ಬೆಂಗಳೂರು | ಹಲ್ಲೆಯ ಸುಳ್ಳು ಕತೆ ಕಟ್ಟಿದ್ದ ವಿಂಗ್‌ ಕಮಾಂಡರ್‌ ವಿರುದ್ಧ ಕೊಲೆ ಯತ್ನ ಪ್ರಕರಣ

Date:

Advertisements

ಸುಳ್ಳು ಕಥೆ ಕಟ್ಟಿದ ವಿಂಗ್‌ ಕಮಾಂಡರ್‌ ವಿರುದ್ಧ ಕೊನೆಗೂ ಎಫ್‌ಐಆರ್‌ ದಾಖಲಾಗಿದೆ. ಹಲ್ಲೆಗೆ ಒಳಗಾದ ಟೆಕಿ ವಿಕಾಸ್‌ ನೀಡಿದ ದೂರಿನ ಆಧಾರದಲ್ಲಿ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಕಾರಿನ ನಂಬರ್‌ ಆಧಾರದಲ್ಲಿ ಶಿಲಾದಿತ್ಯಾ ಬೋಸೆ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ ಅಡಿ ಪ್ರಕರಣ ದಾಖಲಾಗಿದೆ.

ಬಿಎನ್‌ಎಸ್ 109(ಕೊಲೆಯತ್ನ), 115(2)(ಮಾರಣಾಂತಿಕ ಹಲ್ಲೆ), 304 (ಬಲವಂತವಾಗಿ ಮೈ ಮೇಲೆ ಇರುವ ವಸ್ತು ಕಿತ್ತುಕೊಳ್ಳುವುದು), 324 (ಅರಿವಿಗೆ ಇದ್ದರೂ ವಸ್ತುಗಳನ್ನು ಉದ್ದೇಶ ಪೂರಕವಾಗಿ ಹಾಳು ಮಾಡುವುದು), 352 (ಶಾಂತಿ ಭಂಗ)ಸೆಕ್ಷನ್‌ ಅಡಿ ಎಫ್‌ಐಆರ್‌ ದಾಖಲಾಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಸಂವಿಧಾನವೇ ಸಾರ್ವಭೌಮ’ ಎನ್ನುವ ಸತ್ಯ ಮರೆತರೇ ಧನಕರ್?

Advertisements

ಸೋಮವಾರ ಬೆಳಗ್ಗೆ ಸ್ನೇಹಿತನ ಬೈಕ್ ವಾಪಸ್ ನೀಡಲು ನಾನು ಹೋಗುತ್ತಿದ್ದೆ. ಟಿನ್‌ ಫ್ಯಾಕ್ಟರಿಯ ಬಳಿ ಬೈಕ್‌ಗೆ ಕಾರು ತಾಗಿದೆ. ಇದಕ್ಕೆ ಕಾರನ್ನು ಅಡ್ಡ ಹಾಕಿ ಗುದ್ದಿದ್ದು ಯಾಕೆ ಎಂದು ಕೇಳಿದೆ. ಪ್ರಶ್ನೆ ಮಾಡಿದ್ದಕ್ಕೆ ಕಾರಿನಲ್ಲಿದ್ದ ವ್ಯಕ್ತಿ ಕಾಲಿನಿಂದ ಒದ್ದು ಬೈಕನ್ನು ಕೆಳಗೆ ಬೀಳಿಸಿದ್ದಾನೆ.

ನಾನು ಆಕ್ಷೇಪ ವ್ಯಕ್ತಪಡಿಸಿದಾಗ ನಿರಂತರವಾಗಿ ಹಲ್ಲೆ ಮಾಡಿದ್ದಾನೆ. ಸ್ನೇಹಿತನಿಗೆ ಕರೆ ಮಾಡಲು ಮುಂದಾದಾಗ ಮೊಬೈಲ್ ಎಸೆದಿದ್ದಾನೆ. ಜೊತೆಗೆ ಬೈಕ್‌ ಕೀ ಎಸೆಯುತ್ತಾನೆ. ಕುತ್ತಿಗೆ ಹಿಡಿದು ಸಾಯಿಸಲು ಯತ್ನಿಸಿದ್ದ ಎಂದು ವಿಕಾಸ್‌ ದೂರು ನೀಡಿದ್ದಾರೆ. ಈ ಮೊದಲು ವಿಂಗ್‌ ಕಮಾಂಡರ್‌ ತನ್ನ ಮೇಲೆ ಹಲ್ಲೆಯಾಗಿರುವುದಾಗಿ ಸುಳ್ಳಿನ ಕತೆ ಕಟ್ಟಿದ್ದ. ದೂರಿನ ಆಧಾರದ ಮೇಲೆ ಟೆಕಿ ವಿಕಾಸ್‌ ಅವರನ್ನು ಕೂಡ ಬಂಧಿಸಲಾಗಿತ್ತು.

ವಿಂಗ್ ಕಮಾಂಡರ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ವಿಂಗ್ ಕಮಾಂಡರ್ ಮಾಡಿದ್ದ ವಿಡಿಯೋದಲ್ಲಿ ಅವರ ಹಣೆಯಿಂದ ರಕ್ತ ಸೋರುತ್ತಿತ್ತು. ಯುವಕ ವಿಕಾಸ್ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಈ ರೀತಿಯಾಗಿದೆ ಎಂದು ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಬಿಂಬಿಸಿದ್ದರು. ಆದರೆ ಅಸಲಿ ಕಾರಣವೇ ಬೇರೆ ಇದೆ. ವಿಕಾಸ್‌ಗೆ ಡಿಚ್ಚಿ ಹೊಡೆಯಲು ಹೋಗಿ ವಿಂಗ್ ಕಮಾಂಡರ್ ಹಣೆಯಲ್ಲಿ ರಕ್ತ ಬರಿಸಿಕೊಂಡಿದ್ದಾರೆ.

