ಸಮಾನತೆಗಾಗಿ ಹೆಣ್ಣುಮಕ್ಕಳು ಹೋರಾಟದ ಹಾದಿ ಹಿಡಿಯಬೇಕು: ಎಂ.ಎನ್ ಶ್ರೀರಾಮ್

Date:

Advertisements

“ನಮ್ಮ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಘೋಷಿಸಲಾಗಿದೆ. ಆದರೆ, ಸಮಾಜದಲ್ಲಿ ಇನ್ನೂ ಸಮಾನತೆ ದೊರೆತಿಲ್ಲ. ಸಮಾನತೆ ಪಡೆಯಲು ಹೆಣ್ಣು ಮಕ್ಕಳು ಹೋರಾಟದ ಹಾದಿ ಹಿಡಿಯಬೇಕಾಗಿದೆ” ಎಂದು ಎಸ್‌ಯುಸಿಐ ಪಕ್ಷದ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಎಂ.ಎನ್ ಶ್ರೀರಾಮ್ ಹೇಳಿದರು.

ಶುಕ್ರವಾರ ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್)ಯ ಜಿಲ್ಲಾ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಎಲ್ಲರೂ ಸಮಾನರಾಗಿರಲು ಸಾಧ್ಯವಿಲ್ಲ ಎಂಬ ತಪ್ಪಾದ ವ್ಯಾಖ್ಯಾನ ಪ್ರಚಲಿತವಾಗಿದೆ. ಅದು ಸುಳ್ಳು. ಸ್ವಾರಸ್ಯಕರವಾದ ಪೌರಾಣಿಕ ಕಥೆಗಳ ಮೂಲಕ ಹುಟ್ಟಿನಿಂದ ‘ಮಹಾನತೆ’ ಸಾಧಿಸಬಹುದು ಎಂದು ಪ್ರಚಾರ ಪಡಿಸಲಾಗುತ್ತಿದೆ. ಆದರೆ, ‘ಮಹಾನತೆ’ ಸಾಧಿಸಲು ಸತತ ಪ್ರಯತ್ನ ಪರಿಶ್ರಮ ಹಾಗೂ ಹೋರಾಟದಿಂದಷ್ಟೇ ಸಾಧ್ಯ ಎಂದು ಮಹಾನ್ ಮಹಿಳಾ ಸಾಧಕೀಯರಾದ ಮೇರಿ ಕ್ಯೂರಿ, ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ತೋರಿಸಿಕೊಟ್ಟಿದ್ದಾರೆ” ಎಂದರು.

“ಕಾನೂನು ರಕ್ಷಕರೇ ಇಂದು ಅನ್ಯಾಯಗಳನ್ನು ಎಸಗುತ್ತಿದ್ದಾರೆ. ಕಥುವಾದಲ್ಲಿ ನಡೆದ ಅತ್ಯಾಚಾರ ಘಟನೆಗಳಲ್ಲಿ ದೂರನ್ನು ಸಹ ಪೊಲೀಸರು ಸ್ವೀಕರಿಸಲಿಲ್ಲ. ಹೋರಾಟದಿಂದ ಅಸಾಧ್ಯವಾದದನ್ನು ಸಾಧಿಸಬಹುದು. ಈ ಸತಿಸಹಗಮನ ಪದ್ದತಿಯಂತಹ ಹಲವಾರು ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿದ್ದರಿಂದಲೇ ಸಾಕಷ್ಟು ಪರಿಹಾರ ದೊರೆತಿದೆ” ಎಂದರು.

