ಬೆಂಗಳೂರು ನಗರದ ರಾಜ್‌ಕುಮಾರ್ ರಸ್ತೆಯ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಯುವತಿಯನ್ನು ಪ್ರಿಯಾ ಎಂದು ಗುರುತಿಸಲಾಗಿದೆ. ಯುವತಿ ಶೋರೂಮ್‌ನ ಸಿಬ್ಬಂದಿ ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳವು ಯುವತಿಯ ಮೃತದೇಹವನ್ನು ಹೊರತೆಗೆದಿದೆ.
"ಸಂಚಾರ ಸಲಹೆ"
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) November 19, 2024
ರಾಜ್ ಕುಮಾರ್ ರಸ್ತೆ, ನವರಂಗ್ ಬಾರ್ ಜಂಕ್ಷನ್ ಬಳಿ ಎಲೆಕ್ಟ್ರಿಕ್ ವೆಹಿಕಲ್ ಶೋರೂಮ್ ಗೆ ಬೆಂಕಿ ಹತ್ತಿದ್ದು, ಮೆಜೆಸ್ಟಿಕ್ ಯಿಂದ ಹೊರಹೋಗುವ ಮತ್ತು ಒಳಬರುವ ವಾಹನ ಸಂಚಾರವು ನಿದಾನಗತಿಯಲ್ಲಿರುತ್ತದೆ, ದಯಮಾಡಿ ಸಹಕರಿಸಿ. pic.twitter.com/F56enNcNnf
ಇನ್ನು “ರಾಜ್ ಕುಮಾರ್ ರಸ್ತೆ, ನವರಂಗ್ ಬಾರ್ ಜಂಕ್ಷನ್ ಬಳಿ ಎಲೆಕ್ಟ್ರಿಕ್ ವೆಹಿಕಲ್ ಶೋರೂಮ್‌ಗೆ ಬೆಂಕಿ ಹತ್ತಿದ್ದು, ಮೆಜೆಸ್ಟಿಕ್‌ನಿಂದ ಹೊರಹೋಗುವ ಮತ್ತು ಒಳಬರುವ ವಾಹನ ಸಂಚಾರವು ನಿಧಾನಗತಿಯಲ್ಲಿರುತ್ತದೆ, ದಯಮಾಡಿ ಸಹಕರಿಸಿ” ಎಂದು ಬೆಂಗಳೂರು ನಗರ ಪೊಲೀಸರು ಸಂಚಾರ ಸಲಹೆ ನೀಡಿದ್ದಾರೆ.
ಈ ಭೀಕರ ಅಗ್ನಿ ಅವಘಡದಲ್ಲಿ ಬರೋಬ್ಬರಿ 45 ಇವಿ ವಾಹನಗಳು ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.
