- ಬೆಂಗಳೂರು 2050ರ ವೇಳೆಗೆ ದಿನಕ್ಕೆ 514 ದಶಲಕ್ಷ ಲೀಟರ್ ನೀರಿನ ಕೊರತೆಯನ್ನು ಎದುರಿಸಲಿದೆ
- ಬಿಡಬ್ಲ್ಯೂಎಸ್‌ಎಸ್‌ಬಿ ಕಾವೇರಿ ನದಿಯಿಂದ 1,470 ಎಂಎಲ್‌ಡಿ ಶುದ್ಧ ನೀರನ್ನು ಪಂಪ್ ಮಾಡುತ್ತದೆ
ಭಾರತದಲ್ಲಿ 2050ರ ವೇಳೆಗೆ ತಾಜಾ ನೀರಿನ ವಾರ್ಷಿಕ ಬೇಡಿಕೆಯು 1,180 ದಶಲಕ್ಷ ಘನ ಮೀಟರ್‌ಗಳನ್ನು ತಲುಪುವ ನಿರೀಕ್ಷೆಯಿದೆ. ಆದರೆ, ಪ್ರಸ್ತುತ ಪೂರೈಕೆಯು ಕೇವಲ 1,126 ದಶಲಕ್ಷ ಘನ ಮೀಟರ್ ಇದೆ ಎಂದು ತಜ್ಞರು ಹೇಳಿದ್ದಾರೆ. ನೀರಿನ ಕೊರತೆಯು ಬೆಂಗಳೂರನ್ನೂ ಬಾಧಿಸಲಿದೆ ಎಂದೂ ಅವರು ಹೇಳಿದ್ದಾರೆ.
ಇಂಡಿಯನ್ ಪ್ಲಂಬಿಂಗ್ ಅಸೋಸಿಯೇಷನ್ (ಐಪಿಎ) ಬೆಂಗಳೂರಿನಲ್ಲಿ ನೀರು, ನೈರ್ಮಲ್ಯ ಮತ್ತು ಕೊಳಾಯಿ ಉತ್ಪನ್ನಗಳ ಪ್ರದರ್ಶನ ‘ಪ್ಲಂಬೆಕ್ಸ್ ಇಂಡಿಯಾ 2023’ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರೀಯ ಜಲ ಮಿಷನ್‌ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕಿ ಅರ್ಚನಾ ವರ್ಮಾ, “ಬೆಂಗಳೂರು 2050ರ ವೇಳೆಗೆ ದಿನಕ್ಕೆ 514 ದಶಲಕ್ಷ ಲೀಟರ್ (ಎಂಎಲ್‌ಡಿ) ನೀರಿನ ಕೊರತೆಯನ್ನು ಎದುರಿಸಲಿದೆ” ಎಂದು ಹೇಳಿದ್ದಾರೆ.
“ಬಿಡಬ್ಲ್ಯೂಎಸ್‌ಎಸ್‌ಬಿ ಕಾವೇರಿ ನದಿಯಿಂದ 1,470 ಎಂಎಲ್‌ಡಿ ಶುದ್ಧ ನೀರನ್ನು ಪಂಪ್ ಮಾಡುತ್ತದೆ. ಆದರೆ, ಪ್ರಸ್ತುತ ಬೇಡಿಕೆ 2,100 ಎಂಎಲ್‌ಡಿ ಇದೆ. 630 ಎಂಎಲ್‌ಡಿಯಷ್ಟು ನೀರನ್ನು ಬೋರ್‌ವೆಲ್ ಮತ್ತು ಟ್ಯಾಂಕರ್‌ಗಳಿಂದ ಪೂರೈಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
“ಉತ್ತಮ ಕೊಳಾಯಿ ಮತ್ತು ನಿಧಾನವಾಗಿ ನೀರು ಹರಿಯುವ ಫಿಕ್ಚರ್‌ಗಳನ್ನು ಅಳವಡಿಸುವ ಮೂಲಕ ನೀರನ್ನು ಉಳಿಸಬಹುದು. ನೀರಿನ ಉಳಿವಿಗಾಗಿ ‘ಐಪಿಎ’ನಂತಹ ಸಂಘಗಳು ಜಾಗೃತಿ ಮೂಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ” ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ’ ಪ್ರಶಸ್ತಿಗೆ ಒಂಬತ್ತು ಜನಪದ ಸಾಧಕರ ಆಯ್ಕೆ
ಐಪಿಎಯ ರಾಷ್ಟ್ರೀಯ ಅಧ್ಯಕ್ಷ ಗುರ್ಮಿತ್ ಸಿಂಗ್ ಅರೋರಾ ಮಾತನಾಡಿ, “ಹಲವು ನಗರಗಳಲ್ಲಿ ನೀರು ಮತ್ತು ಅಂತರ್ಜಲ ವೇಗವಾಗಿ ಖಾಲಿಯಾಗುತ್ತಿದೆ. ಇಂದು, ಬೆಂಗಳೂರಿನ ಸರಾಸರಿ ಅಂತರ್ಜಲ ಮಟ್ಟವು ಸುಮಾರು 800 ಅಡಿಗಳಷ್ಟಿದೆ. 30 ವರ್ಷಗಳ ಹಿಂದೆ ಇದು ಕೇವಲ 100 ಅಡಿ ಇತ್ತು” ಎಂದು ಹೇಳಿದ್ದಾರೆ.