ಲೋಕಸಭೆ ಚುನಾವಣೆಗೆ ಮುನ್ನವೇ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಸಕ್ತ ಸಾಲಿನ ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿದೆ.
ಮಾರ್ಚ್ ಮೊದಲ ವಾರ ಆಯವ್ಯಯ ಮಂಡನೆಗೆ ಪಾಲಿಕೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಏಕೆಂದರೆ, ಏಪ್ರಿಲ್ ಇಲ್ಲವೇ ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾದರೆ ಚುನಾವಣೆ ಕೆಲಸಗಳಿಗೆ ಬಿಬಿಎಂಪಿ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ಹೀಗಾಗಿ, ಚುನಾವಣೆಗೂ ಮುನ್ನವೇ ಬಜೆಟ್ ಮಂಡನೆ ಮಾಡಲಾಗುತ್ತಿದೆ.
ಬಜೆಟ್ ಮಂಡನೆಗಾಗಿ ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ನಾಲ್ಕು ತಂಡಗಳ ರಚನೆ ಮಾಡಲಾಗಿದೆ. 2024-25 ನೇ ಸಾಲಿನಲ್ಲಿ ಕೈಗೊಳ್ಳುವ ಕಾಮಗಾರಿ ಯೋಜನೆ ಪಟ್ಟಿ ಹಾಗೂ ಅಂದಾಜು ವೆಚ್ಚದ ವಿವರ ನೀಡುವಂತೆ ಆದೇಶಿಸಲಾಗಿದೆ.
ಬಿಬಿಎಂಪಿಗೆ ಚುನಾವಣೆ ನಡೆದು ನಾಲ್ಕು ವರ್ಷಗಳು ಮುಗಿಯುತ್ತಿರುವ ಸಂದರ್ಭದಲ್ಲಿ ಅಧಿಕಾರಿಗಳೇ ನಾಲ್ಕನೇ ಬಾರಿಗೆ ಬಿಬಿಎಂಪಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇಲ್ಲದ ಕಾರಣ ಬಿಬಿಎಂಪಿಯ ಹಣಕಾಸು ವಿಭಾಗದ ಮುಖ್ಯಸ್ಥರೇ ಬಜೆಟ್ ಮಂಡಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಆಹಾರದಲ್ಲಿ ಜಿರಳೆ ಪತ್ತೆ: ಪ್ರಶ್ನಿಸಿದ್ದಕ್ಕೆ ಹೈಕೋರ್ಟ್ ವಕೀಲೆ ಮೇಲೆ ಹಲ್ಲೆ
ಇನ್ನೂ 2023-24 ನೇ ಸಾಲಿನಲ್ಲಿ ಸರ್ಕಾರದ ಅನುದಾನದಲ್ಲಿ ಕೈಗೊಂಡ ಸಾಧನೆ ಪಟ್ಟಿ ಸಲ್ಲಿಕೆಗೂ ಸೂಚನೆ ನೀಡಲಾಗಿದ್ದು, ಎರಡು ದಿನಗಳಲ್ಲಿ ಎಲ್ಲ ವಲಯಗಳ ಮಾಹಿತಿ ಸಂಗ್ರಹಿಸಿ ಆನ್ ಲೈನ್ ಮುಖಾಂತರ ಸಲ್ಲಿಸುವಂತೆ ಅಧಿಕಾರಿಗಳಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.