ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಇಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕುಟುಂಬ ಸಮೇತರಾಗಿ ತೆರಳಿದ್ದಾರೆ.
ಮುಂಜಾನೆ 5:30ಕ್ಕೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಕುಟುಂಬದೊಂದಿಗೆ ಡಿ ಕೆ ಶಿವಕುಮಾರ್ ಹೊರಟರು. ಕುಂಭಮೇಳಕ್ಕೆ ಹೋಗುವ ಮುನ್ನ ಸದಾಶಿವ ನಗರದ ತಮ್ಮ ಮನೆಯ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಧರ್ಮದ ನಂಬಿಕೆಯಿಂದ ಇಂದು ಕುಂಭಮೇಳಕ್ಕೆ ಹೋಗುತ್ತಿದ್ದೇನೆ ಎಂದರು.
ಕರ್ನಾಟಕದ ತಿ ನರಸೀಪುರದಲ್ಲಿ ನಡೆಯುವ ಕುಂಭಮೇಳಕ್ಕೂ ತೆರಳಲಿದ್ದೇನೆ. ಅಲ್ಲಿನ ಡಿಸಿ, ಎಸ್ಪಿ ಸೇರಿ ಅಧಿಕಾರಿಗಳು ಕುಂಭಮೇಳಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದಾರೆ. ಅಲ್ಲಿಗೂ ಭಾಗವಹಿಸುತ್ತೇನೆ. ನಮ್ಮ ಕರ್ನಾಟದ ಕಾವೇರಿ ಕುಂಭಮೇಳದಲ್ಲಿ ಭಾಗಿಯಾಗುತ್ತೇನೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣಾ ಪಾರದರ್ಶಕತೆ ನಗೆಪಾಟಲಿಗೀಡಾಯಿತೇ?
ಇದಾದ ನಂತರ ಸೋಮವಾರ (ಏ.10) ಏರ್ ಶೋನಲ್ಲಿ ಸಿಎಂ, ನಾನು ಭಾಗಿಯಾಗುತ್ತಿದ್ದೇವೆ. ಗೋಬಲ್ ಇನ್‌ವೆಸ್ಟ್‌ರ್ ಸಭೆ ಇದೆ, ಅದರಲ್ಲೂ ಭಾಗಿಯಾಗುತ್ತಿದ್ದೇನೆ. ನಾಲ್ಕೈದು ದಿನ ಅಭಿವೃದ್ಧಿ ಕೆಲಸ ಇದೆ ಎಂದು ಹೇಳಿದರು.
ಡಿಕೆಶಿ ಪುತ್ರಿ ಐಶ್ವರ್ಯ ಅವರು ಫೆ.7ರಂದು ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋವನ್ನು ಅವರು ಹಂಚಿಕೊಂಡಿದ್ದರು.
