ಭಾರತ್ ಮತ್ತು ಆಸ್ಟ್ರೇಲೀಯಾ ಟಿ-20 ಪಂದ್ಯದ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇನಾಯತ್ (28) ಮತ್ತು ಸೈಯದ್ ಮುಬಾರಕ್ ಬಂಧಿತರು. ಶುಕ್ರವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟಿ 20 ಪಂದ್ಯ ನಡೆದಿತ್ತು.
ಇದೇ ವೇಳೆ, ಶುಕ್ರವಾರ ರಾತ್ರಿ 10:30ರ ಸುಮಾರಿಗೆ ಜೆ.ಪಿ.ನಗರದ 1ನೇ ಹಂತದಲ್ಲಿರುವ ಮೊಕಾಹೋಲಿಕ್ ಪಬ್ನಲ್ಲಿ ಗಾಯನ ಕಾರ್ಯಕ್ರಮ ಮತ್ತು ಪಂದ್ಯ ಪ್ರದರ್ಶನ ನಡೆದಿತ್ತು. ಗಾಯನದ ಕಾರ್ಯಕ್ರಮ ಮುಗಿದ ಬಳಿಕ ಒಬ್ಬ ಭಾರತ್ ಮಾತಾ ಕೀ ಜೈ ಎಂದು ಕೂಗಿದ್ದಾನೆ. ಇವರದೇ ಪಕ್ಕದ ಟೇಬಲ್ ಮೇಲೆ ಕುಳಿತಿದ್ದ ನಾಲ್ವರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ತೆಲಂಗಾಣ | ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದ ಎಮ್ಮೆ ಕಾಯುತ್ತಿದ್ದ ಯುವತಿಗೆ ಚುನಾವಣೆಯಲ್ಲಿ ಸೋಲು
ಈ ಬಗ್ಗೆ ಪಬ್ ಮ್ಯಾನೇಜರ್ ಸುಧೀರ್ ಸಿಂಗ್ ಮಾಹಿತಿ ನೀಡಿದ್ದು, “ಪಬ್ನಲ್ಲಿ ನಾಲ್ವರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ. ಇದು ಸರಿಯಲ್ಲ ಎಂದು ತಿಳಿ ಹೇಳಲಾಯಿತು. ಟೇಬಲ್ನಲ್ಲಿದ್ದ ನಾಲ್ವರ ಪೈಕಿ ಇಬ್ಬರು ಓಡಿ ಹೋದರು. ಇನ್ನಿಬ್ಬರನ್ನು ಪೊಲೀಸರು ಬಂಧಿಸಿದರು” ಎಂದು ವಿವರಿಸಿದರು.
ಸದ್ಯ ನಾಲ್ವರ ವಿರುದ್ಧ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.