ಬೆಂಗಳೂರು | ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ: ಎಲ್ಲೆಲ್ಲಿ? ಇಲ್ಲಿದೆ ನೋಡಿ

Date:

Advertisements

ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಪಾದಚಾರಿ ಮಾರ್ಗ ಒತ್ತುವರಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತೆರವು ಮಾಡುವ ಕಾರ್ಯಾಚರಣೆ ಆರಂಭಿಸಿದೆ. ನ.9 ರಂದು ಮಹದೇವಪುರ, ಬೊಮ್ಮನಹಳ್ಳಿ, ಪಶ್ಚಿಮ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ ಹಾಗೂ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಬಿಎಂಪಿ, “ಮಹದೇವಪುರ ವಿಭಾಗ ವ್ಯಾಪ್ತಿಯಲ್ಲಿನ ಸ್ಥಳೀಯ ಮಹದೇವಪುರ ಟ್ರೇಡರ್ಸ್‌ ಅಸೋಸಿಯೇಷನ್‌ ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಮನವಿಯಂತೆ ಹಾಗೂ ಉಚ್ಚ ನ್ಯಾಯಾಲಯ ಹೊರಡಿಸಿರುವ ಆದೇಶದ ಅನುಸಾರ ಮಹದೇವಪುರ ವಿಭಾಗ ವ್ಯಾಪ್ತಿಯ ಇಬ್ಬಲೂರಿನಿಂದ ಕಾಡುಬಿಸನಹಳ್ಳಿ, ಕಾರ್ತಿಕ್‌ನಗರ ಮಾರ್ಗವಾಗಿ ಲೌರಿ ಜಂಕ್ಷನ್ ವರೆಗೆ ಸುಮಾರು 4 ಕಿ.ಮೀ ರಷ್ಟು ಹಾಗೂ ಲೌರಿ ಜಂಕ್ಷನ್‌ನಿಂದ ಗರುಡಾಚಾರ್‌ಪಾಳ್ಯ ಮೆಟ್ರೋ ನಿಲ್ದಾಣ, ಶಾಂತಿನಿಕೇತನ, ಬಿಪಿಎಲ್ ಮೆಟ್ರೋ ನಿಲ್ದಾಣದವರೆಗೆ ಸುಮಾರು 3 ಕಿ.ಮೀ, ಹೆಚ್.ಎ.ಎಲ್ ಅಂಡರ್‌ಪಾಸ್‌, ಸುರಂಜನ್‌ದಾಸ್ ಜಂಕ್ಷನ್‌ನಿಂದ ಯಮಲೂರು ಜಂಕ್ಷನ್, ಯಶೋಮತಿ ಆಸ್ಪತ್ರೆ, ಸಿದ್ದಾಪುರ ಜಂಕ್ಷನ್, ವರ್ತೂರು ಕೋಡಿ, ಸ್ವಸ್ತಾ ಆಸ್ಪತ್ರೆ, ಹೋಪ್‌ಫಾರಂ ಮಾರ್ಗವಾಗಿ ಸಾಯಿಬಾಬಾ ಜಂಕ್ಷನ್ ವರೆಗೆ ಸುಮಾರು 3 ಕಿ.ಮೀ ರಸ್ತೆಯಲ್ಲಿನ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಚರಣೆ ನಡೆಸಲಾಗಿದೆ” ಎಂದು ಹೇಳಿದೆ.

“ಪಾದಚಾರಿ ಮಾರ್ಗಗಳಲ್ಲಿ ಇಟ್ಟಿದ್ದ ಅನಧಿಕೃತ ಅಂಗಡಿ-ಮುಂಗಟ್ಟುಗಳು, ಅನುಪಯುಕ್ತ ತಳ್ಳುವ ಗಾಡಿಗಳು, ಹಣ್ಣಿನ ಬಾಕ್ಸ್‌ಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅನುವುಮಾಡಿಕೊಡಲಾಗಿದೆ” ಎಂದು ತಿಳಿಸಿದೆ.

