ಜರ್ಮನ್ ಟಿಕ್‌ಟಾಕರ್ ನೋಯೆಲ್ ರಾಬಿನ್ಸನ್ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ವಿಧಾನಸೌಧದ ಬೀದಿಯಲ್ಲಿ ಆಟೋ ಚಾಲಕನ ಜೊತೆ ನೋಯೆಲ್ ಡ್ಯಾನ್ಸ್ ಮಾಡಿದ್ದು ಸದ್ಯ ವಿಡಿಯೋ ವೈರಲ್ ಆಗಿದೆ.
ಇತ್ತೀಚೆಗೆ ತಮಿಳುನಾಡಿನ ಸಾಂಪ್ರದಾಯಿಕ ‘ಕುತ್ತು ಡ್ಯಾನ್ಸ್’ ಮಾಡಿದ್ದ ನೋಯೆಲ್ ವಿಡಿಯೋ ವೈರಲ್ ಆಗಿದ್ದು, 42 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಭಾರತಕ್ಕೆ ಆಗಮಿಸಿದ ನೋಯೆಲ್ ಮುಂಬೈ, ದೆಹಲಿ ಮತ್ತು ಚೆನ್ನೈ ನಗರಗಳಲ್ಲಿ ಪ್ರವಾಸ ಮಾಡಿದ ಬಳಿಕ ಸದ್ಯ ಬೆಂಗಳೂರಿನಲ್ಲಿದ್ದಾರೆ.
ಇದನ್ನು ಓದಿದ್ದೀರಾ? ಕೆನಡಾ | ಟೇಕಾಫ್ ಆಗುತ್ತಿದ್ದಂತೆಯೇ 389 ಪ್ರಯಾಣಿಕರಿದ್ದ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ; ವಿಡಿಯೋ ವೈರಲ್
ನೋಯೆಲ್‌ರ ಇತ್ತೀಚಿನ ಪೋಸ್ಟ್‌ನಲ್ಲಿ ನಗರದ ವಿಧಾನಸೌಧದ ಬಳಿ ಆಟೋ ಡ್ರೈವರ್ ಜೊತೆ ಡ್ಯಾನ್ಸ್ ಮಾಡುವುದು ಕಂಡುಬಂದಿದೆ. ನೋಯೆಲ್ ಆಟೋ ಚಾಲಕನ ಬಳಿ ಒಪ್ಪಿಗೆಯನ್ನು ಪಡೆಯದೆಯೇ ಆಟೋ ಹತ್ತಲು ಹೋಗುವಂತೆ, ಆ ಸಂದರ್ಭದಲ್ಲಿ ಆಟೋ ಚಾಲಕ ತಳ್ಳುವಂತೆ ವಿಡಿಯೋವನ್ನು ಮಾಡಲಾಗಿದೆ.
View this post on Instagram
ಆಟೋ ಚಾಲಕನ ಮುಂದೆ ನೋಯೆಲ್ ನೃತ್ಯ ಮಾಡುತ್ತಿದ್ದಂತೆ ಚಾಲಕ ಕೂಡ ಕುಣಿದಿದ್ದಾರೆ. ಎಂದಿನಂತೆ ಡ್ಯಾನ್ಸ್ ಮಾಡುವ ಮುನ್ನ ತನ್ನ ತಲೆಗೂದಲು ಮುಚ್ಚಿರುವ ಹುಡ್ಡಿಯನ್ನು ತೆಗೆದು ನೋಯೆಲ್ ಕುಣಿದಿರುವುದು ಕಂಡುಬಂದಿದೆ.
ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದ್ದು, 8 ಮಿಲಿಯನ್‌ಗೂ ಅಧಿಕ ವೀವ್ಸ್ ಪಡೆದುಕೊಂಡಿದೆ. ‘ಕುರ್ಚಿ ಮಡತಪೆಟ್ಟಿ’ ತೆಲುಗು ಹಾಡಿಗೆ ನೋಯೆಲ್ ಕುಣಿದಿದ್ದು, ಆದರೆ ಹಲವಾರು ಬೆಂಗಳೂರಿಗರು, ಕನ್ನಡಿಗರು “ಕನ್ನಡ ಹಾಡಿಗೆ ಕುಣಿದಿದ್ದರೆ ಇನ್ನೂ ಚೆನ್ನಾಗಿತ್ತು” ಎಂದು ಅಭಿಪ್ರಾಯಿಸಿದ್ದಾರೆ.