ಮಾನವ ಬಂಧುತ್ವ ವೇದಿಕೆಯಂತಹ ಸಂಘಟನೆಗಳು ತರಗತಿಯ ಹೊರಗೆ ನಿಜ ಶಿಕ್ಷಣ ನೀಡುತ್ತಿವೆ: ದಿನೇಶ್ ಅಮೀನ್ ಮಟ್ಟು

Date:

Advertisements

ಬಹಳಷ್ಟು ವಿದ್ಯಾವಂತರಲ್ಲೂ ಸಹ ಮೂಢನಂಬಿಕೆ ಅಧಿಕವಾಗಿದೆ. ಅದು ನಮ್ಮ‌ ಶಿಕ್ಷಣದ ವೈಪಲ್ಯವಾಗಿರಬಹುದು.‌ಶಿಕ್ಷಿತರಲ್ಲಿ ಇರುವಷ್ಟು ಮೂಢರು ,ಭ್ರಷ್ಟರು ಅವಿದ್ಯಾವಂತರಲ್ಲಿ ಇಲ್ಲ. ಈಗ ಕೇವಲ ಸರ್ಟಿಫಿಕೇಟ್‌ಗಾಗಿ ಕೊಡುವ ಶಿಕ್ಷಣವಾಗಿದೆ. ಹಾಗಾಗಿ ತರಗತಿಗಳ ಹೊರಗೆ ಮಾನವ ಬಂಧುತ್ವ ವೇದಿಕೆಯಂತಹ ಸಂಘಟನೆಗಳು ನೀಡುವ ಶಿಕ್ಷಣ ದೊಡ್ಡದು ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು.

ಮಾನವ ಬಂಧುತ್ವ ವೇದಿಕೆ ಪ್ರಾರಂಭವಾಗಿ ಹತ್ತು ವರ್ಷಗಳಾಗಿದ್ದು ಇದೆ ಫೆಬ್ರವರಿ 2ರಂದು ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರಯುಕ್ತ ಬೆಂಗಳೂರು ನಗರ ಹಾಗೂ ಸುತ್ತಲಿನ ಜಿಲ್ಲೆಗಳ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ದಿನೇಶ್ ಅಮಿನ್ ಮಟ್ಟು ಅವರು ಮುಖ್ಯ ಅತಿಥಿಗಳಾಗಿ ಭಾಗವಹಸಿ ಮಾತಾನಾಡುತ್ತಾ ಸತೀಶ್ ಜಾರಕಿಹೊಳಿಯವರು ಕೇವಲ ಭಾಷಣಗಳನ್ನು ಮಾಡದೆ ನುಡಿದಂತೆ ನಡೆಯುತ್ತಾ ಹೋಗುತ್ತಿದ್ದಾರೆ. ನಾನು ರಾಜಕಾರಣಿಗಳು ಮತದಾರರಿಗಿಂತ ಮೂಢಮತಿಗಳಾಗಿ ಇರುವುದನ್ನು ನೋಡಿದ್ದೇನೆ, ಜಾರಕಿಹೊಳಿಯವರು ತಾವೆ ಸ್ಮಶಾನದಲ್ಲಿ ಕುಳಿತು ಮೂಢ ನಂಬಿಕೆಗಳ ವಿರುದ್ಧ ಹೋರಾಟ ಮಾಡಿದ್ದಾರೆ. ಹೆಚ್ಚು ಹಳ್ಳಿಗಾಡಿನವರು, ಶೋಷಿತರು ಹೆಚ್ಚು ಹೆಚ್ಚು ಮಾನವ ಬಂಧುತ್ವ ವೇದಿಕೆಯಲ್ಲಿ ಇರುವುದರಿಂದ ನನ್ನವರು ಮುನ್ನೆಡೆಸುತ್ತಿದ್ದಾರೆ ಎಂಬ ಭಾವನೆ ಬರುತ್ತದೆ. ಹಾಗಾಗಿ ನಾನು ಹೆಚ್ಚು ಮಾನವ ಬಂಧುತ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಸಂವಿಧಾನದಿಂದ ಎಲ್ಲವನ್ನೂ ಪಡೆದವರು ಇಂದು ಸಂವಿಧಾನದ ವಿರುದ್ಧ ದ್ರಾಷ್ಟ್ಯದಿಂದ ಮಾತನಾಡುತ್ತಿದ್ದಾರೆ ಎಂದರೆ ಅದು ನಮ್ಮಂತಹವರ ವೈಫಲ್ಯ ಎಂದರು.

