ನ್ಯಾಯಾಂಗವೂ ಬ್ರಾಹ್ಮಣ, ಕ್ಷತ್ರಿಯರ ಹಿಡಿತದಲ್ಲಿದೆ: ಹಿರಿಯ ವಕೀಲ ಬಾಲನ್

Date:

Advertisements

“ಯಾವ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆಯೋ, ಬಡವರ ಹಸಿವನ್ನ ನೀಗಿಸುವ ಕೆಲಸ ಮಾಡುತ್ತದೆಯೋ ಅಂತಹ ಸರ್ಕಾರವನ್ನ ಉರುಳಿಸಲು ಷಡ್ಯಂತ್ರಗಳು ನಡೆಯುತ್ತವೆ. ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪಾತ್ರ ಏನು ಇಲ್ಲ ಎಂಬುದು ದೂರುದಾರರಿಗೂ ತಿಳಿದಿದೆ. ಆದರೂ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂಬ ಹುನ್ನಾರವಿದೆ” ಎಂದು ನಿವೃತ್ತ ನ್ಯಾಯಧೀಶ ಹೆಚ್.ಎ ಹಾವಿನ್ ಹೇಳಿದ್ದಾರೆ.

ಕರ್ನಾಟಕ ಜಾಗೃತ ವಕೀಲರ ವೇದಿಕೆ ನೇತೃತ್ವದಲ್ಲಿ “ರಾಜಕೀಯ ಪಿತೂರಿಗಳು ಮತ್ತು ನ್ಯಾಯಾಲಯದ ಇತ್ತೀಚಿನ ಆದೇಶಗಳು” ಕುರಿತು ವಕೀಲರ ರಾಜ್ಯ ಮಟ್ಟದ ಚಿಂತನಾ ಸಮಾವೇಶವನ್ನ ಗುರುವಾರ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಕಾಗಿತ್ತು. ಇದೇ ವೇಳೆ ‘ಮುಡಾ ಪ್ರಕರಣ: ಕೋರ್ಟ್‌ಗಳ ಆದೇಶ – ಸತ್ಯಾಸತ್ಯತೆ’ ಪುಸ್ತಕವನ್ನು ಬಿಡುಗಡೆ ಮಾಡಿ, ಅವರು ಮಾತನಾಡಿದರು.

“ಶ್ರೀಮಂತರು ಮತ್ತು ಬಡವರ ಮಟ್ಟ ಸುಧಾರಿಸುತ್ತದೆ. ಶಿಕ್ಷಣ ವ್ಯವಸ್ಥೆ ಸುಧಾರಿಸುತ್ತಿದೆ. ಹೀಗಾಗಿ, ಇದನ್ನ ಸಹಿಸದವರು ಈ ರೀತಿಯ ಷಡ್ಯಂತ್ರಗಳನ್ನು ಹೆಣೆಯುತ್ತಿದ್ದಾರೆ. ಜಾತ್ಯೀಯತೆ, ಬಡತನ ನಿರ್ಮೂಲನೆಯ ಸಮಯದಲ್ಲಿ ಇಂತಹ ಸಮಸ್ಯೆ ಬಂದೆ ಬರುತ್ತವೆ. ಇದಕ್ಕೆ ನಾವು ಪರಿಹಾರ ಕಂಡುಕೊಳ್ಳಬೇಕು” ಎಂದು ಹೇಳಿದ್ದಾರೆ.

