾಗಿಲ್ಲ.
ಮಳೆ ಬಿಟ್ಟು ಬಿಡದೇ ಸುರಿಯುವ ಕಾರಣ ರಸ್ತೆಗುಂಡಿ ಮುಚ್ಚಲು ಸಾಧ್ಯವಾಗಿಲ್ಲ ಎಂದು ಬಿಬಿಎಂಪಿ ಹೇಳುತ್ತದೆ. ಆದರೆ, ಈ ವರ್ಷ ಸರಿಯಾದ ಸಮಯಕ್ಕೆ ಮಳೆ ಕೂಡ ಆಗಿಲ್ಲ. ಆದರೂ ನಗರದಲ್ಲಿ ಗುಂಡಿಗಳು ರಾರಾಜಿಸುತ್ತಿವೆ.