ಪಶ್ಚಿಮ ಬೆಂಗಳೂರಿನ ಮುದ್ದಿನಪಾಳ್ಯದಲ್ಲಿ ಶನಿವಾರ ಸುಟ್ಟು ಕರಕಲಾದ ಕಾರಿನೊಳಗೆ 42 ವರ್ಷದ ಉದ್ಯಮಿಯೊಬ್ಬರ ಶವ ಪತ್ತೆಯಾಗಿದೆ. ಉದ್ಯಮಿಯು ಕಾರಿನೊಳಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಹೋಟೆಲ್ ಕನ್ಸಲ್ಟೆನ್ಸಿ ಸೇವೆ ನಡೆಸುತ್ತಿದ್ದ ನಾಗರಭಾವಿ 2ನೇ ಹಂತದ ನಿವಾಸಿ ಪ್ರದೀಪ್ ಸಿ ಮೃತಪಟ್ಟವರು.
ಕಾರಿ ಹೊತ್ತಿ ಉರುಯಿತ್ತಿರುವ ಬಗ್ಗೆ ನಿಯಂತ್ರಣ ಕೊಠಡಿಗೆ ಮಧ್ಯಾಹ್ನ 2.45ಕ್ಕೆ ಕರೆ ಬಂದಿದೆ. ಆ ಕೂಡಲೇ ಅಗ್ನಿಶಾಮಕ ದಳವು ಸ್ಥಳಕ್ಕೆ ಧಾವಿಸಿದೆ ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಭೀಕರ ಕಾರು ಅಪಘಾತ; 6 ಮಂದಿ ವಿದ್ಯಾರ್ಥಿಗಳ ದುರ್ಮರಣ
“ಕಾರು ಹೊತ್ತಿ ಉರಿಯುತ್ತಿತ್ತು. ಕಾರಿನೊಳಗೆ ಓರ್ವ ಇರುವುದನ್ನು ನಾವು ನೋಡಿದೆವು. ಆದರೆ ಆತ ಅದಾಗಲೇ ಸಾವನ್ನಪ್ಪಿರುವಂತೆ ಕಂಡಿತು. ಕೂಡಲೇ ಬೆಂಕಿ ನಂದಿಸಿ ಮೃತದೇಹವನ್ನು ಹೊರತೆಗೆದೆವು” ಎಂದು ಮಾಧ್ಯಮಗಳಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದೆಹಲಿ ನೋಂದಣಿಯ ಸ್ಕೋಡಾ ಕಾರು ಮುದ್ದಿನಪಾಳ್ಯ ಬಳಿ ನಿರ್ಜನ ಪ್ರದೇಶದಲ್ಲಿ ನಿಂತಿರುವುದು ಪತ್ತೆಯಾಗಿದೆ ಎಂದಿದ್ದಾರೆ.
“ಸಿಸಿಟಿವಿ ನೋಡಿದಾಗ ವ್ಯಕ್ತಿ ಕಾರಿನಲ್ಲಿ ಒಬ್ಬನೇ ಇರುವುದು ಕಾಣುತ್ತದೆ. ಸದ್ಯಕ್ಕೆ ಇದು ಆತ್ಮಹತ್ಯೆಯಂತೆ ಕಾಣುತ್ತಿದೆ. ಆದರೆ ಆತ್ಮಹತ್ಯೆ ಎಂದು ತನಿಖೆ ಕೈಬಿಡಲಾರೆವು. ನಾವು ತನಿಖೆ ನಡೆಸುತ್ತೇವೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