ಮಾನವ ಬಂಧುತ್ವ ವೇದಿಕೆಯ ಮುಖಂಡರಾದ ಅನಂತ್ ನಾಯ್ಕ್ ಮಾತನಾಡಿ ಸಂವಿಧಾನದ ಆಶಯಗಳಿಗೆ ಪೂರಕವಾಗಿ ಸಂಘಟನೆ ನಡೆದುಕೊಂಡು ಬಂದಿದ್ದೇವೆ ಹಾಗಾಗಿಯೇ ದಶಮಾನೋತ್ಸವವನ್ನು ಸಂವಿಧಾನ ಸಂಕಲ್ಪ ದಿನ ಎಂದು ಕರೆದಿದ್ದೇವೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ 6 ವಿಭಾಗಿಯ ಸಭೆಗಳು ನಡೆಯಲಿವೆ ಹಾಗೂ ಎಲ್ಲಾ ಜಿಲ್ಲೆಗಳಲ್ಲೂ ಪೂರ್ವಭಾವಿ ಸಭೆ ನಡೆಯಲಿದೆ. ಲಕ್ಷಾಂತರ ಜನ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ. ಎಂದರು. ಕಾರ್ಯಕ್ರಮ ವಿನೂತನವಾಗಿ ಇರಲಿದ್ದು ಸಂವಿಧಾನ ಪಥಸಂಚಲನ ನಡೆಯಲಿದೆ. ವೈಜ್ಞಾನಿಕ ಮನೋಬಾವ ಬೆಳೆಸುವ ಕಲೆ, ಸಾಂಸ್ಕೃತಿಕ ಪ್ರದರ್ಶನಗಳು ಇರಲಿವೆ.

Advertisements

ಮಾನವ ಬಂಧುತ್ವ ವೇದಿಕೆ ಸತೀಶ್ ಜಾರಕಿಹೊಳಿಯವರ ನೇತ್ರತ್ವದಲ್ಲಿ ಈಗಾಗಲೇ 5 ಯುವಜನರ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿಂದ ಸಾವಿರಾರು ಮಂದಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಪಡೆದಿದ್ದಾರೆ. ನಾಗರಪಂಚಮಿಯನ್ನು ಬಸವ ಪಂಚಮಿಯಾಗಿಸಿ ಬಡಜನರಿಗೆ ಹಾಲು ಹಂಚುವ ಕೆಲಸ ಈಗ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಿದೆ. ಸಾವಿತ್ರಿ ಬಾ ಫುಲೆ ಜನುಜಯಂತಿಯನ್ನು ನೂರಾರು ಹಳ್ಳಿಗಳಲ್ಲಿ ಮಾಡಲಾಗುತ್ತಿದೆ. ಮೂಡನಂಬಿಕೆ ವಿರೋಧಿ ಆಂದೋಲನ , ಹಾಗೂ ಜನಪರ ಸಂಘಟನೆಗಳಿಗೆ ಬೆಂಬಲವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಮೈಸೂರು ವಿಭಾಗಿಯ ಸಂಚಾಲಕಿ ಲೀಲಾಸಂಪಿಗೆ ವಹಿಸಿದ್ದರು. ಮುಖಂಡರಾದ ರುದ್ರಪ್ಪ ಹನಗವಾಡಿ, ಡಾ.ರಾಜಾನಾಯಕ, ಬಸವರಾಜ್ ಈ, ಕರುಣಾಕರ್, ವೀರಣ್ಣ, ಜನಾರ್ಧನ್ ಕೆಸರಗದ್ದೆ, ರವೀಂದ್ರನಾಯ್ಕ, ಶಿವರಾಜ್ ಅಲ್ಬೂರ್ ,ಕರಿಯನಿಷಾದ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಂವಿಧಾನ ಪೀಠಿಕೆಯ‌ನ್ನು ಓದಲಾಯಿತು. ಹಾಗೂ ಇತ್ತಿಚಿಗೆ ಅಗಲಿದ ಹಿರಿಯರಾದ ಮುಜಾಫರ್ ಅಸ್ಸಾದಿ, ಬಯ್ಯಾರೆಡ್ಡಿ, ನಾ.ಡಿಸೋಜಾ ಅವರಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

ಬೆಂಗಳೂರು ಮೆಟ್ರೋ: ನಾಳೆ ಹಳದಿ ಮಾರ್ಗದಲ್ಲಿ ಬೆಳಿಗ್ಗೆ 5ಕ್ಕೆ ಸಂಚಾರ ಆರಂಭ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಹಳದಿ ಮಾರ್ಗದಲ್ಲಿ ಸೋಮವಾರ...

Download Eedina App Android / iOS

X