- ವೇತನ ಸಹಿತ ರಜೆ ನೀಡದಿದ್ದರೆ, ಉದ್ಯೋಗಿಗಳು 1950ಗೆ ಡಯಲ್ ಮಾಡಿ
- ವೇತನ ಸಹಿತ ರಜೆಯೂ ಉದ್ಯೋಗದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೆ ಅನ್ವಯಿಸುತ್ತದೆ
ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಯ ಮತದಾನ ಮೇ 10ರಂದು ನಡೆಯುತ್ತಿದೆ. ಮತದಾರರಿಗೆ ವೇತನ ಸಹಿತ ರಜೆ ನೀಡಲು ನಿರಾಕರಿಸಿದ ಖಾಸಗಿ ಸಂಸ್ಥೆಗಳು ಮತ್ತು ಐಟಿ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಚ್ಚರಿಸಿದೆ.
ಕೆಲವು ಸಂಸ್ಥೆಗಳು ರಜೆ ಘೋಷಿಸಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.
ಯಾವುದೇ ಸಂಸ್ಥೆಯು ವೇತನ ಸಹಿತ ರಜೆಯನ್ನು ನೀಡದಿದ್ದರೆ, ಉದ್ಯೋಗಿಗಳು 1950 (ಟೋಲ್ ಫ್ರೀ ಸಂಖ್ಯೆ)ಗೆ ಡಯಲ್ ಮಾಡುವಂತೆ ಬಿಬಿಎಂಪಿ ಹೇಳಿದೆ.
ಈ ನಿಯಮವನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ, 1951 ಮತ್ತು ಇತರ ಸಂಬಂಧಿತ ಕಾನೂನುಗಳ ಪ್ರಕಾರ ಕಟ್ಟುನಿಟ್ಟಿನ ಕಾನೂನು ಕ್ರಮವನ್ನು ಜರುಗಿಸಲಾಗುವುದು” ಎಂದು ಬಿಬಿಎಂಪಿ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಮಾರುಕಟ್ಟೆಗೆ ಲಗ್ಗೆಯಿಟ್ಟ ಮಾನವನ ಮೈ ಬಣ್ಣದ ಬ್ಯಾಂಡ್ ಏಡ್‌ಗಳು!
ವೇತನ ಸಹಿತ ರಜೆಯೂ ಉದ್ಯೋಗದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೆ ಅನ್ವಯಿಸುತ್ತದೆ. ಮತದಾನದ ಅರ್ಹತೆಯನ್ನು ಹೊಂದಿರುವವರು ಪ್ರತಿಯೊಬ್ಬರು ಮತದಾನ ಮಾಡಬೇಕೆಂದು ಪಾಲಿಕೆ ವಿನಂತಿಸಿದೆ.