Advertisements

“ಬಿಜೆಪಿಯವರಿಗೆ ಸದ್ಯ ಬೇರೆ ಟಾರ್ಗೆಟ್ ಇಲ್ಲ. ಜನರು ಬಿಜೆಪಿಯವರನ್ನ ಸಂಪೂರ್ಣವಾಗಿ ತಿರಸ್ಕಾರ ಮಾಡಿದ್ದಾರೆ. ಹಿಂಬಾಗಿಲಿನಿಂದ ಬಂದು ರಾಜಕೀಯ ಮಾಡುತ್ತಿರುವ ಅವರು ಇನ್ನು ಕೂಡ ರಾಜಕೀಯ ಮಾಡುತ್ತಿದ್ದಾರೆ. ನಾವು ಮನುವಾದಿಗಳ ಜತೆಗೆ ಹೋರಾಟ ಮಾಡಬೇಕಿದೆ. ಅವಿರತ ಹೋರಾಟದಿಂದ ಜೀವನ ಮಟ್ಟ ಸುಧಾರಿಸಬೇಕಿದೆ. ಕರ್ನಾಟಕದಲ್ಲಿ ಈಗ ಸಿದ್ಧರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಂಮತ್ರಿಯಾಗಿ ಅಧಿಕಾರ ಹಿಡಿದಿದ್ದಾರೆ. ಅವರು ಜನಪರ ಯೋಜನೆಗಳನ್ನು ನೀಡುತ್ತಿದ್ದಾರೆ. ಇದನ್ನು ಬಿಜೆಪಿಗೆ ಸಹಿಸುವುದಕ್ಕೆ ಆಗುತ್ತಿಲ್ಲ. ಹೀಗಾಗಿ, ಮುಡಾ ಪ್ರಕರಣ ಹಿಡಿದುಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.

ನಿವೃತ್ತ ನ್ಯಾಯಾಧೀಶ ವೆಂಕಟೇಶ್ ವೊರಸೆ ಮಾತನಾಡಿ, “ಈ ಎಲ್ಲ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇ ಇಲ್ಲ. ತೀರ್ಪೀನಲ್ಲಿಯೂ ಕೂಡ ಸಿದ್ಧರಾಮಯ್ಯ ಅವರು ಪ್ರಭಾವ ಬೀರಿರುವ ಬಗ್ಗೆ ಹೇಳಿಲ್ಲ. ಆದರೆ, ಬಾಹ್ಯ ಪ್ರಭಾವ ಬೀರಿರಬಹುದು ಎಂಬ ಪದ ಬಳಕೆ ಮಾಡಿದ್ದಾರೆ. ಅಪೀಲು ಮಾಡಿದರೇ ಈ ಪ್ರಕರಣದಲ್ಲಿ ನ್ಯಾಯ ಸಿಗಬಹುದು ಎನ್ನುವ ಅಭಿಪ್ರಾಯ ಇದೆ. ನಮಗೆಲ್ಲರಿಗೂ ಸಂವಿಧಾನ ಮುಖ್ಯ. ಸಂವಿಧಾನದಲ್ಲಿನ ತತ್ವಗಳನ್ನು ಫಾಲೋ ಮಾಡಬೇಕು. ರಾಮಾಯಣ-ಮಹಾಭಾರತ ಎಲ್ಲವೂ ಕಥೆಗಳು. ನನ್ನ ಇಷ್ಟು ವರ್ಷದ ಕೆಲಸದ ಅವಧಿಯಲ್ಲಿ ಈ ರೀತಿಯ ತೀರ್ಪನ್ನು ಎಲ್ಲಿಯೂ ನೋಡಿಲ್ಲ. ನಾವು ಸಂವಿಧಾನ ನೋಡಬೇಕು. ಈ ಪ್ರಕರಣ ನ್ಯಾಯಾಲಯದಲ್ಲಿ ನಿಲ್ಲವ ಪ್ರಕರಣವೇ ಅಲ್ಲ. ಹೈಕೋರ್ಟ್‌ನ ತೀರ್ಪು ಮೇಲ್ಮನವಿಗೆ ಅರ್ಹವಾಗಿದೆ” ಎಂದಿದ್ದಾರೆ.

