- ಬಿಡಬ್ಲೂಎಸ್‌ಎಸ್‌ಬಿ ಕಾಮಗಾರಿ ಹೆಸರಿನಲ್ಲಿ ಗುಂಡಿ ತೆಗೆದು ತಿಂಗಳು ಕಳೆದಿದೆ
- ಬೆಂಗಳೂರಿನ ಗೊಲ್ಲರಹಟ್ಟಿ ಪೈಪ್‌ಲೇನ್ ಬಳಿ ಈ ಘಟನೆ ನಡೆದಿದೆ
ರಾಜ್ಯ ರಾಜಧಾನಿಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ (ಬಿಡಬ್ಲ್ಯೂಎಸ್ಎಸ್‌ಬಿ) ಗುಂಡಿಗೆ ಎರಡೂವರೆ ವರ್ಷದ ಮಗು ಬಿದ್ದು ಮೃತಪಟ್ಟಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನಗರದ ಗೊಲ್ಲರಹಟ್ಟಿ ಪೈಪ್‌ಲೇನ್ ಬಳಿ ಈ ಘಟನೆ ನಡೆದಿದೆ. ಹನುಮಾನ ಮತ್ತು ಹಂಸ ದಂಪತಿಯ ಎರಡೂವರೆ ವರ್ಷದ ಮಗು ಕಾರ್ತಿಕ್ ಬಿಡಬ್ಲ್ಯೂಎಸ್ಎಸ್ ಬಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗುಂಡಿಗೆ ಬಿದ್ದು ಸಾವನ್ನಪ್ಪಿದೆ.
ಹನುಮಾನ್ ಮತ್ತು ಹಂಸ ದಂಪತಿ ಮೂಲತಃ ಉತ್ತರ ಪ್ರದೇಶದವರು. ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಕೆಲಸ ಅರಿಸಿ ಬಂದು ಗೊಲ್ಲರಹಟ್ಟಿಯಲ್ಲಿ ನೆಲೆಸಿದ್ದರು. ಹನುಮಾನ್ ಪೇಂಟಿಂಗ್ ಕೆಲಸ ಮಾಡುತ್ತಿದ್ದಾರೆ. ಸೋಮವಾರ ಬೆಳಗ್ಗೆ ಕೆಲಸದ ಹಿನ್ನೆಲೆ, ಹನುಮಾನ್ ಮನೆಯಿಂದ ಹೊರ ಹೋಗಿದ್ದಾರೆ. ಈ ವೇಳೆ, ಪತ್ನಿ ಹಂಸ ಹಾಗೂ ಮಗು ಕಾರ್ತಿಕ್ ಮನೆಯಲ್ಲಿದ್ದರು. ಆಟವಾಡಲು ಮಗು ಕಾರ್ತಿಕ್ ಮನೆಯಿಂದ ಹೊರಬಂದಿದೆ. ಈ ಸಮಯದಲ್ಲಿ ಬಿಡಬ್ಲ್ಯೂಎಸ್ಎಸ್‌ಬಿಯ ಕಾಮಗಾರಿ ಗುಂಡಿಗೆ ಬಿದ್ದು ಸಾವನ್ನಪ್ಪಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮತದಾನದ ದಿನ ಕಾರ್ಮಿಕರಿಗೆ ಸಂಬಳ ಸಹಿತ ರಜೆ
ಬಿಡಬ್ಲೂಎಸ್‌ಎಸ್‌ಬಿ ಕಾಮಗಾರಿ ಹೆಸರಿನಲ್ಲಿ ಗುಂಡಿ ತೆಗೆದು ತಿಂಗಳು ಕಳೆದಿದೆ. ಆದರೂ, ಅಧಿಕಾರಿಗಳು ಕಾಮಗಾರಿಯನ್ನು ಸಂಪೂರ್ಣ ಮಾಡಿಲ್ಲ. ಗುಂಡಿಯ ಸುತ್ತ ತಡೆಗೋಡೆಯನ್ನು ನಿರ್ಮಿಸಿಲ್ಲ.
ಮಗು ಸಾವಿಗೆ ಕಾರಣರಾದ ಬಿಡಬ್ಲ್ಯೂಎಸ್ಎಸ್ ಬಿ ಇಂಜಿನಿಯರ್ ಹಾಗೂ ಗುತ್ತಿಗೆದಾರನ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.