ನಿರ್ಜನ ಪ್ರದೇಶದಲ್ಲಿ ಮಗುವಿನ ಅಳುವ ಶಬ್ಧ ಕೇಳಬಂದಿದ್ದು, ಶಬ್ದದ ದಿಕ್ಕಿನೆಡೆಗೆ ತೆರಳಿದ ಸ್ಥಳೀಯರು ಅಕ್ಷಶಃ ಆಘಾತಕ್ಕೊಳದಾಗ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನವಜಾತ ಶಿಶುವೊಂದನ್ನು ಜೀವಂತವಾಗಿ ಅರ್ಧ ಸಮಾಧಿ ಮಾಡಲಾಗಿರುವುದು ನಗರ ಕತ್ರಿಗುಪ್ಪೆ ಬಳಿಯ ದಿನ್ನೆ ಗ್ರಾಮದಲ್ಲಿ ನಡೆದಿದೆ.
ಹೇಯ ಮನಸ್ಸಿನ ಆರೋಪಿಗಳು ಸೋಮವಾರ ರಾತ್ರಿ, ಶಿಶುವನ್ನು ಜೀವಂತವಾಗಿಯೇ ಅರ್ಧ ಸಮಾಧಿ ಮಾಡಿ ಹೋಗಿದ್ದಾರೆ. ಮಗು ಅಳುತ್ತಿದ್ದ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ತೆರಳಿದಾಗ, ಮಗುವಿನ ಅರ್ಧ ದೇಹವನ್ನು ಮಣ್ಣಿನಲ್ಲಿ ಹೂತಿಟ್ಟಿರುವುದು ಕಂಡುಬಂದಿದೆ.
ಕೂಡಲೇ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದು, ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಶುವಿನ ದೇಹದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾಗಿ ವರದಿಯಾಗಿದೆ.
ಪೊಲೀಸರು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದು, ವಶಕ್ಕೆ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಈ ನಡುವೆ ಮಗುವನ್ನು ವಶಕ್ಕೆ ತೆಗೆದುಕೊಳ್ಳುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಪೊಲೀಸರು ಸೂಚನೆ ನೀಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಆರೋಪಿಗಳು ಸ್ಥಳೀಯರಲ್ಲ ಎಂಬಂತೆ ಕಾಣುತ್ತದೆ. ಸಿಕ್ಕಿಬೀಳುವ ಆತಂಕದಲ್ಲಿ ಮಗುವನ್ನು ಅವಸರದಲ್ಲಿ ಅರ್ಧಭಾಗದಷ್ಟು ಹೂತುಹಾಕಿ ಪರಾರಿಯಾಗಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.