Advertisements

“ಕಾರ್ಯಚರಣೆ ನಡೆಯುವ ಮುನ್ನ ವ್ಯಾಪಾರಿಗಳ ಗಮನಕ್ಕೆ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡದಂತೆ ಧ್ವನಿವರ್ಧಕ ಮುಖಾಂತರ ಹೇಳಲಾಗಿದೆ. ಆದರೂ, ಕೆಲವು ರಸ್ತೆಗಳಲ್ಲಿ ಸುಮಾರು 10 ಕಿ.ಮೀ ಉದ್ದದ ಪಾದಚಾರಿ ಹಾಗೂ ರಸ್ತೆಯಲ್ಲಿ 12 ತಾತ್ಕಾಲಿಕ ಅಂಗಡಿಗಳನ್ನು ಸುಮಾರು 4 ಅನುಪಯುಕ್ತ ತಳ್ಳುವ ಗಾಡಿಗಳನ್ನು ಹಾಗೂ ತಾತ್ಕಾಲಿಕವಾಗಿ ಪುಟ್ ಪಾತ್ ಮೇಲೆ ಸಾಮಾಗ್ರಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವವರನ್ನು ತೆರವುಗೊಳಿಸಲಾಯಿತು” ಎಂದು ಹೇಳಿದೆ.

ರಾಜರಾಜೇಶ್ವರಿ ನಗರ ವಲಯ

“ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಕೆಂಗೇರಿ ವಿಭಾಗದಲ್ಲಿ ವಾರ್ಡ್ ಸಂಖ್ಯೆ 130 ಮತ್ತು 159 ರಲ್ಲಿನ ಕೆಂಗೇರಿ ಹೊರವರ್ತುಲ ರಸ್ತೆಯಲ್ಲಿದ್ದ ಪಾದಚಾರಿ ವ್ಯಾಪಾರಿಗಳನ್ನು ತೆರವುಗೊಳಿಸಲಾಯಿತು. ಸದರಿ ರಸ್ತೆಯನ್ನು “ಮಾದರಿ ರಸ್ತೆ”ಯನ್ನಾಗಿ ಮಾಡುವ ಉದ್ದೇಶದ ಹಿನ್ನಲೆಯಲ್ಲಿ ಹಾಗೂ ವಾರ್ಡ್ ಸಂಖ್ಯೆ 130 ಉಲ್ಲಾಳ ವಾರ್ಡ್‌ನ್ನು “ಮಾದರಿ ವಾರ್ಡ್” ಎಂದು ನ.30 ರೊಳಗೆ ಪ್ರಕಟಣೆ ಮಾಡುವ ಸಲುವಾಗಿ ಪೂರ್ವಭಾವಿಯಾಗಿ ಸಾರ್ವಜನಿಕರಿಗೆ ಓಡಾಟಕ್ಕೆ ತೊಂದರೆಯಾಗುತ್ತಿದ್ದ ಶಾಶ್ವತವಾಗಿ ನಿರ್ಮಾಣ ಮಾಡಿದ್ದ ಕಬ್ಬಿಣದ ಪೆಟ್ಟಿಗೆಗಳನ್ನು ತೆರವುಗೊಳಿಸಲಾಯಿತು” ಎಂದು ಬಿಬಿಎಂಪಿ ಹೇಳಿದೆ.

ಬೊಮ್ಮನಹಳ್ಳಿ ವಲಯ

ಬೊಮ್ಮನಹಳ್ಳಿ ವಲಯ ವ್ಯಾಪ್ತಿಗೆ ಬರುವ ಬೆಂಗಳೂರು ದಕ್ಷಿಣ ವಿಭಾಗ, ಅಂಜನಾಪುರ ಉಪ ವಿಭಾಗದ ವಾರ್ಡ್ ನಂ.196 ಅಂಜನಾಪುರದ ಅಮೃತನಗರ ಮುಖ್ಯ ರಸ್ತೆ, ಕೋಣನಕುಂಟೆ ಸರ್ಕಾರಿ ಆಸ್ಪತ್ರೆ ಎದುರು ರಸ್ತೆಯಲ್ಲಿನ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಚರಣೆ ನಡೆಸಲಾಗಿದೆ.

