ಬೆಂಗಳೂರು ಹವಾಮಾನ ಕ್ರಿಯಾಕೋಶದಡಿ “ಬ್ಲೂ ಗ್ರೀನ್” ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು 20ನೇ ಏಪ್ರಿಲ್ 2025 ರವರೆಗೆ ವಿಸ್ತರಿಸಲಾಗಿದೆ ಎಂದು ಹವಾಮಾನ ಕ್ರಿಯಾಕೋಶದ ಅಧ್ಯಕ್ಷರಾದ ಪ್ರೀತಿ ಗೆಹ್ಲೋಟ್ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹೆಚ್ಚಿನ ಹವಾಮಾನ ಬದಲಾವಣೆಯ ಸಂಬಂಧ ಅನೇಕ ಕೆಲಸಗಳು ನಡೆಯುತ್ತಿದ್ದು, ಅದರ ಹೊರತಾಗಿಯೂ “ಬ್ಲೂ ಗ್ರೀನ್” ಪ್ರಶಸ್ತಿಗಳಿಗೆ ನಿರೀಕ್ಷೆಗಿಂತ ಕಡಿಮೆ ಅರ್ಜಿಗಳು ಬಂದ ಕಾರಣ, ಬಿಬಿಎಂಪಿ ಹವಾಮಾನ ಕ್ರಿಯಾ ಕೋಶವು ಬ್ಲೂಗ್ರೀನ್ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಏಪ್ರಿಲ್ 20, 2025 ಕ್ಕೆ ಮುಂದೂಡಲಾಗಿದೆ.
ಬೆಂಗಳೂರಿನಲ್ಲಿ ಹವಾಮಾನ ಕ್ರಿಯೆಯ ಕುರಿತು ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳು, ಸಮುದಾಯಗಳು ಮತ್ತು ಸಂಸ್ಥೆಗಳಿಂದ ಹೆಚ್ಚಿನ ಭಾಗವಹಿಸುವಿಕೆಯನ್ನು ನಿರೀಕ್ಷಿಸಲಾಗಿದೆ.
ಬ್ಲೂಗ್ರೀನ್ ಪ್ರಶಸ್ತಿಗಳು ಸುಸ್ಥಿರತೆ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವಕ್ಕೆ ಅರ್ಥಪೂರ್ಣ ಕೊಡುಗೆಗಳನ್ನು ಗುರುತಿಸುತ್ತವೆ. 5ನೇ ಜೂನ್ 2025 ರಂದು ವಿಶ್ವ ಪರಿಸರ ದಿನದಂದು ಸನ್ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು ರವರಿಂದ ವಿಜೇತರನ್ನು ಗೌರವಿಸಲಾಗುವುದು.
ಪ್ರಮುಖ ವಿವರಗಳು:
• ಯಾರು ಅರ್ಜಿ ಸಲ್ಲಿಸಬಹುದು: ವ್ಯಕ್ತಿಗಳು, ಸಮುದಾಯಗಳು, ಸಂಸ್ಥೆಗಳು ಮತ್ತು ಹವಾಮಾನ ಕ್ರಿಯೆಗೆ ಕೊಡುಗೆ ನೀಡುವ ಮಧ್ಯವರ್ತಿಗಳು.
• ಈ ಲಿಂಕಿನ ಮೂಲಕ ಅರ್ಜಿ ಸಲ್ಲಿಸಿ: https://forms.gle/LEeKpUuWP1eU8qyF6
• ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 20ನೇ ಏಪ್ರಿಲ್ 2025
ಪ್ರಮುಖ ಅಂಶಗಳು:
• ಮೊದಲ ಸುತ್ತಿನಲ್ಲಿ ಅರ್ಜಿ ಸಲ್ಲಿಸಿದವರು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
• ತೀರ್ಪುಗಾರರ ಮೌಲ್ಯಮಾಪನದ ನಂತರ ಶಾರ್ಟ್ ಲಿಸ್ಟ್ ಮಾಡಿದ ಅರ್ಜಿದಾರರಿಗೆ ಇಮೇಲ್ ಮೂಲಕ ತಿಳಿಸಲಾಗುತ್ತದೆ.
• ಹವಾಮಾನ ಕ್ರಿಯಾ ಕೋಶದ ವೆಬ್ ಸೈಟ್, ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್ ಗುಂಪುಗಳ ಮೂಲಕ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇಮೇಲ್ ಮಾಡಿ: bbmpclimateactioncell@gmail.com