ದೀಪಾವಳಿ ಹಬ್ಬದ ಹಿನ್ನೆಲೆ, ಮಂಗಳವಾರದ ರಜಾ ದಿನವೂ ಪ್ರವಾಸಿಗರಿಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ತೆರೆದಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ ಪ್ರತಿ ಮಂಗಳವಾರ ಬನ್ನೇರುಘಟ್ಟ ಜೈವಿಕ ಉದ್ಯಾನವನ ರಜೆ ಇರುತ್ತದೆ. ಇದೀಗ ದೀಪಾವಳಿ ಹಬ್ಬ ರುವ ಹಿನ್ನೆಲೆ, ಉದ್ಯಾನವನಕ್ಕೆ ಹೆಚ್ಚಿನ ಜನ ಬರುವ ನೀರೀಕ್ಷೆ ಇದೆ. ಹಾಗಾಗಿ, ಮಂಗಳವಾರವೂ ಬನ್ನೇರುಘಟ್ಟ ಉದ್ಯಾನವನ ತೆರೆದಿರಲಿದೆ. ಬುಧವಾರ ಉದ್ಯಾನವನ ರಜೆ ಮಾಡುಲು ಆಡಳಿತ ಮಂಡಳಿ ತಿರ್ಮಾನ ಮಾಡಿದೆ.
ಉದ್ಯಾನದ ಎಲ್ಲ ಘಟಕಗಳಾದ ಮೃಗಾಲಯ, ಸಫಾರಿ ಮತ್ತು ಬಟರ್‌ಫ್ಲೈ ಪಾರ್ಕ್‌ಗಳು ಸಾರ್ವಜನಿಕರಿಗೆ ತೆರೆದಿರುತ್ತವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬ್ರೇಕ್ ಹಾಕಲು ಹೋಗಿ ಎಕ್ಸಲೇಟರ್ ಒತ್ತಿದ ಕಾರು ಚಾಲಕ; ಸರಣಿ ಅಪಘಾತ
ಕಳೆದ ಬಾರಿ ವಿಜಯದಶಮಿ ಅಕ್ಟೋಬರ್ 24ರಂದು ಬಂದಿತ್ತು. ಈ ವೇಳೆ, ಮಂಗಳವಾರವೂ ರಜೆ ಮಾಡದೇ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗಿತ್ತು.