ಕಳೆದ ಎರಡು ತಿಂಗಳಿನಿಂದ ₹200ರ ಗಡಿಯಲ್ಲಿದ್ದ ಟೊಮ್ಯಾಟೋ ದರ ಇದೀಗ ಏಕಾಏಕಿ ಕುಸಿತ ಕಂಡಿದ್ದು, ಪ್ರತಿ ಕೆಜಿಗೆ ₹30-40 ಆಗಿದೆ. ಇದರಿಂದ ಗ್ರಾಹಕರ ಮೊಗದಲ್ಲಿ ಸಂತಸ ಮೂಡಿದೆ. ಆದರೆ, ಟೊಮ್ಯಾಟೋ ಬೆಳೆಗಾರರಿಗೆ ತೀವ್ರ ನಿರಾಸೆ ಉಂಟಾಗಿದೆ.
ಸತತ ಒಂದು ವಾರದಿಂದ ಟೊಮ್ಯಾಟೋ ದರ ಕುಸಿತ ಕಾಣುತ್ತಿದೆ. ಕಳೆದ ಒಂದರೆಡು ದಿನದಲ್ಲಿ ಭಾರೀ ಕುಸಿತ ಕಂಡಿದೆ. ವಾರದ ಹಿಂದೆ ₹1700, ₹2000 ಅಸುಪಾಸಿನಲ್ಲಿದ್ದ 15 ಕೆ.ಜಿ. ಟೊಮ್ಯಾಟೋ ದರ ಇದೀಗ ₹700ಕ್ಕೆ ಕುಸಿತ ಕಂಡಿದೆ. ಟೊಮ್ಯಾಟೋ ದರ ಇನ್ನಷ್ಟು ಕುಸಿಯುವ ಆತಂಕ ಬೆಳೆಗಾರರಲ್ಲಿದೆ.
ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಟೊಮ್ಯಾಟೋ ದರ ಭಾರಿ ಇಳಿಕೆಯಾಗಿದೆ. 15 ಕೆಜಿ ಬಾಕ್ಸ್ ₹2,000 – ₹2,500 ಕಂಡಿದ್ದ ಟೊಮ್ಯಾಟೋ ಬೆಲೆ ಈಗ ₹450 ಇಳಿದಿದೆ. ಕಳೆದ ನಾಲ್ಕೈದು ದಿನದ ಹಿಂದೆ ಟೊಮ್ಯಾಟೊ ದರ ₹150 ರಿಂದ ₹169 ಇತ್ತು. ಒಂದು ಕ್ರೇಟ್‌ಗೆ ₹2,000 ಇತ್ತು. ಈಗ ಒಂದು ಕ್ರೇಟ್‌ಗೆ ₹1,500 ಆಗಿದೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಅಗ್ನಿ ಅವಘಡ | ಮೂವರನ್ನು ವಶಕ್ಕೆ ಪಡೆದ ಪೊಲೀಸರು
ಜೂನ್ ಅಂತ್ಯ, ಜುಲೈ ತಿಂಗಳ ಆರಂಭದಲ್ಲಿ ಟೊಮ್ಯಾಟೋ ಬೆಲೆ ಗಗನಕ್ಕೇರಿತ್ತು. ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಟೊಮ್ಯಾಟೋ ಬೆಳೆದ ರೈತರಿಗೆ ಹೆಚ್ಚಿನ ಲಾಭ ಬಂದಿತ್ತು. ಇದರಿಂದ ಟೊಮ್ಯಾಟೋ ಬೆಳೆದ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿತ್ತು.
ಅಕಾಲಿಕ ಮಳೆ ಕಾರಣ ಹೆಚ್ಚಿನ ಟೊಮ್ಯಾಟೋ ನಾಶವಾಗಿತ್ತು. ಹಾಗಾಗಿ, ಈ ಬಾರಿ ಟೊಮ್ಯಾಟೋ ಇಳುವರಿ ಕಡಿಮೆಯಾಗಿದೆ. ಈ ಕಾರಣದಿಂದ ರೈತರಿಂದ ಮಾರುಕಟ್ಟೆಗೆ ಟೊಮ್ಯಾಟೋ ಸರಬರಾಜು ಆಗಿರಲಿಲ್ಲ. ಈ ಹಿನ್ನೆಲೆ ದರ ಹೆಚ್ಚಳವಾಗಿತ್ತು.