ಚಂದಾಪುರ | ಪೊಲೀಸರ ಗೂಂಡಾಗಿರಿ; ವಿನಾಕಾರಣ ಯುವಕರ ಮೇಲೆ ಹಲ್ಲೆ

Date:

Advertisements
  • ಜಾಸ್ತಿ ಮಾತನಾಡಿದರೆ ಒದ್ದು ಒಳಗೆ ಕೂರ್ಸ್ತಿನಿ ಎಂದ ಪೊಲೀಸರು
  • ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ ಎಂದ ಎಡಿಜಿಪಿ ಅಲೋಕ್ ಕುಮಾರ್

ಕ್ಷುಲ್ಲಕ ಕಾರಣವೂ ಇಲ್ಲದೇ ಇಬ್ಬರು ಸಹೋದರರ ಮೇಲೆ ನಾಲ್ಕೈದು ಪೊಲೀಸರು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಆನೇಕಲ್ ಬಳಿಯ ಚಂದಾಪುರ ವೃತ್ತದ ಬಳಿ ನಡೆದಿದೆ.

ರಾಜ್ಯ ವಿಧಾನಸಭಾ ಕ್ಷೇತ್ರದ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಬಹುಮತದ ಫಲಿತಾಂಶ ಪಡೆದು, ವಿಜಯ ಸಾಧಿಸಿದೆ. ಈ ಹಿನ್ನೆಲೆ ಎಲ್ಲೆಡೆ ಸಂಭ್ರಮಾಚಾರಣೆ ಹಬ್ಬದಂತಿದ್ದ ಕಾರಣ ಸಂಚಾರ ದಟ್ಟಣೆಯೂ ಬೆಂಗಳೂರಿನಲ್ಲಿತ್ತು. ಹಲವೆಡೆ ವಾಹನ ಸವಾರರು ಪರದಾಡಿದ್ದಾರೆ. ಚಂದಾಪುರದಲ್ಲಿ ಇಬ್ಬರು ಕಾರಣವೇ ಇಲ್ಲದೆ ಲಾಠಿ ಪ್ರಹಾರಕ್ಕೆ ಒಳಗಾಗಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ, ಹಲ್ಲೆಗೊಳಗಾದ ಸಾಯಿರಾಜ್ ನಟರಾಜ್ ಎಂಬುವರು ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

ಇಂತಹ ಘಟನೆಗಳು ಬೆಂಗಳೂರಿನಲ್ಲಿ ಸಂಭವಿಸುತ್ತಿರುವುದು ಇದೇ ಮೊದಲ ಬಾರಿಯೇನಲ್ಲ.ಇದು ನಾಲ್ಕನೇ ಘಟನೆ. ಕಳೆದ ಕೆಲ ತಿಂಗಳ ಹಿಂದೆ ನಡು ರಾತ್ರಿ ದಾರಿಯಲ್ಲಿ ನಡೆಯುತ್ತಿದ್ದ ದಂಪತಿಗಳ ಬಳಿ ಪೊಲೀಸರು ಹಣ ಪಡೆದು ಆರೋಪಕ್ಕೆ ಒಳಗಾಗಿ ಕೆಲಸದಿಂದ ವಜಾಗೊಂಡಿದ್ದರು. ಅದಾದ ನಂತರ, ಎಚ್‌ಎಸ್‌ಆರ್ ಲೇಔಟ್‌ ಬಳಿ ವಾಹನ ಸವಾರನ ಬ್ಯಾಗ್‌ನಲ್ಲಿ ಗಾಂಜಾ ಇದೆ ಎಂದು ಸುಳ್ಳು ಹೇಳಿ ಹಣ ಕಿತ್ತಿದ್ದರು. ಸರ್ಜಾಪುರದಲ್ಲಿ ಬಿಬಿಎಂಪಿ ಹೋಮ್‌ ಗಾರ್ಡ್‌ ಸಹ ಇದೇ ರೀತಿ ನಡೆಸಿಕೊಂಡಿದ್ದರು. ರಾತ್ರಿಯಲ್ಲಿ ಓಡಾಡುವ ಜನರ ಮೇಲೆ ಇಲ್ಲ ಸಲ್ಲದ ಆಮಿಷವೊಡ್ಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸುವಂತಹ ಘಟನೆಗಳು ಬೆಂಗಳೂರಿನಲ್ಲಿ ಹೆಚ್ಚಾಗಿದೆ.