ಪಾದಚಾರಿ ಮಾರ್ಗಗಳಲ್ಲಿ ಇಟ್ಟಿದ್ದ 3 ತಾತ್ಕಾಲಿಕ ಶೆಡ್‌ಗಳಲ್ಲಿನ ಅನಧಿಕೃತ ಅಂಗಡಿ ಮುಂಗಟ್ಟುಗಳು, ಅನುಪಯುಕ್ತ ತಳ್ಳುವ ಗಾಡಿಗಳು, ಹಣ್ಣಿನ ಬಾಕ್ಸ್‌ಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅನುವು ಮಾಡಲಾಯಿತು.

ಸುಮಾರು 300 ಮೀಟರ್ ರಷ್ಟು ಉದ್ದದ ಪಾದಚಾರಿ ಹಾಗೂ ರಸ್ತೆಯಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವವರ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಮತ್ತೊಮ್ಮೆ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವವರಿಗೆ ದಂಡ ವಿಧಿಸುವ ಜೊತೆಗೆ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದೆ.

ಪಶ್ಚಿಮ ವಲಯ

ಪಶ್ಚಿಮ ವಲಯ ವ್ಯಾಪ್ತಿಯ ರಾಜಾಜಿನಗರದ ಶ್ರೀರಾಮ ಮಂದಿರ ವಾರ್ಡ್ ನ 10ನೇ ಮುಖ್ಯ ರಸ್ತೆ, ಭಾಷ್ಯಂ ವೃತ್ತದಿಂದ ಇ.ಎಸ್.ಐ ಆಸ್ಪತ್ರೆ12ನೇ ಮುಖ್ಯ ರಸ್ತೆಯವರೆಗೆ ಪಾದಚಾರಿ ಮಾರ್ಗದ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಈ ವೇಳೆ 4 ತಳ್ಳುವ ಗಾಡಿ ಹಾಗೂ ಅನಧಿಕೃತವಾಗಿ ಮೆಟ್ಟಿಲುಗನ್ನು ನಿರ್ಮಿಸಿ ತಾತ್ಕಾಲಿಕವಾಗಿ ತೆರದಿರುವ ಅಂಗಡಿಗಳನ್ನು ತೆರವುಗೊಳಿದಲಾಗಿದೆ.

ಮಲ್ಲೇಶ್ವರಂನ ಕಾಡುಮಲ್ಲೇಶ್ವರ ವಾರ್ಡ್ ನ 6, 7 ಮತ್ತು 8ನೇ ಕ್ರಾಸ್ ಮಾರ್ಗೋಸಾ ರಸ್ತೆಯಿಂದ ಸಂಪಿಗೆ ರಸ್ತೆಯವರೆಗೆ ಪಾದಚಾರಿ ಮಾರ್ಗದ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಈ ವೇಳೆ ಸುಮಾರು 2.1 ಕಿ.ಮೀ ಉದ್ದದ ರಸ್ತೆಯಲ್ಲಿ 50 ತಳ್ಳುವ ಗಾಡಿಗಳುನ್ನು ತೆರವುಗೊಳಿಸಲಾಗಿದೆ.

ಬಿಬಿಎಂಪಿ 5

ದಕ್ಷಿಣ ವಲಯ ವ್ಯಾಪ್ತಿಯಲ್ಲಿ ‌.ಎಫ್.ಸಿ ಕೇಬಲ್ ತೆರವು

ದಕ್ಷಿಣ ವಲಯ ವಿಜಯನಗರ ವ್ಯಾಪ್ತಿಯ ಹೊರ ಪಶ್ಚಿಮ ಕಾರ್ಡ್ ರಸ್ತೆಯ ಸರ್ವಿಸ್ ರಸ್ತೆ ಅನಧಿಕೃತವಾಗಿ ಅಳವಡಿಸಿರುವ ಓ.ಎಫ್.ಸಿ ಕೇಬಲ್‌ಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು.