Advertisements

ಎಐಎಂಎಸ್‌ಎಸ್ ರಾಜ್ಯ ಕಾರ್ಯದರ್ಶಿ ಶೋಭಾ ಮಾತನಾಡಿ, “ಇಂದಿನ ಸಮಾಜದಲ್ಲೂ ಮಹಿಳಾ ಮೇಲಾಧಿಕಾರಿಗಳನ್ನು ಕೆಳಗಿನ ಪುರುಷರು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಾರದಂತಹ ಪರಿಸ್ಥಿತಿ ಇದೆ. ಬೆಂಗಳೂರಿನ ಹಲವಾರು ಘಟನೆಗಳಲ್ಲಿ ಹೆಣ್ಣು ಮಕ್ಕಳು ಪುರುಷರ ಮಾತುಗಳಿಗೆ ಒಪ್ಪದಿದ್ದಾಗ ಅವರನ್ನು ದೌರ್ಜನ್ಯದ ಮೂಲಕ ಬಗ್ಗಿಸಲಾಗುತ್ತಿದೆ. ಪುರುಷ ಪ್ರಧಾನ ಧೋರಣೆಯ ವಿರುದ್ಧ ಹೋರಾಡುವುದರ ಜತೆಗೆ ಹೆಣ್ಣು ಮಕ್ಕಳು ಹಿಂದಿನ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಹೋರಾಡಬೇಕು. ಇದರ ಅಗತ್ಯವಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಎಡ ಪ್ರಜಾಸತ್ತಾತ್ಮಕ ಪರ್ಯಾಯ ರಾಜಕೀಯ ರಂಗ ರೂಪಿಸಲು ಸಿಪಿಐ(ಎಂ) ತೀರ್ಮಾನ

ಈ ಸಮ್ಮೇಳನದಲ್ಲಿ ವಿವಿಧ ಬಡಾವಣೆಗಳಿಂದ ಗೃಹಿಣಿಯರು, ಉದ್ಯೋಗಸ್ಥ ಹೆಣ್ಣುಮಕ್ಕಳು, ನಾನಾ ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ನಾನಾ ಸ್ತರದ ಮಹಿಳೆಯರು ಪ್ರತಿನಿಧಿಗಳಾಗಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಿ!, ಮರ್ಯಾದಾ ಹತ್ಯೆ, ಬಾಲ್ಯ ವಿವಾಹ, ಸ್ತ್ರೀ ಭ್ರೂಣಹತ್ಯೆ ನಿಲ್ಲಿಸಿ!!, ಮಹಿಳೆಯರಿಗೆ ಶಿಕ್ಷಣ-ಆರೋಗ್ಯ-ಉದ್ಯೋಗ ಭದ್ರತೆ ಖಾತ್ರಿಪಡಿಸಿ!!! ಎಂಬ ಮೂರು ಘೋಷವಾಕ್ಯಗಳೊಂದಿಗೆ ಈ ಸಮ್ಮೇಳನ ನಡೆಯಿತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ಚಳ್ಳಕೆರೆ ನಗರದಲ್ಲಿ ರಸ್ತೆ ಗುಂಡಿಗಳ ಪೂಜೆ; ಕರ್ನಾಟಕ ರಾಷ್ಟ್ರ ಸಮಿತಿಯಿಂದ ವಿನೂತನ ಪ್ರತಿಭಟನೆ

ಚಳ್ಳಕೆರೆ ನಗರದ ಬಹುತೇಕ ವಾರ್ಡುಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ, ಅಲ್ಲದೆ ತಾಲೂಕಿನ...

ವಿಧಾನಸಭೆಯ ಮುಂಗಾರು ಅಧಿವೇಶನ ಮುಕ್ತಾಯ: ಒಟ್ಟು 39 ವಿಧೇಯಕ ಅಂಗೀಕಾರ

ಕಳೆದ ಆಗಸ್ಟ್ 11ರಿಂದ ಆರಂಭಗೊಂಡಿದ್ದ 16ನೇ ವಿಧಾನಸಭೆಯ ಮುಂಗಾರು ಅಧಿವೇಶನವು ಇಂದು(ಆ.22)...

ಬಿಎಂಟಿಸಿ ಬಸ್‌ ಚಾಲಕರಿಗೆ ಹೊಸ ನಿಯಮ: 2 ಬಾರಿ ಅಪಘಾತವೆಸಗಿದರೆ ಕೆಲಸದಿಂದ ವಜಾ

ಬೆಂಗಳೂರು ಮಹಾನಗರ ಸಾರಿಗೆಯ ಬಸ್​ ಚಾಲಕರು ಎರಡು ಸಲ ಅಪಘಾತವೆಸಗಿ, ತಪ್ಪು...

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

Download Eedina App Android / iOS

X