ಗಲಾಟೆ ನಡೆದ ಸಂದರ್ಭ ವಿಂಗ್‌ ಕಮಾಂಡರ್‌ ಬೈಕ್‌ ಅನ್ನು ಬೀಳಿಸಿದ್ದಾರೆ. ಈ ವೇಳೆ ವಿಕಾಸ್‌ ಬೈಕ್‌ ಕೀಯನ್ನು ಬೈಕಿನಿಂದ ತೆಗೆದು ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದರು. ರೊಚ್ಚಿಗೆದ್ದ ವಿಂಗ್‌ ಕಮಾಂಡರ್ ವಿಕಾಸ್‌ಗೆ ಡಿಚ್ಚಿ ಹೊಡೆಯಲು ಹೋದ ಸಂದರ್ಭ ವಿಕಾಸ್ ಕೈಯಲ್ಲಿದ್ದ ಗಾಡಿ ಕೀ ವಿಂಗ್ ಕಮಾಂಡರ್ ಹಣೆಗೆ ತಗುಲಿ ರಕ್ತ ಬಂದಿದೆ. ಇದನ್ನೇ ಸಿಂಪತಿ ವಿಡಿಯೋಗೆ ಬಳಸಿಕೊಂಡ ವಿಂಗ್ ಕಮಾಂಡರ್, ದೇವರು ನನಗೆ ಪವರ್ ಕೊಟ್ಟಿರೋದು ಸೇಡು ತೀರಿಸಿಕೊಳ್ಳಲು ಅಲ್ಲ ಎಂದು ಸುಳ್ಳು ಹೇಳಿದ್ದಾರೆ.

ಭಾಷೆಯ ವಿಚಾರ ಹಾಗೂ ಸ್ಥಳೀಯರು ಯಾರೂ ನನ್ನ ನೆರವಿಗೆ ಬರಲಿಲ್ಲ ಎಂದು ವಿಂಗ್ ಕಮಾಂಡರ್ ವೀಡಿಯೋ ಮಾಡಿ ಸಿಂಪತಿಗಿಟ್ಟಿಸಿಕೊಳ್ಳಲು ಯತ್ನಿಸಿದ್ದಾರೆ. ವಿಂಗ್ ಕಮಾಂಡರ್ ಕಾರಿನ ಡ್ಯಾಶ್‌ಕ್ಯಾಮೆರಾ ವೀಡಿಯೋ ಬಿಡುಗಡೆ ಮಾಡದೇ ಹಲ್ಲೆಯ ವಿಡಿಯೋ ಅಷ್ಟೆ ಅಪ್ಲೋಡ್ ಮಾಡಿದ್ದರು. ಸಿಸಿಟಿವಿ ದೃಶ್ಯಗಳು ಬೆಳಕಿಗೆ ಬರುತ್ತಿದ್ದಂತೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಮುಖವಾಡ ಕಳಚಿದೆ.

ವಿಕಾಸ್ ಪಕ್ಕೆಲುಬುಗಳಿಗೆ ವಿಂಗ್ ಕಮಾಂಡರ್ ಕಾಲಿನಿಂದ ಒದ್ದಿರುವ ಹಿನ್ನೆಲೆ ವಿಕಾಸ್ ಪಕ್ಕೆಲುಬು ನೋವಿನಿಂದ ಬಳಲುತ್ತಿದ್ದಾರೆ. ಸದ್ಯ ಹಲ್ಲೆಗೊಳಗಾದ ವಿಕಾಸ್ ಪರ ಹಲವು ಕನ್ನಡಪರ ಸಂಘಟನೆಗಳು ನಿಂತಿವೆ. ಸೋಮವಾರ ಸಂಜೆಯಿಂದಲೇ ಶಿಲಾದಿತ್ಯ ಬೋಸ್ ಬಂಧನಕ್ಕೆ ಆಗ್ರಹ ವ್ಯಕ್ತವಾಗಿತ್ತು. ವಿಕಾಸ್‌ಗೆ ಕಾನೂನಿನ ನೆರವು ನೀಡಲು ಸಂಘಟನೆಗಳು ಮುಂದಾಗಿವೆ. ಇದೀಗ ವಿಕಾಸ್ ನೀಡಿದ ದೂರನ್ನು ಸ್ವೀಕರಿಸಿದ ಬೈಯಪ್ಪನಹಳ್ಳಿ ಪೊಲೀಸರು ವಿಂಗ್ ಕಮಾಂಡರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

ಬೆಂಗಳೂರು ಮೆಟ್ರೋ: ನಾಳೆ ಹಳದಿ ಮಾರ್ಗದಲ್ಲಿ ಬೆಳಿಗ್ಗೆ 5ಕ್ಕೆ ಸಂಚಾರ ಆರಂಭ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಹಳದಿ ಮಾರ್ಗದಲ್ಲಿ ಸೋಮವಾರ...

Download Eedina App Android / iOS

X