ಮೋಹನ್‌ದಾಸ್‌ ಪೈ ನೀಡಿದ ಸಂಚಾರಿ ಉಲ್ಲಂಘನೆ ಸಮಸ್ಯೆಯ ಸಲಹೆಗೆ ನೆಟ್ಟಿಗರು ಏನಂದ್ರು?

Date:

Advertisements

ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್‌ ಪೈ ಇತ್ತೀಚಿಗೆ ಬೆಂಗಳೂರಿನ ಸಂಚಾರಿ ಉಲ್ಲಂಘನೆಗೆ ನಗರ ಪೊಲೀಸರಿಗೆ ಒಂದು ಸಲಹೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ವಿಚಿತ್ರವಾದ ಸಲಹೆಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

“ಬೆಂಗಳೂರು ಪೊಲೀಸರು ಸಂಚಾರಿ ಉಲ್ಲಂಘನೆ ತಡೆಗೆ ವಿಯೆಟ್ನಾಂ ದೇಶದ ಹೊಸ ಪದ್ಧತಿ ಅಳವಡಿಸಿಕೊಳ್ಳಬೇಕು. ಸಂಚಾರಿ ಉಲ್ಲಂಘನೆಯನ್ನು ವರದಿ ಮಾಡುವ ನಾಗರಿಕರಿಗೆ ಬಹುಮಾನವನ್ನು ನೀಡಬೇಕು. ಸಂಚಾರಿ ಉಲ್ಲಂಘನೆ ಮಾಡುವ ಸವಾರರು ಪಾವತಿಸುವ ದಂಡದಲ್ಲಿ ಶೇ. 10ರಷ್ಟು ಹಣವನ್ನು ಉಲ್ಲಂಘನೆಯ ಮಾಹಿತಿ ನೀಡುವವರಿಗೆ ಬಹುಮಾನವಾಗಿ ನೀಡಬೇಕು ಎಂದಿದ್ದರು. ನಗರದಲ್ಲಿ ಇಂತಹ ನಿಯಮಗಳು ಅತ್ಯಗತ್ಯವಿದೆ” ಎಂದು ಮೋಹನ್‌ದಾಸ್‌ ಅವರು ಪೋಸ್ಟ್‌ ಮಾಡಿ ಗೃಹ ಸಚಿವ ಜಿ ಪರಮೇಶ್ವರ್‌ ಅವರಿಗೂ ಟ್ಯಾಗ್‌ ಮಾಡಿದ್ದರು.

ಮೋಹನ್‌ದಾಸ್‌ ಟ್ವೀಟ್‌ಗೆ ಕೆಲವು ನೆಟ್ಟಿಗರು ಗಂಭೀರ ಪ್ರತಿಕ್ರಿಯೆ ನೀಡಿದರೆ, ಇನ್ನೂ ಕೆಲವರು ತಮಾಷೆಯ ಉತ್ತರ ನೀಡಿದ್ದಾರೆ. ಮೋಹನ್‌ದಾಸ್‌ ಅವರ ಸಲಹೆ ಹೊರ ರಾಜ್ಯಗಳ ಸವಾರರನ್ನು ನೇರವಾಗಿ ಗುರಿ ಮಾಡುತ್ತದೆ. ಬಹುತೇಕ ಅವರುಗಳೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಾರೆ ಎಂದು ಒಂದಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ರಿಕೆಟ್ ಕೇಸರಿಕರಣ, ಪರಿಶುದ್ಧ ಆಟ ಅಂತರ್ಧಾನ

“ಹೌದು, ನಮ್ಮಲ್ಲಿ ಅನೇಕ ನಿರುದ್ಯೋಗಿ ಯುವಕರಿದ್ದಾರೆ. ಈ ನೂತನ ಯೋಜನೆಯಿಂದ ಒಂದಷ್ಟು ಅನುಕೂಲವಾಗಲಿದೆ” ಎಂದಿದ್ದಾರೆ. “ಉಲ್ಲಂಘನೆ ವಿಷಯ ತಿಳಿಸುವ ವ್ಯಕ್ತಿ ಅಪರಿಚಿತನಾಗಿರಬೇಕು. ಆತನ ಹೆಸರನ್ನು ಗೌಪ್ಯವಾಗಿಡಬೇಕು” ಎಂದು ಪೋಸ್ಟ್‌ ಮಾಡಿದ್ದಾರೆ.

