ರಾಜಧಾನಿ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯದ ವೇಳೆ ಮಲಗಿದ್ದ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಿ ವೈಟ್‌ಫೀಲ್ಡ್ ಡಿಸಿಪಿ ಎಸ್ ಗಿರೀಶ್ ಆದೇಶ ಹೊರಡಿಸಿದ್ದಾರೆ.
ಮಹದೇವಪುರ ಪೊಲೀಸ್ ಠಾಣೆ ಕಾನ್ಸ್ಟೇಬಲ್ ಈರಪ್ಪ ಉಂಡು, ಹೆಡ್ ಕಾನ್ಸ್ಟೇಬಲ್ ಎ.ಎನ್.ಜಯರಾಮ್ ಅಮಾನತುಗೊಂಡವರು.
ಮಹದೇವಪುರ ಪೊಲೀಸ್ ಠಾಣೆಯಲ್ಲಿ ರಾತ್ರಿ ಪಾಳಿ ಕೆಲಸದಲ್ಲಿ ಇಬ್ಬರು ಪೇದೆಗಳು ನಿದ್ದೆ ಮಾಡುತ್ತಿದ್ದರು. ಇದೇ ವೇಳೆ ರಾತ್ರಿ ಗಸ್ತಿನಲ್ಲಿದ್ದ ಸಿಎಆರ್ ಡಿಸಿಪಿ ಠಾಣೆಗೆ ಭೇಟಿ ನೀಡಿದ್ದಾರೆ. ಇಬ್ಬರು ಪೇದೆಗಳು ಮಲಗಿರುವುದನ್ನು ಕಂಡು ಈ ಬಗ್ಗೆ ವೈಟ್‌ಫೀಲ್ಡ್ ಡಿಸಿಪಿಗೆ ವರದಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಂಗಳವಾರ ಸುರಿದ ಜೋರು ಮಳೆಗೆ ವಾಹನ ಸವಾರರ ಪರದಾಟ
ಮಹದೇವಪುರ ಠಾಣೆಯ ಇಬ್ಬರು ಪೇದೆಗಳು ಕರ್ತವ್ಯದ ವೇಳೆ ನಿದ್ದೆ ಮಾಡಿದ ಹಿನ್ನೆಲೆ, ನಗರ ಸಶಸ್ತ್ರ ಪಡೆ ಡಿಸಿಪಿ ವರದಿ ಆಧರಿಸಿ ವೈಟ್‌ಫೀಲ್ಡ್ ಡಿಸಿಪಿ ಇಬ್ಬರು ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.