ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಐದು ವರ್ಷದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಬೆಂಗಳೂರು ಐಟಿ ಹಬ್ನ ಹೊರವಲಯದಲ್ಲಿರುವ ನಿರ್ಜನ ಪ್ರದೇಶವಾದ ಹೆಲಿಪ್ಯಾಡ್ ಪ್ರದೇಶದ ಬಳಿ ಇರಿಸಲಾಗಿದ್ದ ಬೋನಿನಲ್ಲಿ ಚಿರತೆ ಸಿಕ್ಕಿಬಿದ್ದಿದೆ.
ಅರಣ್ಯ ಇಲಾಖೆ ಸೆರೆ ಸಿಕ್ಕ ಚಿರತೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸುವ ನಿರೀಕ್ಷೆ ಇದೆ.
ಟೆಕ್ ಹಬ್ನಲ್ಲಿ ಚಿರತೆ ಇರುವುದು ಬೆಳಕಿಗೆ ಬಂದ ನಂತರ ಅರಣ್ಯಾಧಿಕಾರಿಗಳು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಚಿರತೆಯ ಚಲನವಲನವನ್ನು ಪತ್ತೆಹಚ್ಚಲು ವಿವಿಧ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು ಮತ್ತು ಥರ್ಮಲ್ ಡ್ರೋನ್ಗಳನ್ನು ನಿಯೋಜಿಸಲಾಗಿತ್ತು.
ಇದನ್ನು ಓದಿದ್ದೀರಾ? ರಾಯಚೂರು | ಕಲ್ಲೂರು ಗ್ರಾಮಕ್ಕೆ ದಾಳಿ ನಡೆಸಿ ಮೇಕೆ ತಿಂದ ಚಿರತೆ; ಜನರಲ್ಲಿ ಆತಂಕ
ಮುಂಜಾನೆ 3 ಗಂಟೆಗೆ ಚಿರತೆಯೊಂದು ಟೋಲ್ ಪ್ಲಾಜಾ ಬಳಿ ಫ್ಲೈಓವರ್ ರಸ್ತೆ ದಾಟುತ್ತಿರುವುದನ್ನು ತೋರಿಸುವ ವಿಡಿಯೋ ವೈರಲ್ ಆದ ಒಂದು ವಾರದ ನಂತರ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಇನ್ನು ಚಿರತೆ ಕಾಣಿಸಿಕೊಂಡ ನಂತರ ಟೆಕ್ ಹಬ್ನ ನಿವಾಸಿಗಳಿಗೆ ಹೆಚ್ಚಿನ ಎಚ್ಚರಿಕೆ ನೀಡಲಾಗಿತ್ತು.
ಇನ್ನು ಜಿಗಣಿಯಲ್ಲಿ ಈ ತಿಂಗಳ ಆರಂಭದಲ್ಲಿ ಕಾಣಿಸಿಕೊಂಡ ಚಿರತೆಯೇ ಇದು ಆಗಿರಬಹುದು ಎಂದು ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.
Forest department officials capture a leopard near Electronic City in Bengaluru. Time to declare all areas around Bengaluru as ecologically sensitive zone and stop all development activities. Stop lecturing people of Western Ghats, focus on your own Bengaluru “environmentalists”. pic.twitter.com/C5jjMxsKBp
— DP SATISH (@dp_satish) September 25, 2024