“ನನ್ನ ಕಳೆದ 10 ವರ್ಷದ ಅನುಭವದಲ್ಲಿ ಬಿಜೆಪಿಯವರು ತಮ್ಮ ಸ್ವಂತ ಶಕ್ತಿಯ ಮೇಲೆ ಸರ್ಕಾರ ಮಾಡೇ ಇಲ್ಲ. ಡಿಕೆಶಿ ಸಂಘಟನೆ ಮಾಡಿಕೊಳ್ಳುವುದರಲ್ಲಿ ಮುಂದೆ ಇದ್ದಾರೆ. ಈ ಸರ್ಕಾರ ಬಂದ ಮೇಲೆ ಜನರಿಗೆ ಹೊಟ್ಟೆ ತುಂಬಾ ಊಟ ಸಿಗತಾ ಇದೆ. ಇನ್ನು ದೂರಾದಾರ ಅಬ್ರಾಹಿಂಗೆ ಸುಪ್ರೀಂ ಕೋರ್ಟ್‌ನಲ್ಲಿ ದಂಡ ಬಿದ್ದಿದೆ. ಅರವಿಂದ ಕೇಜ್ರಿವಾಲ್ ಅವರು ಕೂಡ ಮಾಸ್ ಲೀಡರ್ ಅವರನ್ನ ಅಬಕಾರಿ ಹಗರಣದಲ್ಲಿ ಜೈಲು ಪಾಲು ಮಾಡಿದ್ದರು. ಎಫ್ ಐ ಅರ್ ನಲ್ಲಿ ಕೇಜ್ರೀವಾಲ್ ಅವರ ಹೆಸರು ಇಲ್ಲದೇ ಇದ್ದರೂ ಕೂಡ ಅವರನ್ನ ಜೈಲಿನಲ್ಲಿಡುತ್ತಾರೆ. ಇದು ಬಿಜೆಪೇತರ ಸರ್ಕಾರ ಇಲ್ಲದಿರುವ ಕಡೆ ಈ ರೀತಿ ನಡೆಯುತ್ತದೆ” ಎಂದಿದ್ದಾರೆ.

ಬಾಲನ್

ವಕೀಲ ಬಾಲನ್ ಮಾತನಾಡಿ, “ಈ ದೇಶದಲ್ಲಿ 25 ಹೈಕೋರ್ಟ್‌ ಇವೆ. 2018-2023ರ ಅಂಕಿಅಂಶಗಳಂತೆ 860 ನ್ಯಾಯಾಧೀಶರಿದ್ದು, ಅವರಲ್ಲಿ 512 ಮಂದಿ ಬ್ರಾಹ್ಮಣರು. ಉಳಿದಂತೆ, ಹಿಂದುಳಿದ ವರ್ಗದವರು 11% ಅಂದರೆ 76 ಹುದ್ದೆಗಳು, ಎಸ್‌ಸಿ ಸಮುದಾಯವರು 3% ಹಾಗೂ ಆದಿವಾಸಿ ಸಮುದಾಯದವರು 1%. ಒಟ್ಟು ಪೋಸ್ಟ್‌ಗಳಲ್ಲಿ 70% ಬ್ರಾಹ್ಮಣರಿಗೆ ಸಿಕ್ಕದೆ. ನ್ಯಾಯಾಂಗವೂ ಬ್ರಾಹ್ಮಣ, ಕ್ಷತ್ರಿಯರ ಹಿಡಿತದಲ್ಲಿದೆ. ಎಲ್ಲ ಜನಾಂಗದವರಿಗೆ ಸಮಾನತೆ ಸಿಕ್ಕಿದ್ದರೆ, ಈ ರೀತಿಯ ತೀರ್ಪು ಬರುತ್ತಿರಲಿಲ್ಲ” ಎಂದರು.

