- ಮುಂದಿನ 15 ದಿನಗಳಲ್ಲಿ ಎಸ್‌ಡಬ್ಲೂಡಿ ಲಿಂಕಿಂಗ್ ಡ್ರೈನ್ ಕಾಮಗಾರಿ ಪೂರ್ಣಗೊಳಿಸಿ
- ಗುತ್ತಿಗೆದಾರರಿಗೆ ತ್ವರಿತವಾಗಿ ಕಾಮಗಾರಿಯನ್ನು ಮುಕ್ತಾಯಗೊಳಿಸಲು ಸೂಚನೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಜಯನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬೃಹತ್ ನೀರುಗಾಲುವೆ ಪೈಪಲೈನ್ ಕಾಮಗಾರಿ ಸ್ಥಳದಲ್ಲಿ ಯಾವುದೇ ಅನಾಹುತ ಜರುಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಬಿಬಿಎಂಪಿ ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯ್‌ಪುರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಯನಗರ ವ್ಯಾಪ್ತಿಯಲ್ಲಿನ ಸಿಂಧೂರ್ ಕನ್ವೆನ್ಷನ್ ಹಾಲ್ ಹತ್ತಿರ ಪ್ರಗತಿಯಲ್ಲಿರುವ ಬೃಹತ್ ನೀರುಗಾಲುವೆ ಪೈಪ್ ಲೈನ್ ಕಾಮಗಾರಿಯನ್ನು ಜಯರಾಮ್ ರಾಯ್‌ಪುರ ಅವರು ಬುಧವಾರ ಪರಿಶೀಲಿಸಿದರು.
ಫ್ರ್ಯಾಂಕ್ ಪಬ್ಲಿಕ್ ಶಾಲೆ ಹತ್ತಿರ ನಡೆಯುತ್ತಿರುವ ಭೂಗತ(ಟಿಟಿ) ಕಾಮಗಾರಿಗೆ ಸಿಂಕಿಂಗ್ ಪಿಟ್ಸ್‌ಗಳನ್ನು ನಿರ್ಮಿಸಿರುವ ಬಗ್ಗೆ ಪರಿಶೀಲಿಸಿದರು. ಇದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ತ್ವರಿತವಾಗಿ ಕಾಮಗಾರಿಯನ್ನು ಮುಕ್ತಾಯಗೊಳಿಸಬೇಕು ಎಂದು ಹೇಳಿದರು.
ಜಯನಗರದ ಡಾಲರ್ಸ್ ಕಾಲೋನಿ ವ್ಯಾಪ್ತಿಯ ವೈಷ್ಣವಿ ಟೆರೆಸಸ್ ಹತ್ತಿರವಿರುವ ಬೃಹತ್ ನೀರುಗಾಲುವೆ ಕಾಮಗಾರಿಯನ್ನು ಪರಿಶೀಲಿಸಿದರು. ನೀರುಗಾಲುವೆಯು ವೈಷ್ಣವಿ ಟೆರಸ್ ಹತ್ತಿರ 6 ಮೀಟರ್ ಅಗಲವಿದ್ದು, ತದನಂತರದಲ್ಲಿ ಮುಂದೆ ರೈನ್ ಬೋ ಆಸ್ಪತ್ರೆಯ ಸ್ಥಳದಲ್ಲಿ 3 ಮೀಟರ್ ಅಗಲ ಆಗಿದ್ದು, ನೀರುಗಾಲುವೆ ಅಗಲವು ಕಡಿಮೆಯಾಗಿರುವುದರಿಂದ ಇದಕ್ಕೆ ಪರ್ಯಾಯ ಕಾಲುವೆ ನಿರ್ಮಿಸುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದರು.
ಈ ಸುದ್ದಿ ಓದಿದ್ದೀರಾ? ಜೂನ್ 2ರಂದು ಲಾಲ್‌ಬಾಗ್‌ನಲ್ಲಿ ವಾರ್ಷಿಕ ಮಾವು ಮೇಳ ಆರಂಭ
ನಂತರ ವೈಷ್ಣವಿ ಟೆರೇಸ್ ಎದುರು ಬೊಮ್ಮನಹಳ್ಳಿ ವಿಭಾಗಕ್ಕೆ ಸೇರುವ ಬೃಹತ್ ನೀರುಗಾಲುವೆಯ ಹೂಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಲು ಸೂಚಿಸಿದರು. ಕಾಮಗಾರಿ ಪ್ರಗತಿಯು ನಿಧಾನಗತಿಯಲ್ಲಿದ್ದು, ಮುಂದಿನ 15 ದಿನಗಳಲ್ಲಿ ಎಸ್‌ಡಬ್ಲೂಡಿ ಲಿಂಕಿಂಗ್ ಡ್ರೈನ್ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದರು.