ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಂಜಿ ರೋಡ್, ಬ್ರಿಗೇಡ್ ರೋಡ್‌ನಲ್ಲಿ ಜನರು ಹೊಸ ವರ್ಷವನ್ನು ಆನಂದದಿಂದ ಬರಮಾಡಿಕೊಂಡಿದ್ದಾರೆ. ಇನ್ನು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಜೆಡಬ್ಲೂ ಮ್ಯಾರಿಯೆಟ್‌ನಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಬಯಸಿದ್ದ ಮಹಿಳೆಗೆ ಕಿಡಿಗೇಡಿಗಳು ವಂಚಿಸಿದ ಘಟನೆ ನಡೆದಿದೆ.
ಹೌದು, ಹೇಮಾ ಮಾಲಿನಿ ವಂಚನೆಗೆ ಒಳಗಾಗದವರು. ಹೊಸ ವರ್ಷದ ದಿನವನ್ನು ಜೆಡಬ್ಲೂ ಮ್ಯಾರಿಯೇಟ್ ಹೋಟೆಲ್‌ನಲ್ಲಿ ಪಾರ್ಟಿ ಮಾಡಿ ಸಂಭ್ರಮಾಚರಣೆ ಮಾಡಲು ಟಿಕೆಟ್ ಪಡೆಯಲು ಮುಂದಾಗಿದ್ದರು.
ಈ ವೇಳೆ, ಹೋಟೆಲ್ ನಂಬರ್‌ಗೆ ಕರೆ ಮಾಡಿದ್ದ ಮಹಿಳೆಗೆ ಸುರೇಂದರ್ ಕುಮಾರ್ ಎಂಬಾತ ಸಂಪರ್ಕಕ್ಕೆ ಬಂದಿದ್ದಾನೆ. ಮಹಿಳೆಗೆ ಟಿಕೆಟ್ ನೀಡುವುದಾಗಿ ಕೂಡ ಹೇಳಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬೆಳಿಗ್ಗೆ ಕೆಲಸಕ್ಕೆ ಸೇರಿ, ಮಧ್ಯಾಹ್ನ ಮಾಲೀಕನ ಮಗುವಿನ ಅಪಹರಣ
ಈಗಾಗಲೇ, ಟಿಕೆಟ್‌ಗಳು ಖಾಲಿ ಆಗುತ್ತಿದ್ದು, ಈಗಲೇ ಗೂಗಲ್ ಪೇ ಮೂಲಕ ಹಣವನ್ನು ಸಂದಾಯ ಮಾಡಿ ಎಂದು ಹೇಳಿದ್ದಾನೆ. ಅದರಂತೆ ಹೇಮಾ ಮಾಲಿನಿ ಅವರು ಆತನಿಗೆ ಗೂಗಲ್ ಪೇ ಮೂಲಕ ಟಿಕೆಟ್‌ಗಾಗಿ ಬರೋಬ್ಬರಿ ₹19,500 ಹಣವನ್ನು ವರ್ಗಾವಣೆ ಮಾಡಿದ್ದಾರೆ.
ಬಳಿಕ, ಹೋಟೆಲ್ ಮ್ಯಾನೇಜರ್ ಹೆಸರು ಹೇಳಿ ಟಿಕೆಟ್ ಪಡೆಯಲು ಸೂಚಿಸಿದ್ದನು. ಇದನ್ನು ನಂಬಿದ್ದ ಹೇಮಾ ಅವರು ಹೋಟೆಲ್ ಬಳಿ ಹೋಗಿ ಮ್ಯಾನೇಜರ್ ಹೆಸರು ಹೇಳಿದಾಗ ಆ ಹೆಸರಿನ ಸಿಬ್ಬಂದಿ ಇಲ್ಲ ಎಂಬುದು ತಿಳಿದುಬಂದಿದೆ.
ಬಳಿಕ, ಮಹಿಳೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ, ಮಹಿಳೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.