ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ(ಬಿಟಿಸಿ) ಆನ್ ಕೋರ್ಸ್, ಆಫ್ ಕೋರ್ಸ್ ರೇಸ್ ಹಾಗೂ ಬೆಟ್ಟಿಂಗ್ ಚಟುವಟಿಕೆಗಳಿಗೆ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ನಿಷೇಧ ಹೊರಡಿಸಿದೆ.
ಬಿಟಿಸಿಯಲ್ಲಿ ರೇಸಿಂಗ್ ಹಾಗೂ ಬೆಟ್ಟಿಂಗ್ ಚಟುವಟಿಕೆಗಳನ್ನು ನಿಷೇಧಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ರದ್ದುಗೊಳಿಸಿತ್ತು. ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರಿದ್ದ ವಿಭಾಗೀಯ ಪೀಠ ಏಕ ಸದಸ್ಯತ್ವ ಪೀಠದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ರಾಜ್ಯ ಸರ್ಕಾರದ ಅರ್ಜಿಯನ್ನು ಪರಿಗಣಿಸಿ ಆದೇಶ ನೀಡಿದೆ.
ಬಿಟಿಸಿಯಲ್ಲಿ ಪರವಾನಗಿ ನಿಯಂತ್ರಣಗಳು, ಅರ್ಜಿಯ ಸ್ಥಿತಿಗತಿಗಳು ಹಾಗೂ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸಲಾಗಿದೆ ಎಂದು ರಾಜ್ಯ ಸರ್ಕಾರ ಜೂನ್ 6ರಂದು ಹೊರಡಿಸಿದ ಆದೇಶದಲ್ಲಿ ದಾಖಲಿಸಿತ್ತು. ಸಿಸಿಬಿ ತನಿಖೆ ಕೂಡ ಬಾಕಿಯುಳಿದಿದ್ದು, ಸಕ್ಷಮ ತೆರಿಗೆ ಪ್ರಾಧಿಕಾರ ಕೂಡ ತೆರಿಗೆ ವಂಚನೆ ಸೇರಿದಂತೆ ಹಲವು ಅಕ್ರಮಗಳು ಬಾಕಿಯುಳಿದಿವೆ ಎಂದು ತಿಳಿಸಿರುವುದನ್ನು ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಳಪೆ ಫಲಿತಾಂಶಕ್ಕೆ ಸಿ ಎಂ ಸಿಟ್ಟಾದರೆ ಸಾಲದು, ಶಿಕ್ಷಣ ಇಲಾಖೆಗೆ ಬಿಸಿ ಮುಟ್ಟಿಸಬೇಕು
ಕರ್ನಾಟಕ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬಿಟಿಸಿ, ಕರ್ನಾಟಕ ರೇಸ್ ಕುದುರೆಗಳ ಮಾಲೀಕರ ಸಂಘ, ಕರ್ನಾಟಕ ತರಬೇತಿದಾರರ ಸಂಘ, ಪಂಟರ್‍ಗಳು ಹಾಗೂ ಜಾಕಿಗಳ ಸಂಘ ಪರವಾನಗಿ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು.
ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠದಿಂದ, 2024ರ ಮಾರ್ಚ್ ತಿಂಗಳಲ್ಲಿ ಆನ್ ಕೋರ್ಸ್ ಮತ್ತು ಆಫ್ ಕೋರ್ಸ್ ಕುದುರೆ ಪಂದ್ಯ ಮತ್ತು ಬೆಟ್ಟಿಂಗ್ ಚಟುವಟಿಕೆಗಳನ್ನು ನಡೆಸಲು ಸರ್ಕಾರ ನೀಡಿದ್ದ ಪರವಾನಗಿಯ ಷರತ್ತಿನಂತೆ ಕುದುರೆ ರೇಸ್ ಆಯೋಜಿಸಬಹುದು ಎಂದು ಮಧ್ಯಂತರ ಆದೇಶ ನೀಡಿದ್ದರು. ಇದರ ಬೆನ್ನಲ್ಲಿಯೇ ಈಗ ಕುದುರೆ ರೇಸ್ ಆಯೋಜನೆಗೆ ತಡೆಯೊಡ್ಡಲಾಗಿದೆ.