“ಸಂವಿಧಾನದ ಪ್ರಕಾರ ತೀರ್ಪು ಕೊಡೊದು ಈಗ ಕಡಿಮೆ ಆಗಿದೆ. ಈಗೇನಿದ್ದರೂ ರಾಮಾಯಣ, ಮಹಾಭಾರತದ, ಏಕಲವ್ಯ, ಭಗವದ್ಗೀತಾ ಇದರ ಆಧಾರದ ಮೇಲೆ ತೀರ್ಪು ಬರುತ್ತಿದೆ. ಅಯೋಧ್ಯೆ ತೀರ್ಪು ಕೂಡ ಸಂವಿಧಾನದ ಪ್ರಕಾರ ಬಂದಿಲ್ಲ. ಮುಡಾ ಪ್ರಕರಣದಲ್ಲಿಯೂ ಕೂಡ 0% ಕೇಸ್‌ಅನ್ನು 100%ಗೆ ತಂದಿದ್ದಾರೆ. ಇ.ಡಿ ಅಂದರೆ ‘ಎಂಗೆಜ್ ಮೆಂಟ್ ಡೈರೆಕ್ಟೇರೇಟ್’ ಆಗಿದೆ. ಇವೆಲ್ಲವೂ ನಾಗಪುರ ಪ್ರಾಡಕ್ಟ್ಸ್‌. ಸಿದ್ದರಾಮಯ್ಯ ಅವರ ವಿರುದ್ಧ ಹೇಳೋಕೆ ಏನು ಇಲ್ಲ. ಆಸ್ತಿ ಖರೀದಿ ಮಾಡೋದು ತಪ್ಪಾ? ಶೂದ್ರರು ಜಮೀನು ಖರೀದಿ ಮಾಡಿದರೆ, ಅದು ತಪ್ಪು ಅಂತ ಮನುಸ್ಮೃತಿಯಲ್ಲಿ ಇದೆ. ಈಗ ಇ.ಡಿ ಕೂಡ ಶೂದ್ರರು ಜಮೀನು ಖರೀದಿ ಮಾಡಿರೋದೆ ತಪ್ಪು ಅಂತ ದಾಳಿ ಮಾಡಿದೆ. ಇನ್ನು ಹಲವು ಜನರ ಮೇಲೆ ಇರುವ ಕೇಸ್‌ಗಳು ಇನ್ನು ಪೆಂಡಿಂಗ್ ಇದೆ. ಆದರೆ, ಸಿಎಂ ವಿಚಾರದಲ್ಲಿ ಮಾತ್ರ ಮೆಣಸಿನಕಾಯಿ ಇಟ್ಟ ಹಾಗೇ ಆಗಿದೆ” ಎಂದಿದ್ದಾರೆ.

“ಇ.ಡಿಗೆ ಕಾನೂನು ಗೊತ್ತಿದಿಯಾ ಇಲ್ವಾ? ಬ್ಲಾಕ್ ಮನಿ, ವೈಟ್ ಮನಿ ಆದರೆ ಇ.ಡಿ ಬರಬೇಕು. ಭ್ರಷ್ಟಾಚಾರ, ಸ್ಮಗ್ಲಿಂಗ್ ಇದ್ದರೆ ಇ.ಡಿ ಬರಬೇಕು. ಆದರೆ, ಈ ವಿಚಾರದಲ್ಲಿ ಬ್ಲಾಕ್ ಇಲ್ಲಾ, ವೈಟ್‌ ಇಲ್ಲಾ, ಆದರೂ ಇ.ಡಿ ಬಂದಿದೆ. ಇದು ತಪ್ಪು. ನಿರ್ಮಲಾ ಸೀತಾರಾಮನ್ ಮೇಲೆ ನಾನೇ ಕೇಸ್ ಹಾಕಿದೀನಿ ಅದರಲ್ಲಿ ಬ್ಲಾಕ್ ಇದೆ, ವೈಟ್ ಇದೆ, ‘ಸ್ಟೇ’ನೂ ಇದೆ. ಆದರೆ, ಅಲ್ಲಿ ಇ.ಡಿ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂದರೆ ಹೋರಾಟ ಮಾಡಬೇಕು. ಹೋರಾಟ ಮಾಡೋದಕ್ಕೆ ವಿಷಯವೇ ಇಲ್ಲ. ಹಾಗಾಗಿ, ಇ.ಡಿ, ರಾಜ್ಯಪಾಲರನ್ನು ಹಿಡಿದುಕೊಂಡು ಈ ರೀತಿ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಹಿರಿಯ ವಕೀಲ ಶಿವಶಂಕರ್ ಯಡ್ರಾಮಿ ಮಾತನಾಡಿ, “ಬಿಜೆಪಿ ಕೇಂದ್ರ ಸರ್ಕಾರದಲ್ಲಿ ಬಂದಾಗಿನಿಂದ ಮಹಾರಾಷ್ಟ್ರದಲ್ಲಿ ಶಿವಸೇನಾ ಸೇರಿದಂತೆ ಒಬ್ಬೋಬ್ಬರಿಗೆ ಇಷ್ಟು ದುಡ್ಡು ಅಂತ ಕೊಟ್ಟು ಗೋವಾದಲ್ಲಿ ಮಧ್ಯಪ್ರದೇಶದಲ್ಲಿಯೂ ಕೂಡ ಈ ರೀತಿ ಮಾಡಿ ಸರ್ಕಾರ ಮಾಡಿದ್ದರು. ಅರ್‌ಎಸ್‌ಎಸ್‌ಗೆ 2%, 3% ಇರುವ ಬ್ರಾಹ್ಮಣರು ಇಡೀ ದೇಶವನ್ನ ಆಳಬೇಕು ಎಂಬುದು ಇದೆ. ಶೂದ್ರರು ಕಾಲಲ್ಲಿ ಇರಬೇಕು, ಶೂದ್ರರು ಉಗುಳಬೇಕು ಅಂದರೆ ಅವರು ಕುತ್ತಿಗೆಗೆ ಮಡಿಕೆ ಕಟ್ಟಿಕೊಳ್ಳಬೇಕು ಎಂಬುದು ಅವರ ಸಿದ್ಧಾಂತ. ಹೀಗಾಗಿ, ಅವರು ಜನರಲ್ಲಿ ಮೂಡನಂಬಿಕೆ ತುಂಬುತ್ತಿದ್ದಾರೆ. ಇತ್ತೀಚೆಗೆ, ವಚನ ದರ್ಶನ ಎಂಬುದನ್ನ ಮಾಡಿದ್ದಾರೆ. ನೀವು ಹಿಂದುಗಳು ಅಂತ ಒತ್ತಾಯವ ಪೂರ್ವಕವಾಗಿ ಲಿಂಗಾಯತರ ಮೇಲೆ ಆರ್‌ಎಸ್‌ಎಸ್ ಹೇರುತ್ತಿದೆ. ಸಾಮಾಜಿಕ ನ್ಯಾಯ ಜಾರಿಯಾದರೆ, ಮೂಲಭೂತವಾದಿಗಳಿಗೆ ಅವಕಾಶ ಇಲ್ಲ ಎಂಬುದು ಆರ್‌ಎಸ್‌ಎಸ್ ಪ್ರೇರಿತ ಬಿಜೆಪಿ ಆತಂಕ. ಸಿದ್ದರಾಮಯ್ಯ ಅವರಂತಹ ಮಾಸ್ ಲೀಡರ್ ಈ ದೇಶದಲ್ಲಿ ಯಾರು ಇಲ್ಲ. ಮುಡಾ ಪ್ರಕರಣ ಒಂದು ಹಗರಣವೇ ಅಲ್ಲ‌” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಿದ್ದರಾಮಯ್ಯರಗೆ ‘ಭ್ರಷ್ಟ’ರೆಂಬ ಹಣೆಪಟ್ಟಿ ಕಟ್ಟುವುದು ಮಾಧ್ಯಮಗಳ ವ್ಯಾದಿ: ನಿ. ನ್ಯಾ. ಬಾಬಾ ಸಾಹೇಬ್ ಜಿನರಾಳಕರ್