ನಗರದ ಪಶ್ಚಿಮ ಕಾರ್ಡ್ ರಸ್ತೆಯ ಸರ್ವಿಸ್ ರಸ್ತೆ, ಟೋಲ್ ಗೆಟ್ ಜಂಕ್ಷನ್ ನಿಂದ ವಿಜಯನಗರ ಮೆಟ್ರೋ ನಿಲ್ದಾಣದವರೆಗೂ 1.3 ಕೀ.ಮಿ ಅನಧಿಕೃತವಾಗಿ ಅಳವಡಿಸಿರುವ ಓಎಫ್‌ಸಿ ಕೇಬಲ್‌ಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸದರಿ ರಸ್ತೆಯಲ್ಲಿ 4 ಟ್ರ್ಯಾಕ್ಟರ್ ಲೋಡ್ ಅನಧಿಕೃತ ಕೇಬಲ್‌ ಕತ್ತರಿಸಿ ತೆರವುಗೊಳಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಎಷ್ಟು ಮಳೆಗಾಲ ಬಂದು ಹೋದರು, ಸಿದ್ಧವಾಗದ ಬಿಬಿಎಂಪಿ: ತೆರಿಗೆ ಕಟ್ಟಿಯೂ ಜನರಿಗೆ ತಪ್ಪದ ಸಮಸ್ಯೆ

ಅನಧಿಕೃತವಾಗಿ .ಎಫ್.ಸಿ ಕೇಬಲ್ ಅಳವಡಿಸುವವರಿಗೆ ಸೂಚನೆ

ಬಿಬಿಎಂಪಿ ಪೂರ್ವ ವಲಯ ವ್ಯಾಪ್ತಿಯಲ್ಲಿ ಟೆಂಡರ್ ಶೂ‌ರ್ ಮಾದರಿಯಡಿ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ರಸ್ತೆಗಳನ್ನು ಅಭಿವೃದ್ಧಿಗೊಳಿಸಿ, ಡಕ್ಟ್‌ಗಳ ಮೂಲಕ ಭೂಗತ ಕೇಬಲ್ ಅಳವಡಿಸಲು ಆವಕಾಶ ಕಲ್ಪಿಸಲಾಗಿದೆ.

ಕೇಬಲ್ ಆಪರೇಟರ್‌ಗಳು ಭೂಗತ ಕೇಬಲ್ ಅಳವಡಿಸದೇ ಅನಧಿಕೃತವಾಗಿ ಓವರ್ ಹ್ಯಾಂಗಿಂಗ್‌ ಕೇಬಲ್‌ಗಳನ್ನು ಅಳವಡಿಸಿದ್ದಾರೆ. ಆದ್ದರಿಂದ ಟೆಲಿಕಾಂ ಸಂಸ್ಥೆಗಳು, ಓಎಫ್.ಸಿ ಕೇಬಲ್ ಅಳವಡಿಸಿರುವ ಸಂಸ್ಥೆಗಳು ಮುನ್ನಚ್ಚರಿಕೆ ಕ್ರಮವಾಗಿ ಅನಧಿಕೃತವಾಗಿ ಅಳವಡಿಸಿರುವ ಓವರ್ ಹ್ಯಾಂಗಿಂಗ್‌ ಕೇಬಲ್‌ಗಳನ್ನು ತಕ್ಷಣವೇ ತೆರವುಗೊಳಿಸಲು ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರು ಪತ್ರಿಕಾ ಪ್ರಕಟಣೆಯ ಮೂಲಕ ಭೂಗತ ಕೇಬಲ್ ಅಳವಡಿಸುವ ಸಂಸ್ಥೆಗಳಿಗೆ ಸೂಚಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X