ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್ಪ್ರೆಸ್ ಜುಲೈ 31ರಂದು ಪ್ರಾರಂಭವಾಗಲಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಈ ವಿಶೇಷ ರೈಲು ಮೂರು ವಾರಕ್ಕೊಮ್ಮೆ ಎರಡು ನಗರಗಳ ನಡುವೆ ಸಂಚರಿಸಲಿದೆ.
ಈ ರೈಲು ಪ್ರಯಾಣದ ಸಮಯ ಕಡಿಮೆ ಮಾಡುತ್ತದೆ. ಎರ್ನಾಕುಲಂನಿಂದ ಈ ರೈಲು ಸೇವೆ ಪ್ರತಿ ವಾರದಲ್ಲಿ ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಲಭ್ಯವಿರುತ್ತದೆ.
ಎಂಟು ಬೋಗಿಗಳ ಸೆಮಿ-ಹೈ-ಸ್ಪೀಡ್ ರೈಲು ಎರ್ನಾಕುಲಂ ಜಂಕ್ಷನ್ನಿಂದ (ಇಆರ್ಎಸ್) 12:50ಕ್ಕೆ ಪ್ರಾರಂಭವಾಗಲಿದ್ದು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ರಾತ್ರಿ 10 ಗಂಟೆಗೆ ತಲುಪಲಿದೆ.
ಇದನ್ನು ಓದಿದ್ದೀರಾ? ಯಾದಗಿರಿಯಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಆಗ್ರಹ
ಬೆಂಗಳೂರು ಕಂಟೋನ್ಮೆಂಟ್ನಿಂದ ರೈಲು ಬೆಳಿಗ್ಗೆ 5:30ಕ್ಕೆ ಹೊರಡಲಿದ್ದು, ಮಧ್ಯಾಹ್ನ 2.20ಕ್ಕೆ ಎರ್ನಾಕುಲಂ ತಲುಪಲಿದೆ. ಪ್ರತಿ ವಾರ ಗುರುವಾರ, ಶನಿವಾರ ಮತ್ತು ಸೋಮವಾರ ಈ ರೈಲು ಸೇವೆ ಇರಲಿದೆ.
ಎರ್ನಾಕುಲಂ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ತ್ರಿಶೂರ್, ಪಾಲಕ್ಕಾಡ್, ಪೊದನ್ನೂರ್, ತಿರುಪುರ್, ಈರೋಡ್ ಮತ್ತು ಸೇಲಂನಲ್ಲಿ ನಿಲುಗಡೆ ಹೊಂದಿದೆ.
ಕಳೆದ ದೀಪಾವಳಿ ವೇಳೆ ಈ ರೈಲು ಸೇವೆ ಆರಂಭವಾಗಬೇಕಿತ್ತು. ಆದರೆ ಹಲವಾರು ಕಾರಣದಿಂದಾಗಿ ಮುಂದೂಡಲಾಗಿತ್ತು.