ಹಿರಿಯ ವಕೀಲ ಹನಿಷ್ ಪಾಷಾ ಮಾತನಾಡಿ, “ನಾವು ಎಂತಹ ಕಾಲಘಟ್ಟದಲ್ಲಿ ಇದ್ದೀವಿ ಎಂದರೆ, ನಮ್ಮ ಊರಿನಲ್ಲಿರುವ ಇರುವ ಗೋರಿಪಾಳ್ಯ ಬೇರೆ ದೇಶ ಆಗಿದೆ. ಪೊಲೀಸ್, ಇಡಿ, ಕಾನೂನುಗಳನ್ನ ದುರ್ಬಳಕೆ ಮಾಡಿಕೊಂಡು ಸಾಮಾಜಿಕ ನ್ಯಾಯವನ್ನ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನೂ ಇಲ್ಲ ಎಂಬುದು ಮೆಲ್ನೋಟಕ್ಕೆ ಗೊತ್ತಾಗುತ್ತಿದೆ. ಆದರೂ, ಕೂಡ ಅವರನ್ನ ಶತಾಯಗತಾಯ ಈ ಪ್ರಕರಣದಲ್ಲಿ ತಗಲು ಹಾಕುತ್ತಿದ್ದಾರೆ. ಈ ತೀರ್ಪಿನ ವಿರುದ್ದ ಅಪೀಲು ಹಾಕಬೇಕಿದೆ. ಒಬ್ಬ ಪ್ಯಾಲೇಸ್ಟಿನ್ ಸ್ಟಿಕರ್ ಹಾಕಿದ್ರೆ, ಆತನನ್ನ ಕೂಡಲೇ ಜೈಲಿಗೆ ಕಳುಹಿಸುತ್ತಾರೆ. ಅದೇ ಮುಸ್ಲಿಂ ಏರಿಯಾಗೆ ನುಗ್ಗುತ್ತೀವಿ ಎಂದು ಹೇಳಿಕೆ ನೀಡುವ ವ್ಯಕ್ತಿಯ ವಿರುದ್ದ ಯಾವುದೇ ಪ್ರಕರಣ ದಾಖಲಾಗುವುದಿಲ್ಲ” ಎಂದಿದ್ದಾರೆ.

