ಭಾರತದ ಟಾಪ್ 30 ‘ಹೈ ಸ್ಟ್ರೀಟ್‌’ಗಳಲ್ಲಿ ಬೆಂಗಳೂರಿನ ಎಂಜಿ ರಸ್ತೆಗೆ ಮೊದಲ ಸ್ಥಾನ

Date:

  • ಟಾಪ್-30 ಹೈ ಸ್ಟ್ರೀಟ್‌ಗಳಲ್ಲಿ ಬೆಂಗಳೂರಿನ 4 ರಸ್ತೆಗಳಿವೆ
  • ಚಿಲ್ಲರೆ ವ್ಯಾಪಾರವು ಹೆಚ್ಚು ಸ್ಪರ್ಧಾತ್ಮಕ ವ್ಯವಹಾರವಾಗಿದೆ

ಭಾರತದ ಟಾಪ್ 30 ‘ಹೈ ಸ್ಟ್ರೀಟ್’ಗಳ ಪಟ್ಟಿಯಲ್ಲಿ ಬೆಂಗಳೂರಿನ ಎಂಜಿ ರಸ್ತೆ ಮೊದಲ ಸ್ಥಾನದಲ್ಲಿದೆ. ಹೈದರಾಬಾದ್‌ನ ಸೋಮಾಜಿಗುಡಾ ಮತ್ತು ಮುಂಬೈನ ಲಿಂಕಿಂಗ್ ರಸ್ತೆ ನಂತರದ ಸ್ಥಾನದಲ್ಲಿವೆ ಎಂದು ನೈಟ್ ಫ್ರಾಂಕ್ ತಿಳಿಸಿದೆ.

- Advertisement -

ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ನೈಟ್ ಫ್ರ್ಯಾಂಕ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಟಾಪ್-30 ‘ಹೈ ಸ್ಟ್ರೀಟ್‌’ಗಳಲ್ಲಿ ಬೆಂಗಳೂರಿನ 4 ರಸ್ತೆಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಟಾಪ್ 10 ಹೈಸ್ಟ್ರೀಟ್ ಪಟ್ಟಿಯಲ್ಲಿ ಎಂಜಿ ರಸ್ತೆ ಅಗ್ರಸ್ಥಾನದಲ್ಲಿದೆ. ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ಗಳು ಕ್ರಮವಾಗಿ 7, 9 ಮತ್ತು 10ನೇ ಸ್ಥಾನದಲ್ಲಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಗಗನಕ್ಕೇರಿದ ಅಕ್ಕಿ ಬೆಲೆ: ತತ್ತರಿಸಿದ ಬಡ, ಮಧ್ಯಮ ವರ್ಗದ...

ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಮತ್ತು ಬರಗಾಲದ ಕರಿಛಾಯೆ ಕೃಷಿ ಕ್ಷೇತ್ರವನ್ನು ತತ್ತರಿಸುವಂತೆ ಮಾಡಿದೆ. ಅನ್ನದಾತನ ಬದುಕನ್ನು ಸಂಕಷ್ಟಕ್ಕೆ ನೂಕಿದ್ದ ಈ ಬರಗಾಲದ ಬಿಸಿ ಇದೀಗ ನೇರವಾಗಿ ಜನಸಾಮಾನ್ಯರ ತಟ್ಟೆಗೆ ತಟ್ಟಿದ್ದು, ಅಕ್ಕಿಯ...

ಉನ್ನತ ಗುಣಮಟ್ಟದ ರಸ್ತೆಗಳು, ಗ್ರಾಹಕರಿಗೆ ಕೈಗಟಕುವ ರೀತಿಯಲ್ಲಿ ಎಲ್ಲ ವಸ್ತುಗಳು ಒಂದೇ ಬೀದಿಯಲ್ಲಿ ಸಿಗುವುದು, ಗ್ರಾಹಕರು ತಮ್ಮ ಅನುಭವದೊಂದಿಗೆ ನೀಡುವ ಅಂಕಗಳನ್ನು ಈ ಸಮೀಕ್ಷೆ ಆಧರಿಸಿದೆ.

