ದುರುಳ ವ್ಯಕ್ತಿಯೊಬ್ಬ ತನ್ನ ಅಣ್ಣನ ಮೂವರು ಮಕ್ಕಳ ಮೇಲೆ ವಿಕೃತವಾಗಿ ಹಲ್ಲೆ ನಡೆಸಿದ್ದು, ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ.
ಮಕ್ಕಳ ಗುಪ್ತಾಂಗಕ್ಕೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಓರ್ವ ಬಾಲಕ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಆರೋಪಿ ಖಾಸೀಂ ಎಂಬಾತ ತನ್ನ ಅಣ್ಣ ಚಾಂದ್ ಪಾಷ ಅವರ ಮಕ್ಕಳಾದ ಮಹಮ್ಮದ್ ಇಶಾಕ್ (9), ಮಹಮ್ಮದ್ ಜುನೇದ್ (7) ಹಾಗೂ ರೋಹನ್ (5) ಮೇಲೆ ವಿಕೃತ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಇಶಾಕ್ ಮತ್ತು ಜುನೇದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಚಾಂದ್ ಪಾಷ ತನ್ನ ಕುಟುಂಬದೊಂದಿಗೆ 5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಶನಿವಾರ, ಚಾಂದ್ ಪಾಷ ಮತ್ತು ಅವರ ಪತ್ನಿ ತಮ್ಮ ಮಕ್ಕಳನ್ನು ಅಜ್ಜಿಯೊಂದಿಗೆ ಮನೆಯಲ್ಲಿ ಬಿಟ್ಟು, ಕೆಲಸಕ್ಕೆ ಹೋಗಿದ್ದರು. ಅಜ್ಜಿ ಅಡುಗೆಗಾಗಿ ತರಕಾರಿ ತರಲೆಂದು ಮಾರುಕಟ್‌ಟೆಎ ಹೋದಾಗ, ಮಕ್ಕಳ ಮೇಲೆ ಖಾಸೀಂ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.
ಘಟನಾ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.