ಕೆಪಿಸಿಸಿ ಮಾಧ್ಯಮ ವಿಭಾಗದ ರಮೇಶ್ ಬಾಬು ಮಾತನಾಡಿ, “ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗಿನಿಂದಲೂ ಕೂಡ ಅದನ್ನ ಸಹಿಸದವರು ಅವರನ್ನ ಕೆಳಗಿಳಿಸಲು ತಂತ್ರ ಹೆಣೆಯುತ್ತಲೇ ಬಂದಿದ್ದಾರೆ. ಇದೇ ಅಬ್ರಹಾಂ ಅವರು ಕುಮಾರಸ್ವಾಮಿ, ದೇವೆಗೌಡ ಅವರ ಮೇಲೆ ಕೇಸ್ ಹಾಕಿದ್ದಾರೆ. ಆದರೆ, ಅವರ ಮೇಲೆ ಹಾಕಿರುವ ಪ್ರಕರಣಗಳು ಇನ್ನು ಕೂಡ ರಾಜ್ಯಪಾಲರ ಕಚೇರಿಯಲ್ಲೇ ಇವೆ. ಹಿಂದುಳಿದ ವರ್ಗದವರ ಮೇಲೆ ಈ ರೀತಿಯ ತಂತ್ರ ಹೆಣೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ನೋಟೀಸ್ ಕೊಡುವ ಮುಂಚೆ ಲೀಗಲ್ ಒಪಿನೀಯನ್ ತಗೊಂಡಿಲ್ಲ. ರಾಜ್ಯಪಾರು ನೋಟೀಸ್ ಕೊಡುವ ಹಿಂದಿನ ದಿನ ಜಸ್ಟೀಸ್ ಪದ್ಮರಾಜ್ ಅವರನ್ನು ಅಪಾಯಿಂಟ್ ಮಾಡಲಾಗಿದೆ. ಇನ್ನು ಫೊಕ್ಸೋ ಪ್ರಕರಣದಲ್ಲಿ ಬೇಲ್ ಕೊಡುವಂತಿಲ್ಲ. ಆದರೆ, ಯಡಿಯೂರಪ್ಪ ಅವರಿಗೆ ಜಾಮೀನು ನೀಡಲಾಗಿದೆ. ನ್ಯಾಯಾಲಯಗಳನ್ನ ಜನ ಸಾಮಾನ್ಯರು ಯಾವ ರೀತಿ ನೋಡಬೇಕು. ನ್ಯಾಯಾಂಗದಲ್ಲಿ ಪಕ್ಷಪಾತವಾದ ತೀರ್ಪುಗಳು ಬಂದರೆ, ಜನರಿಗೆ ನ್ಯಾಯಾಂಗದ ಮೇಲೆ ನಂಬಿಕೆ ಹೋಗುತ್ತದೆ. ಈಗ ಬಂದಿರುವ ತೀರ್ಪು ನ್ಯಾಯಾಲಯದ ವ್ಯಾಪ್ತಿಯನ್ನ ಮೀರಿ ಬಂದಿರುವ ತೀರ್ಪು” ಎಂದಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

ಬೆಂಗಳೂರು ಮೆಟ್ರೋ: ನಾಳೆ ಹಳದಿ ಮಾರ್ಗದಲ್ಲಿ ಬೆಳಿಗ್ಗೆ 5ಕ್ಕೆ ಸಂಚಾರ ಆರಂಭ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಹಳದಿ ಮಾರ್ಗದಲ್ಲಿ ಸೋಮವಾರ...

Download Eedina App Android / iOS

X