Advertisements

ಇದೀಗ, ಚಂದಾಪುರದಲ್ಲಿ ತಮಗಾದ ಹಲ್ಲೆಯ ಬಗ್ಗೆ ಸಾಯ್‌ರಾಜ್‌ ನಟರಾಜ್‌ ಟ್ವೀಟ್ ಮಾಡಿದ್ದು, “ಮೇ.13 ನನ್ನ ಜೀವನದ ಕೆಟ್ಟ ದಿನ ಮತ್ತು ಈ ದಿನ ಆಗಿರುವ ಅವಮಾನವನ್ನು ನಾವು ಎಂದಿಗೂ ಮರೆಯುವುದಿಲ್ಲ. ಚಂದಾಪುರ ವೃತ್ತದಲ್ಲಿ ಕಾಲೇಜು ವಿದ್ಯಾರ್ಥಿಗಳಾದ ನಾನು ಮತ್ತು ನನ್ನ ಸೋದರ ಸಂಬಂಧಿ ಪೊಲೀಸರಿಂದ ಹಲ್ಲೆಗೊಳಗಾಗಿದ್ದೇವೆ” ಎಂದು ಹೇಳಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ, ದೂರು ನೀಡಿದ್ದಾರೆ.

“ಮೇ 13 ರಂದು ಆನೇಕಲ್ ತಾಲೂಕಿನ ಚಂದಾಪುರ ವೃತ್ತದಲ್ಲಿ ಸಂಜೆ 7:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ನಾವಿಬ್ಬರೂ ಏನಾದರೂ ತಿನ್ನೋಣ ಎಂದು ನಮ್ಮ ಬೈಕ್‌ನಲ್ಲಿ ಹೋಗುತ್ತಿದ್ದೆವು. ಪ್ರತಿ ಶನಿವಾರ ಚಂದಾಪುರ ಮಾರ್ಕೆಟ್‌ನಲ್ಲಿ ಸಂತೆ ಇರುತ್ತದೆ. ಅದಲ್ಲದೆ, ಚುನಾವಣಾ ಫಲಿತಾಂಶದ ಸಂಭ್ರಮಾಚರಣೆ ಇತ್ತು. ಹಾಗಾಗಿ ಸಂಚಾರ ದಟ್ಟಣೆ ಇತ್ತು. ದಟ್ಟಣೆಯಲ್ಲೇ ನಾವು ನಿಧಾನವಾಗಿ ವಾಹನ ಚಲಾಯಿಸುತ್ತಿದ್ದೆವು” ಎಂದು ಟ್ವೀಟ್‌ನಲ್ಲಿ ವಿವರಿಸಿದ್ದಾರೆ.

ಮುಂದುವರೆದು, “ಈ ವೇಳೆ ನಮಗೆ ತಿಳಿದಿರುವ ಪ್ರಕಾರ, ಆನೇಕಲ್ ಪೊಲೀಸ್ ಠಾಣೆಯ ಕೃಷ್ಣಮೂರ್ತಿ ಎಸ್ ಎಂಬ ಪೊಲೀಸ್‌, ಗಾಡಿ ರಸ್ತೆ ಬದಿ ನಿಲ್ಲಿಸಿ ಎಂದರು. ಗಾಡಿ ನಿಲ್ಲಿಸಿ ಹೊರಡುವಾಗ, ನಾನು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಆದರೆ, ನಾವಿದ್ದ ಜಾಗದಿಂದ ಬಲಕ್ಕೆ ತೆರಳಬೇಕಿತ್ತು. ಅದಕ್ಕೆ ನನ್ನ ಸೋದರ ಸಂಬಂಧಿ ನನ್ನನ್ನು ತಡೆದು ‘ಬಲ್ಲಕೆ ಹೋಗೋ’ ಎಂದು ನನ್ನನ್ನು ಏಕವಚನದಲ್ಲೇ ಮಾತನಾಡಿಸಿದ, ಇದನ್ನು ಕೇಳಿಸಿಕೊಂಡ ಪೊಲೀಸ್ ಪೇದೆ ಅವರನ್ನು ನಿಂದಿಸಿದೆವು ಎಂದು ಊಹಿಸಿ, ನಮ್ಮ ಬಳಿ ಹಿಂತುರಿಗಿ ಬಂದು ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನಮ್ಮ ಗಾಡಿ ಕೀ ತೆಗೆದುಕೊಂಡರು. ‘ಗಾಡಿ ಜಪ್ತಿ ಮಾಡಲು ನಾವೇನು ತಪ್ಪು ಮಾಡಿದ್ದೇವೆ’ ಎಂದೆವು. ನಂತರ ಚಂದಾಪುರ ವೃತ್ತದ ಬಳಿಯೇ ಒಂದು ಕತ್ತಲೇ ಕೋಣೆಗೆ ಅವನ ಅಂಗಿ ಹಿಡಿದು ಎಳೆದೊಯ್ದರು. ಕೊನೆಗೆ ಬೇರೆ ವಿಧಿ ಇಲ್ಲದೆ ಇಬ್ಬರು ಒಳಗೆ ಹೋದೆವು” ಎಂದು ಬೇಸರದಿಂದ ಟ್ವಿಟ್ ಮಾಡಿದ್ದಾರೆ.

