ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ಯುವಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು, ನಾನಾ ಕಂಪನಿಗಳ ಸಂದರ್ಶನವನ್ನು ಒಂದೇ ಸ್ಥಳದಲ್ಲಿ ಎದುರಿಸಲು ಅವಕಾಶ ಮಾಡಿಕೊಡಲು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ‘ಪ್ರೆಸಿಡೆನ್ಸ್ ಫೌಂಡೇಷನ್’ ಮುಂದಾಗಿದೆ. ಫೆಬ್ರವರಿ 15ರಂದು ಬೆಂಗಳೂರಿನಲ್ಲಿ ‘ಬೃಹತ್ ಉದ್ಯೋಗ ಮೇಳ’ವನ್ನು ಆಯೋಜಿಸಿದೆ.
ಉದ್ಯೋಗ ಮೇಳವು ಬೆಂಗಳೂರಿನ ಬೆನ್ಸನ್ ಟೌನ್‌ನ ಖುದ್ದೂಸ್ ಸಾಹಿಬ್ ಈದ್ಗಾ ಮೈದಾನದಲ್ಲಿ ಫೆಬ್ರವರಿ 15ರ ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ನಡೆಯಲಿದೆ ಎಂದು ಪ್ರೆಸಿಡೆನ್ಸಿ ಫೌಡೇಷನ್ ತಿಳಿಸಿದೆ.
ಉದ್ಯೋಗ ಮೇಳಕ್ಕೆ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಉದ್ಯೋಗ ಮತ್ತು ತರಬೇತಿ ಇಲಾಖೆ, ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ, ಕರ್ನಾಟಕ ಅಲ್ಪಸಂಖ್ಯಾತರ ಆಯೋಗಗಳು ಸಹಯೋಗ ನೀಡಿವೆ. ಹೀಗಾಗಿ, ಅನೇಕ ಕಂಪನಿಗಳು, ಸಂಸ್ಥೆಗಳು ಹಾಗೂ ನಾನಾ ಉದ್ಯೋಗದಾರರು ಸೇರಿದಂತೆ 200ಕ್ಕೂ ಹೆಚ್ಚು ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ.

ಉದ್ಯೋಗ ಮೇಳದಲ್ಲಿ ಯಾವುದೇ ಜಾತಿ, ಧರ್ಮದವರು ಭಾವಹಿಸಬಹುದು. ಅಭ್ಯರ್ಥಿಗಳು 18ರಿಂದ 35 ವರ್ಷ ವಯೋಮಾನದವರಾಗಿರಬೇಕು. ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಸಂದರ್ಶನ, ಇಂಟರ್ನ್‌ಶಿಪ್, ಅಪ್ರೆಂಟಿಸ್ ಹಾಗೂ ನೇರ ನೇಮಕಾತಿಯ ಮೂಲಕ ಉದ್ಯೋಗಗಳನ್ನು ಒದಗಿಸಲಾಗುತ್ತದೆ ಎಂದು ಫೌಂಡೇಷನ್ ಮಾಹಿತಿ ನೀಡಿದೆ.