ಇಂದು ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧಿಸಲಾಗಿದೆ. ಚರ್ಚ್‌ಗಳಲ್ಲಿ ನಿಗದಿತ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಶಿವಾಜಿನಗರದ ಸೇಂಟ್ ಮೇರಿಸ್ ಬೆಸಿಲಿಕಾ ಚರ್ಚ್‌ನಲ್ಲಿ ಶಿವಾಜಿನಗರ ಬಸ್ ನಿಲ್ದಾಣದ ಮೊದಲ ಮತ್ತು ಎರಡನೇ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಮೀನಾಕ್ಷಿ ಕೊಯಿಲ್ ಸ್ಟ್ರೀಟ್, ಸೆಂಟ್ರಲ್ ಸ್ಟ್ರೀಟ್ ಮತ್ತು ನರೋನ್ಹಾ ರಸ್ತೆಯಲ್ಲಿ ರಾತ್ರಿ 8 ಗಂಟೆಯವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಇದನ್ನು ಓದಿದ್ದೀರಾ? ಕೇರಳ | ಕ್ರಿಸ್‌ಮಸ್ ಆಚರಣೆಗೆ ಸಂಘಪರಿವಾರ ಅಡ್ಡಿ; ಗೋದಲಿ ಧ್ವಂಸ, ಬೆದರಿಕೆ
ಫೀನಿಕ್ಸ್ ಮಾಲ್, ವಿಆರ್ ಮಾಲ್ ಮತ್ತು ನೆಕ್ಸಸ್ ಶಾಂತಿನಿಕೇತನದಲ್ಲಿ ಡಿಸೆಂಬರ್ 28ರಂದು ರಾತ್ರಿ 8 ಗಂಟೆಯವರೆಗೆ ನಿರ್ಬಂಧವಿದೆ. ಐಟಿಪಿಎಲ್ ಮುಖ್ಯರಸ್ತೆ ಬಿ ನಾರಾಯಣಪುರ ಶೆಲ್ ಪೆಟ್ರೋಲ್ ಬಂಕ್ ನಿಂದ ಗರುಡಾಚಾರ್‌ಪಾಳ್ಯ ಡೆಕಾಥ್ಲಾನ್‌ವರೆಗೆ ರಸ್ತೆಯ ಬದಿಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಮೆಡಿಕಾರ್ ಆಸ್ಪತ್ರೆಯಿಂದ ಐಟಿಪಿಎಲ್ ಮುಖ್ಯರಸ್ತೆಯಿಂದ ಬಿಗ್ ಬಜಾರ್ ಜಂಕ್ಷನ್‌ವರೆಗೆ ವಾಹನ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ. ಫೀನಿಕ್ಸ್ ಮಾಲ್‌ಗೆ ಟ್ಯಾಕ್ಸಿ ಮೂಲಕ ಬರುವವರು ಬೆಸ್ಕಾಂ ಕಚೇರಿ ಬಳಿ ಇಳಿಯಬೇಕಾಗುತ್ತದೆ. ಇನ್ನು ಟ್ಯಾಕ್ಸಿ ಚಾಲಕರು ತಮ್ಮ ಗ್ರಾಹಕರನ್ನು ಲೌರಿ ಜಂಕ್ಷನ್‌ನಲ್ಲಿ ಪಿಕ್‌ಅಪ್ ಮಾಡಬಹುದು. ನೆಕ್ಸಸ್ ಶಾಂತಿನಿಕೇತನದ ಡ್ರಾಪ್-ಆಫ್ ರಾಜಪಾಳ್ಯ ಬಳಿ ಮತ್ತು ಪಿಕ್-ಅಪ್ ಆಸ್ಟರ್ ಆಸ್ಪತ್ರೆ ಬಳಿ ಇದೆ.
ಹೂಡಿಯಿಂದ ಫೀನಿಕ್ಸ್ ಮಾಲ್‌ಗೆ ಹೋಗುವ ವಾಹನಗಳು ಕಾಮಧೇನು ನಗರದಲ್ಲಿ ಯು-ಟರ್ನ್ ತೆಗೆದುಕೊಂಡು ಶೆಲ್ ಪೆಟ್ರೋಲ್ ಬಂಕ್‌ನಿಂದ ಎಡಕ್ಕೆ ತಿರುಗಿ ಹಿಂದಿನ ಗೇಟ್ ಮೂಲಕ ಫೀನಿಕ್ಸ್ ಮಾಲ್ ಪ್ರವೇಶಿಸಬೇಕು. ಕೆಆರ್ ಪುರಂ ರೈಲು ನಿಲ್ದಾಣದಿಂದ ಬರುವ ವಾಹನಗಳು ಫೀನಿಕ್ಸ್ ಮಾಲ್‌ಗೆ ಪ್ರವೇಶಿಸಲು ಶೆಲ್ ಪೆಟ್ರೋಲ್ ಬಂಕ್‌ನಿಂದ ಎಡಕ್ಕೆ ತಿರುಗಬೇಕು.