“ನಮಗೆ ಇಂತಹ ನಿಯಮಗಳ ಅಗತ್ಯವಿದೆ. ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ, ಜೀಬ್ರಾ ಕ್ರಾಸಿಂಗ್‌ಗಳಲ್ಲಿ ಹಾಗೂ ಮುಂತಾದ ಪ್ರಮುಖ ಸ್ಥಳಗಳಲ್ಲಿ” ಈ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಕೆಲವು ಟ್ವಿಟ್ಟಿಗರು ಪೋಸ್ಟ್‌ ಮಾಡಿದ್ದಾರೆ.

“ನಾವು ಹಲವು ಆಪ್‌ಗಳಿಂದ ಸಾಕಷ್ಟು ಗಣ ಗಳಿಸುತ್ತಿದ್ದೇವೆ. ಇಂತಹ ಯೋಜನೆಗಳಿಂದ ನಮ್ಮ ಜೇಬನ್ನು ಮತ್ತಷ್ಟು ಭರ್ತಿ ಮಾಡಿಕೊಳ್ಳುತ್ತೇವೆ. ಹಣ ಗಳಿಸುವ ಇಂತಹ ಹಲವು ನಿಯಮಗಳು ನಗರದ ಯುವಕರಿಗೆ ಅಗತ್ಯವಿದೆ” ಎಂದು ತಮಾಷೆ ರೀತಿಯಲ್ಲಿ ಉತ್ತರ ನೀಡಿದ್ದಾರೆ.

ವಿಯೆಟ್ನಾಂನಲ್ಲಿ ಟ್ರಾಫಿಕ್ ಉಲ್ಲಂಘನೆ ನಿಯಂತ್ರಿಸಲು, ನಿಯಮ ಪಾಲಿಸುವಂತೆ ಮಾಡಲು ಸ್ನಿಚ್ ನಿಯಮ ಜಾರಿಗೆ ತರಲಾಗಿದೆ. ಹೊಸ ವರ್ಷದ ಆರಂಭದಿಂದ ಹೊಸ ನಿಯಮ ಜಾರಿಗೆ ತರಲಾಗಿದೆ. ರಸ್ತೆ ಸುರಕ್ಷತೆ, ನಿಯಮ ಪಾಲನೆ, ಟ್ರಾಫಿಕ್ ನಿಯಮ ಉಲ್ಲಂಘನೆಗಳ ಸಮಸ್ಯೆಗೆ ಮುಕ್ತಿ ಹಾಡಲು ವಿಯೆಟ್ನಾಂ ಸ್ನಿಚ್ ಲಾ ಜಾರಿಗೆ ತಂದಿದೆ. ಈ ನಿಯಮದಲ್ಲಿ ಪ್ರತಿಯೊಬ್ಬರು ಹಣ ಗೆಲ್ಲುವ ಅವಕಾಶ ಪಡೆಯುತ್ತಾರೆ. ಈ ಟ್ರಾಫಿಕ್ ನಿಯಮ ಉಲ್ಲಂಘನೆ ಸೂಚನೆ ನೀಡಿದವರಿಗೆ 200 ಅಮೆರಿಕನ್ ಡಾಲರ್‌ವರೆಗೂ ಬಹುಮಾನದ ಹಣ ನೀಡಲಾಗುತ್ತದೆ.

ಜನವರಿ 1, 2025ರಿಂದ ಈ ಹೊಸ ನಿಯಮ ಜಾರಿಗೆ ಬಂದಿದೆ. ವಿಯೆಟ್ನಾಂನಲ್ಲಿ ಜಾರಿಗೊಳಿಸಿರುವ ನೂತನ ನಿಯಮದಿಂದ ಸಂಚಾರಿ ಸಮಸ್ಯೆ ಪರಿಹಾರವಾಗಿರುವ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

ಬೆಂಗಳೂರು ಮೆಟ್ರೋ: ನಾಳೆ ಹಳದಿ ಮಾರ್ಗದಲ್ಲಿ ಬೆಳಿಗ್ಗೆ 5ಕ್ಕೆ ಸಂಚಾರ ಆರಂಭ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಹಳದಿ ಮಾರ್ಗದಲ್ಲಿ ಸೋಮವಾರ...

Download Eedina App Android / iOS

X