ರಿಯಲ್ ಎಸ್ಟೇಟ್ ನೈಟ್ ಫ್ರಾಂಕ್ ಸಂಸ್ಥೆ, “ಬೆಂಗಳೂರು ಅತ್ಯುತ್ತಮವಾದ ಬೀದಿಗಳನ್ನು ಹೊಂದಿದೆ. ಬೆಂಗಳೂರಿನ 4 ಮಾರುಕಟ್ಟೆಗಳು ಟಾಪ್ 10 ಪಟ್ಟಿಯಲ್ಲಿ ಸ್ಥಾನಗಳಿಸಿವೆ. ಈ ಟಾಪ್‌ 10 ಹೈಸ್ಟ್ರೀಟ್‌ಗಳು ಗ್ರಾಹಕರಿಗೆ ಉತ್ತಮವಾದ ಶಾಪಿಂಗ್ ಅನುಭವವನ್ನು ನೀಡುತ್ತದೆ. ಹತ್ತು ಪ್ರಮುಖ ಬೀದಿಗಳು ಪ್ರವೇಶ, ಪಾರ್ಕಿಂಗ್ ಸೌಲಭ್ಯಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ವೈವಿಧ್ಯಮಯ ವಿಂಗಡಣೆಯೊಂದಿಗೆ ಅನುಕೂಲಕರವಾಗಿವೆ” ಎಂದು ಹೇಳಿದೆ.

ನೈಟ್ ಫ್ರಾಂಕ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಿಶಿರ್ ಬೈಜಾಲ್ ಮಾತನಾಡಿ, “ಚಿಲ್ಲರೆ ವ್ಯಾಪಾರವು ಹೆಚ್ಚು ಸ್ಪರ್ಧಾತ್ಮಕ ವ್ಯವಹಾರವಾಗಿದೆ. ಗ್ರಾಹಕರ ಅನುಭವವು ಪ್ರಮುಖವಾಗಿದೆ” ಎಂದರು.

“ಭಾರತದಲ್ಲಿನ ನಗರಗಳು ಆಧುನೀಕರಣಗೊಳ್ಳುತ್ತಿರುವುದರಿಂದ, ಪ್ರವೇಶ, ಪಾರ್ಕಿಂಗ್, ಅಂಗಡಿಯ ಅಂದ ಮುಂತಾದ ಸೌಲಭ್ಯಗಳು ಸುಧಾರಿಸಿದಂತೆ ನಾವು ದೇಶದಲ್ಲಿ ಅನೇಕ ಬೀದಿಗಳು ಪುನರುಜ್ಜೀವನಗೊಳ್ಳುತ್ತಿರುವುದನ್ನು ನೋಡಬಹುದು” ಎಂದು ಹೇಳಿದರು.

“2023–24ರಲ್ಲಿ ಮಾಲ್‌ಗಳ ಆದಾಯಕ್ಕಿಂತ ಹೈ ಸ್ಟ್ರೀಟ್‌ಗಳ ಪ್ರತಿ ಚದರ ಮೀಟರ್‌ನ ಸರಾಸರಿ ಆದಾಯವು ಗಣನೀಯವಾಗಿ ಹೆಚ್ಚಿರುತ್ತದೆ” ಎಂದು ಅವರು ಅಂದಾಜಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಸ್ತೆ ಅಪಘಾತದಲ್ಲಿ ದಿನಕ್ಕೆ ಇಬ್ಬರು ಬಲಿ

