ಮಕ್ಕಳ ಸಾಹಿತ್ಯಕ್ಕೆ ಹೊಸ ಸ್ಪರ್ಶದ ಅಗತ್ಯವಿದೆ ಎಂದು ಹಿರಿಯ ಲೇಖಕ, ಅಂಕಣಕಾರ ನಾಗೇಶ ಹೆಗಡೆ ಅವರು ಅಭಿಪ್ರಾಯಪಟ್ಟರು.
ಪರಾಗ್ ಹಾಗೂ ಬಹುರೂಪಿ ಪ್ರಕಾಶನ ಜಂಟಿಯಾಗಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಮಕ್ಕಳ ಕೃತಿಗಳ ಭಾಷಾಂತರ ಕಾರ್ಯಾಗಾರದಲ್ಲಿ ಸಾಹಿತಿಯೊಂದಿಗೆ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಮಕ್ಕಳ ಸಾಹಿತ್ಯ ಲೋಕದಲ್ಲಿ ಸಾಕಷ್ಟು ಪ್ರಯೋಗಗಳು ಜರುಗಬೇಕಿದ್ದು ಸಮಕಾಲೀನ ಸಂಗತಿಗಳನ್ನು ಅದರ ಚೌಕಟ್ಟಿನೊಳಗೆ ತರಬೇಕು. ವಿಜ್ಞಾನ ಸಂವಹನ ಹೇಗೆ ಸರಳ ಭಾಷೆಯನ್ನು ಹೊಂದಿ, ಜನರಿಗೆ ಅರ್ಥವಾಗಬೇಕು ಎಂದು ಬಯಸುತ್ತೇನೋ ಮಕ್ಕಳ ಸಾಹಿತ್ಯ ರಚ್ಚಿಸುವಾಗಲೂ ಅದೇ ಸೂತ್ರವನ್ನು ಅಳವಡಿಸಿಕೊಂಡಿದ್ದೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಗುಂಡ್ಲುಪೇಟೆ | ಕನಕ ಜಯಂತಿ ವೇಳೆ ಯತೀಂದ್ರಗೆ ಕೆಟ್ಟದಾಗಿ ಬೈದು ಪರಾರಿಯಾದ ಯುವಕ ಬಂಧನ
ಮಕ್ಕಳ ಸಾಹಿತ್ಯಕ್ಕೆ ಹೊಸ ಆಯಾಮ ನೀಡುವಲ್ಲಿ, ಬೇರೆ ಭಾಷೆಯ ಮಕ್ಕಳ ಸಾಹಿತ್ಯವನ್ನು ಕನ್ನಡಕ್ಕೆ ತರಲು ಯತ್ನಿಸುತ್ತಿರುವ ಪರಾಗ್ ಹಾಗೂ ಬಹುರೂಪಿ ಕಾರ್ಯವನ್ನು ಅವರು ಶ್ಲಾಘಿಸಿದರು.
ಪರಾಗ್ ನ ಲಕ್ಷ್ಮಿ ಕರುಣಾಕರನ್, ಬಹುರೂಪಿಯ ಜಿ ಎನ್ ಮೋಹನ್, ಶ್ರೀಜಾ ವಿ ಎನ್, ಮಕ್ಕಳ ಸಾಹಿತ್ಯ ತಜ್ಞರಾದ ಎಂ ಅಬ್ದುಲ್ ರೆಹಮಾನ್ ಪಾಷ, ತೇಜಸ್ವಿ ಶಿವಾನಂದ್ ಉಪಸ್ಥಿತರಿದ್ದರು.