“ಪೊಲೀಸ್ ಬೂತ್‌ ಒಳ ಹೋದ ನಂತರ ಕತ್ತಲೇ ಕೋಣೆಯಲ್ಲಿ ಕುಡಿದು, ಧೂಮಪಾನ ಮಾಡಿರುವ ವಾಸನೆ ಇತ್ತು. ನಮ್ಮನ್ನು ‘ಎನ್‌ಸಿಸಿ ಸ್ಕ್ವಾಟ್’ ಸ್ಥಾನದಲ್ಲಿ ಕುಳಿತುಕೊಳ್ಳಲು ಹೇಳಿದರು. ನಾವ್ಯಾಕೆ ಕುಳಿತುಕೊಳ್ಳಬೇಕು ಎಂದಾಗ ಲಾಠಿಯಿಂದ ಹೊಡೆದರು. ಮಾತನಾಡಲು ಸಹ ಅವಕಾಶ ನೀಡಲಿಲ್ಲ. ಎರಡರಿಂದ ಮೂರು ಮಂದಿ ಸೇರಿ ಲಾಠಿ ಪ್ರಹಾರ ನಡೆಸಿ, ಇಬ್ಬರನ್ನೂ ತೀವ್ರವಾಗಿ ಥಳಿಸಿದರು. ಒಬ್ಬ ಅಧಿಕಾರಿ ನನ್ನ ಕೂದಲನ್ನು ಹಿಡಿದು ಕಪಾಳಮೋಕ್ಷ ಮಾಡಿದರು” ಎಂದಿದ್ದಾರೆ.

“ನಾವು ಯಾವುದೇ ತಪ್ಪು ಮಾಡಿಲ್ಲದ ಕಾರಣ, ಪೋಷಕರಿಗೆ ಕರೆ ಮಾಡಲು ಫೋನ್ ತೆಗೆಯಲು ಪ್ರಯತ್ನಿಸಿದೆ. ಮತ್ತೆ ನಮಗೆ ಹೊಡೆದರು. ಒಂದು ಇಂಚು ಚಲಿಸಿದರೆ ಹೊಡೆಯುತ್ತೇವೆ ಎಂದು ಬೆದರಿಕೆ ಹಾಕಿದರು. 45 ನಿಮಿಷಕ್ಕೂ ಹೆಚ್ಚು ಕಾಲ ಠಾಣೆಯಲ್ಲಿ ಅಸಹಾಯಕರಾಗಿ ಕುಳಿತೆವು. ಬೇರೆ ದಾರಿಯಿಲ್ಲದೆ, ನಮ್ಮನ್ನು ಹೋಗಲು ಬಿಡಿ ಎಂದು ನಾವು ಅವರನ್ನು ಬೇಡಿಕೊಂಡೆವು. ಅದಾದ ನಂತರ ಬೈಕ್ ಕೀ ಹಿಂತಿರುಗಿಸಿದರು” ಎಂದು ಅಳಲು ತೊಡಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಆನ್‌ಲೈನ್‌ ಡೆಲಿವೆರಿ ಮೂಲಕ ಡ್ರಗ್ಸ್‌ ಮಾರಾಟ; ಬಂಧನ