ಭಾರತದ ಟಾಪ್-10 ಹೈ ಸ್ಟ್ರೀಟ್‌ಗಳು

  • ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆ (ಎಂಜಿ ರೋಡ್)
  • ಹೈದರಾಬಾದ್‌ನ ಸೋಮಾಜಿಗುಡ
  • ಮುಂಬೈನ ಲಿಂಕಿಂಗ್ ರೋಡ್
  • ದೆಹಲಿಯ ಸೌತ್ ಎಕ್ಸಟೆನ್ಷನ್ 1 ಮತ್ತು 2ನೇ ಭಾಗ
  • ಕೋಲ್ಕತಾದ ಪಾರ್ಕ್ ಸ್ಟ್ರೀಟ್ ಮತ್ತು ಕಾಮಾಕ್ ಸ್ಟ್ರೀಟ್
  • ಚೆನ್ನೈನ ಅಣ್ಣಾ ನಗರ್
  • ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್
  • ನೋಯ್ಡಾದ ಸೆಕ್ಟರ್ 18 ಮಾರ್ಕೆಟ್
  • ಬೆಂಗಳೂರಿನ ಬ್ರಿಗೇಡ್ ರೋಡ್
  • ಬೆಂಗಳೂರಿನ ಚರ್ಚ್ ಸ್ಟ್ರೀಟ್

ಹೈ ಸ್ಟ್ರೀಟ್ ಎಂದರೇನು?

ನಗರದ ಒಂದು ಮುಖ್ಯ ಬೀದಿ ವಾಣಿಜ್ಯ ಸ್ಥಳವಾಗಿರಬೇಕು. ಈ ರಸ್ತೆಯಲ್ಲಿ ವೈವಿದ್ಯಮಯವಾದ ರೀಟೇಲ್ ಶಾಪ್‌ಗಳು, ರೆಸ್ಟೋರೆಂಟ್‌ಗಳು, ಥಿಯೇಟರ್‌, ಕೆಫೆ ಇತ್ಯಾದಿ ಸೇರಿದಂತೆ ನಾನಾ ಬಗೆಯ ವಾಣಿಜ್ಯ ಅಂಗಡಿಗಳಿರಬೇಕು. ಉತ್ತಮವಾದ ರಸ್ತೆ ಹೊಂದಿರವಾಗಿ, ಚಿಲ್ಲರೆ ವ್ಯಾಪಾರ ಹೆಚ್ಚಾಗಿರಬೇಕು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಳೆ ಫ್ರೀಡಂ ಪಾರ್ಕ್‌ನಲ್ಲಿ ಸಿಜೆಪಿ ‘ಜನತಾ ನ್ಯಾಯಾಲಯ’ – ಎಸ್‌ಐಆರ್ ಅನ್ಯಾಯಗಳ ವಿರುದ್ಧ ಪ್ರತಿಭಟನೆಯ ಕಹಳೆ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಕ್ರಮಗಳು, ಮುಖ್ಯ ಚುನಾವಣಾ...

ಜಾಗತಿಕ ಕೌಶಲ್ಯ ರಾಜಧಾನಿಯಾಗುವತ್ತ ಕರ್ನಾಟಕದ ದಿಟ್ಟ ಹೆಜ್ಜೆ: ನ. 3ರಿಂದ ‘ಬೆಂಗಳೂರು ಕೌಶಲ್ಯ ಶೃಂಗಸಭೆ’

"ಕೃತಕ ಬುದ್ಧಿಮತ್ತೆ (AI) ಹಾಗೂ ಹೊಸ ತಂತ್ರಜ್ಞಾನಗಳಿಂದ ಕೌಶಲ್ಯ ಕ್ಷೇತ್ರವು ಅತಿವೇಗವಾಗಿ...

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ‘ಬ್ಯಾರಿ ಭಾಷಾ ದಿನ’ ಆಚರಣೆ

ಜಗತ್ತಿನ ಯಾವುದೇ ಭಾಷೆಯನ್ನು ಬ್ಯಾರಿ ಸಮುದಾಯದ ಮಕ್ಕಳು ಕಲಿಯಲಿ. ಆದರೆ, ಮನೆಯಲ್ಲಿ...

ಬೆಂಗಳೂರು | ಅಕ್ರಮವಾಗಿ ಮನೆ ನೆಲಸಮ: 5 ಲಕ್ಷ ನಗದು, ಆಭರಣ ಕಳವು; ಇಬ್ಬರ ವಿರುದ್ಧ ಎಫ್‌ಐಆರ್

67 ವರ್ಷದ ವೃದ್ಧ ವ್ಯಾಪಾರಿಯೊಬ್ಬರ ಮನೆಯನ್ನು ಅಕ್ರಮವಾಗಿ ಧ್ವಂಸಗೊಳಿಸಿ, ರೂ. 5...