“ಮನೆಗೆ ತೆರಳಿದಾಗ ನಮ್ಮ ಪೋಷಕರು ನಮ್ಮನ್ನು ಕಂಡು ಗಾಬರಿಯಾದರು. ಈ ಬಗ್ಗೆ ವಿಚಾರಿಸಲು ಪೊಲೀಸ್ ಠಾಣೆಗೆ ತೆರಳಿದೆವು. ಪೊಲೀಸ್ ಹೆಸರು ಕೇಳಿದಾಗ ಆನೇಕಲ್ ಅಥವಾ ಸೂರ್ಯನಗರ ಪೇದೆ ಚೆನ್ನಬಸಯ್ಯ ಎಂದು ತಿಳಿಯಿತು. ಅಸಭ್ಯ ವರ್ತನೆಗೆ ಬಗ್ಗೆ ವಿಚಾರಿಸಿದರೆ ಆ ಪೇದೆ ನನ್ನತ್ತ ತಿರುಗಿ ‘ಏಯ್ ನೀನು ಲೋಫರ್, ಬೋಳಿಮಗನೆ ಅಂತ ಬೈದು ಓಡಿ ಹೋದ’ ಹೀಗಾಗಿ ಹೊಡೆದೆ ಎಂದ. ಇದಾದ ನಂತರ ನನ್ನ ಚಿಕ್ಕಪ್ಪ ಮಧ್ಯಪ್ರವೇಶಿಸಿ ಶಾಂತವಾಗಿ ಮಾತಾಡಿ ಎಂದರು. ಆಗ ಪೊಲೀಸ್ ನನ್ನ ಚಿಕ್ಕಪ್ಪನಿಗೆ ” ಜಾಸ್ತಿ ಮಾತನಾಡಿದರೆ ನಿನ್ನನ್ನು ಒದ್ದು ಒಳಗೆ ಕೂರ್ಸ್ತಿನಿ” ಎಂದು ಹೇಳಿದರು.

ಈ ಬಗ್ಗೆ ಈದಿನ.ಕಾಮ್‌ನೊಂದಿಗೆ ಮಾತನಾಡಿದ ಚಂದಾಪುರ ಪೊಲೀಸರು, “ನಾವು ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ನಮಗೂ ಟ್ವಿಟರ್‌ನಲ್ಲಿ ಈಗ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿತು ಶನಿವಾರ ಚಂದಾಪುರವೃತ್ತದಲ್ಲಿ ರಾತ್ರಿ ಪಾಳಿ ಕೆಲಸಲ್ಲಿದ್ದ ಪೊಲೀಸರು ಮತ್ತು ಸಂತ್ರಸ್ತ ಯುವಕರ ಬಗ್ಗೆ ಯಾರೆಂದು ಸಹ ಪತ್ತೆ ಹಚ್ಚುತ್ತಿದ್ದೇವೆ. ಯುವಕರಿನ್ನು ಬರಹದಲ್ಲಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿಲ್ಲ” ಎಂದರು.

ಆನೇಕಲ್ ಪೊಲೀಸ್ ಠಾಣೆ ಬೆಂಗಳೂರು ನಗರ ಪೊಲೀಸರು ಬರುವುದಿಲ್ಲ. ಹೀಗಾಗಿ, ದಯವಿಟ್ಟು ಬೆಂಗಳೂರು ಗ್ರಾಮಾಂತರ ಪೊಲೀಸರನ್ನು ಸಂಪರ್ಕಿಸಿ ಎಂದು ಬೆಂಗಳೂರು ನಗರ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಸಮಸ್ಯೆಗೆ ಸ್ಪಂದಿಸಿರುವ ಎಡಿಜಿಪಿ ಅಲೋಕ್ ಕುಮಾರ್ ಈ ಪ್ರಕರಣದ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್‌ಪಿಗೆ, ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ದಯವಿಟ್ಟು ಅವರನ್ನು ಸಂಪರ್ಕಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X